ರಾಯಚೂರು. ಲೋಕಸಭೆ ಕ್ಷೇತ್ರಕ್ಕೆ ಟಿಕೇಟ್ ನೀಡುವುದಾಗಿ ಹೇಳಿ ಇದೀಗ ವಂಚಿಸಿದ್ದು, ಟಿಕೇಟ್ ವಿಚಾರವಾಗಿ 2 ದಿನದಲ್ಲಿ ತೀರ್ಮಾನ ಕೈಗೊಳ್ಳದಿದ್ದರೆ ಮರು ಸಭೆ ನಡೆಸಿ ಜನರ ತೀರ್ಮಾನಕ್ಕೆ ಬದ್ದರಾಗಿದ್ದೇವೆ ಎಂದು ಬಿಜೆಪಿ ಟಿಕೇಟ್ ಆಕಾಂಕ್ಷಿ ಬಿ.ವಿ.ನಾಯಕ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಜಿ ಸಂಸದ ಬಿವಿ.ನಾಯಕರ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳ ಚಿಂತನಾ ಸಭೆಯಲ್ಲಿ ಮಾತನಾಡಿದರು,
ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಲು ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಅವರ ಮಾನವಿ ವಿಧಾನ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಿದರು, ಆದರೂ ಸೋಲು ಅನುವಿಸಲಾಯಿತು, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಿಲಾಗಿದೆ, ಲೋಕಸಭೆ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಕುದ್ದಾಗಿ ಸ್ಪರ್ಧೆ ಮಾಡುವಂತೆ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಕ್ಷ ವಿಜೇಯೇಂದ್ರ ಅವರು, ನಮ್ಮನ್ನು ಕರೆಯಿಸಿ ಹಾಲಿ ಸಂಸದರ ಬಗ್ಗೆ ಜನರ ಒಲವಿಲ್ಲ, ನಿಮ್ಮ ಮೇಲೆ ಒಲವಿದ್ದು ನೀವು ತಯಾರಿ ನಡೆಸಿ ಎಂದು ಹೇಳಿ, ಭರವಸೆ ನೀಡಿದ್ದರೂ, ಅದರೂ ಹಿಂದೆ ಸರಿದಿದ್ದೆ, ಬಿ.ಫಾರಂ ನಿಮಗೇ ನೀಡುತ್ತೇವೆ, ನಿಮ್ಮ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಆಕಾಂಕ್ಷೆ ಎಂದು ಹೇಳಿ ಎಂದು ಭರವಸೆ ನೀಡಿ ಕಳಿಸಿದರು, ಆದರೆ ಇದೀಗ ಟಿಕೇಟ್ ತಪ್ಪಿಸಿದ್ದು, ಈ ಬಗ್ಗೆ ಸ್ಪಷ್ಟ ಪಡಿಸಬೇಕು, ಟಿಕೇಟ್ ನೀವೆ ಕೊಡಿತ್ತೇವೆ ಎಂದು ಹೇಳಿ ತಯಾರಿ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ದಕ್ಕೆಯಾಗಿದೆ ಅಗೌರವಾಗಿದೆ, ಇದೀಗ 2 ದಿನದಲ್ಲಿ ಮರು ಪರಿಶೀಲನೆ ಮಾಡಬೇಕು, ಟಿಕೇಟ್ ಘೋಷಣೆ ಮಾಡಿ ಎಂದರು.
2 ದಿನಗಳಲ್ಲಿ ಟಿಕೇಟ್ ಘೋಷಣೆ ಮಾಡದಿದ್ದರೆ ಮತ್ತೊಮ್ಮೆ ಜನರು, ಅಭಿಮಾನಿಗಳು ಜೊತೆಗೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತವೆ ಎಂದು ತಿಳಿಸಿದರು.
ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಮಾತನಾಡಿ, ಬಿಜೆಪಿ ಪ್ರಮುಖರು ಬಿವಿ ನಾಯಕರಿಗೆ ಟಿಕೇಟ್ ಆಸ್ವಾಸನೆ ನೀಡಿದ್ದರು, ಇದರಿಂದ ಅವರು ತಯಾರಿ ಮಾಡಿಕೊಂಡಿದ್ದರು, ಟಿಕೇಟ್ ತಪ್ಪಿಸಲು ಕಾರಣ ಹೇಳಿಬೇಕಿದೆ, ಟಿಕೇಟ್ ಮರು ಪರಿಶೀಲನೆ ಮಾಡಬೇಕು, ನಾವು ಟಿಕೇಟ್ ಕೇಳಿದಿಲ್ಲ, ನೀವೇ ಕೊಡುತ್ತವೆಂದು ಹೇಳಿ, ಇದೀಗ ತಪ್ಪಿಸಿದ್ದು ನೋವಿನ ಸಂಗತಿ, ಯಾವ ಆಧಾರದ ಮೇಲೆ ರಾಜಾ ಅಮರೇಶ್ವರ ನಾಯಕ ರಿಗೆ ಟಿಕೇಟ್ ನೀಡಿದ್ದೀರಿ, ಎಂಬುದು ಸ್ಪಷ್ಟಪಡಿ ಸಬೇಕು, ರಾಜ್ಯದ ನಾಯಕರು ಸರಿಪಡಿಸುವ ಕೆಲಸ ಮಾಡಬೇಕು, ಬಿವಿ.ನಾಯ ಕರಿಗೆ ಟಿಕೇಟ್ ನೀಡಬೇಕು, ಟಿಕೇಟ್ ವಿಚಾರ ಪುನರ್ ಪರಿಶೀ ಲನೆ ಮಾಡಬೇಕು ಎಂದರು.
ನಾಗಲಿಂಗಸ್ವಾಮಿ ಪ್ರಸ್ಥಾವಿಕವಾಗಿ ಮಾತನಾ ಡಿದರು, ಉದ್ದೇಶ ಪೂರ್ವಕವಾಗಿ ಟಿಕೇಟ್ ಕಟ್ ಮಾಡಿದ್ದು ಇಂದು ಪರು ಪರಿಶೀಲನೆ ಮಾಡ ಬೇಕು ಸಭೆ ನಡೆಸಲಾಗುತ್ತಿದೆ.
ರಾಯಚೂರು ಮತ್ತು ಯಾದಗಿರಿ ಲೋಕಸಭೆ ಕ್ಷೇತ್ರದ ಕಾರ್ಯಕರ್ತರು ಆಗಮಿಸಿದ್ದಾರೆ, ಜಿಲ್ಲೆಯು ರಾಜಕೀಯವಾಗಿ ಅಚ್ಚು ಅಳೆಯದೇ ಇರುವ ಹೆಸರು ಎಂದರೆ ಬಿವಿ.ನಾಯಕ ಜನರಿಗಾಗಿ ಇರುವ ನಾಯಕರು, ಅವರು ಅಧಿಕಾರಕ್ಕಾಗಿ ಆಸೆಪಟ್ಟವರಲ್ಲ, ಈ ಹಿಂದೆ ಕಾಂಗ್ರೆಸ್ ನವರು ಸರಿಯಾಗಿ ನಡೆಸಿಕೊಂಡಿ ಲ್ಲವೆಂದು ಸ್ವಾಭಿಮಾನದಿಂದ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು, ಬಿಜೆಪಿ ಅವರು ಬಿಜೆಪಿಗೆ ಬಂದ ಮೇಲೆ ಮಾನವಿ ಕ್ಷೇತ್ರದದಲ್ಲಿ ಹೆಚ್ಚಿನ ಪ್ರಾಬಲ್ಯ, ಜನ ಮನ್ನಣೆ ಗಳಿಸಿದ್ದಾರೆ, ಎಂಪಿ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವಂತೆ ಭರವಸೆ ನೀಡಿದರು, ಇದೀಗ ಅವರಿಗೆ ಟಿಕೇಟ್ ತಪ್ಪಿಸ ಲಾಗಿದೆ, ಇದು ನೋವಿನ ಸಂಗತಿಯಾಗಿದೆ ವ್ಯವಸ್ಥಿತವಾಗಿ ಟಿಕೇಟ್ ತಪ್ಪಿದ್ದಾರೆ, ನಮಗೆ ಅಸ್ತಿತ್ವಕದ ಕೊರತೆ ಇದೆ, ರಾಜ್ಯ ಮತ್ತು ರಾಷ್ಟ್ರದ ನಾಯಕರಿಗೆ ಒಕ್ಕೋರಿನಿಂದ ಒತ್ತಾಯಿಸಲಾ ಗುತ್ತದೆ ಎಂದರು.
