ರಾಯಚೂರು,ಫೆ.೨೫- ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ನಿವೇಶನ ಕುರಿತು ನಡೆದಿರುವ ಆಡಳಿತಾತ್ಮಕ ಕ್ರಮಗಳ ಕುರಿತು ಲೋಕಾಯುಕ್ತ ವಿಚಾರಣೆಯಲ್ಲಿ ಮಾಹಿತಿ ನೀಡಿದ್ದೇನೆ. ಆದರೂ ಕರ್ತವ್ಯ ಲೋಪವೆಂದು ಗುರುತಿಸಿದರೆ ಎದುರಿಸಲು ಸಿದ್ದವೆಂದು ಸಂಸದ ಜಿ.ಕುಮಾರನಾಯಕ ಹೇಳಿದರು.
ಅವರಿಂದು ಭೇಟಿಯಾದ ಮಾಧ್ಯಮಗಳೊಂದಿಗೆಮಾತನಾಡಿ ಮುಡಾ ಪ್ರಕರಣಕ್ಕೆ ಸಂಬಂದಿಸಿದಂತೆ ಲೋಕಾಯುಕ್ರರು ನೀಡಿರುವ ವರದಿ ನೋಡಿಲ್ಲ.ನಾವು ಯಾವುದೇ ನಿಯಮ ಬಾಹಿರವಾಗಿ ಕೆಲಸ ಮಾಡಿಲ್ಲ.
ಇನ್ನೂ ಡಿನೋಟಿಫಿಕೇಷನ್ ಕ್ಯಾನ್ಸಲ್ ಆಗಿಲ್ಲ.
ಕಡತ ಪರಿಶೀಲನೆ ಮಾಡಿಯೇ ಪ್ರಕ್ರಿಯೆ ಮಾಡಿದ್ದೇವೆ..
ಕರ್ತವ್ಯ ಲೋಪ ಇದೆ ಅಂತ ವರದಿಯಲ್ಲಿದ್ದರೆ ಅದನ್ನ ನಾವು ಎದುರಿಸುತ್ತೇವೆ..
ಭೂಪರಿವರ್ತನೆ ,ಎಲಿಯೇಷನ್ ಸಂದರ್ಭದಲ್ಲಿ ಭೂಮಿ ಅವರಿಗೆ ಸಂಬಂಧಪಟ್ಟಿದ್ದಾ ಇಲ್ವಾ ಅನ್ನೋದನ್ನ ಖಚಿತಪಡಿಸಿಕೊಳ್ಳುತ್ತೇವೆ.
ಅದುಬಿಟ್ಟು ಬೇರೆ ಅಂಶಗಳ ಬಗ್ಗೆ ಗಮನ ಹೆಚ್ಚು ಹರಿಸಲ್ಲ. ೨೦೧೫ ರಲ್ಲಿ ನಡೆದಿರುವ ಪ್ರಕರಣದಲ್ಲಿ ಜಿಲ್ಲಾಧಿಕಾರಿಯಾಗಿ ಕ್ರಮವಹಿಸಿದ್ದೇ. ಯಾವುದೇ ಪ್ರಭಾವ ಪ್ರಶ್ನೆಯೇ ಇಲ್ಲ.ವರದಿ ನೋಡಿ ಪ್ರತಿಕ್ರಿಯೆ ನೀಡುವದಾಗಿ ಹೇಳಿದರು.