ಹಾಲಿ ಸಂಸದರ ಅಭಿಪ್ರಾಯ ಸರಿಯಿಲ್ಲವೆಂದು ರಾಜ್ಯದ ಹಾಗೂ ಕೇಂದ್ರದ ನಾಯಕ ತಿಳಿದಿದ್ದು, ಟಿಕೇಟ್ ಆಸ್ವಾಸನೆ ನೀಡಿ ತಪ್ಪಿಸಿದ್ದಾರೆ, ಬಿ.ವಿ. ನಾಯಕರಿಗೆ ಒಂದೇ ಅಲ್ಲ ಕ್ಷೇತ್ರದ ಕಾರ್ಯಕ ರ್ತರಿಗೆ ಅಭಿಮಾನಿಗಳಿಗೆ ಮೋಸ ಮಾಡಿದ್ದಾರೆ, ದೇಶ ಗೆಲ್ಲಲು ಮೋದಿ ಮತ್ತೊಮ್ಮೆ ಪ್ರಧಾನಿಯಾ ಗಲು ಬಿ.ವಿ ನಾಯಕರಿಗೆ ಟಿಕೇಟ್ ನೀಡಬೇಕಿದೆ,
ಟಿಕೇಟ್ ಬದಲು ಮಾಡಲು ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಶರಣಬಸವ ಜೋಳದಡಗಿ ಮಾತನಾಡಿ,
ಸರಳ ಸಜ್ಜನಿಕೆ ವ್ಯಕ್ತಿಯಾಗಿ 4 ಬಾರಿ ಎಂಪಿಯಾಗಿದ್ದ ದಿ.ವೆಂಕಟೇಶ ನಾಯಕ ಅವರಂತೆ ಬಿವಿ.ನಾಯಕ ಅವರು ಸಹ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದಾರೆ, ರಾಜ್ಯ ಮತ್ತು ಕೇಂದ್ರ ನಾಯಕರು ತೀರ್ಮಾನ ಸರಿಯಿಲ್ಲ, ಮಾದ್ಯಮ ವರದಿಯಲ್ಲಿ ಬಿವಿ.ನಾಯಕ ಪರವಿದೆ, ಎಲ್ಲ ಗ್ರಾಮಗಳಲ್ಲಿ ಬಿ.ವಿ.ನಾಯಕ ಪರವಿದ್ದಾರೆ, ಇಲ್ಲಿನ ಶಡ್ಯಂತ್ರದಿಂದ ಟಿಕೇಟ್ ತಪ್ಪಿದೆ, ಟಿಕೇಟ್ ಕೊನೆ ಕ್ಷಣದಲ್ಲಿ ತಪ್ಪಿದ್ದು,ಸ್ವಾಭಿಮಾನಕ್ಕೆ ದಕ್ಕೆಯಾಗಿದೆ, ರಾಯಚೂರಿನ ಧ್ವನಿ ಬೆಂಗಳೂರು, ದೆಹಲಿಗೆ ತಟ್ಟಬೇಕು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ಅವರಿಗೆ ಟಿಕೇಟ್ ನೀಡಲೇಬೇಕು, ಮರು ಪರಿಶೀಲನೆ ಮಾಡಿ ಟಿಕೇಟ್ ಘೋಷಣೆ ಮಾಡಬೇಕು ಎಂದರು.
ಸಭೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಗೋ ಬ್ಯಾಕ್ ಘೋಷಣೆ ಹಾಕಿದರು.
ರಾಜಾ ಅಮರೇಶ್ವರ ನಾಯಕ ಅಟಾವೋ ರಾಯಚೂರು ಬಚಾವೋ ಎಂಬ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಕೊಟ್ರೇಶಪ್ಪ ಕೋರೆ, ಅನಿತಾ ಬಸವರಾಜ,
ಮಲ್ಲಿಕಾರ್ಜುನ, ದೇವರಾಜ ಗೌಡ ಸಿರವಾರ, ತಿಮ್ಮಾರೆಡ್ಡಿ ಗೌಡ, ವೀರಭದ್ರ ಗೌಡ, ನಾಗಲಿಂಗ ಸ್ವಾಮಿ, ಶಿವಶರಣರ ಜಕ್ಕಲದಿನ್ನಿ, ನರಸಿಂಹ ನಾಯಕ ಕರಡಿಗುಡ್ಡ, ಎಂ.ಈರಣ್ಣ ನಾಯಕ ಯರಗೇರಾ, ಶರಣ ಬಸವ, ಮಲ್ಲಪ್ಪಗೌಡ, ಮೌಲಾಸಾಬ್, ಶರಣಗೌಡ ಹೂವಿನ ಹಡಗಿ, ಶರಣಬಸವ ನಾಯಕ, ಜನಾರ್ದನ, ರಾಮನ ಗೌಡ, ಅಮರೇಶ, ಹನುಮಂತಪ್ಪ ಮಿಯ್ಯಾ ಪೂರ, ನಾಗರಾಜ, ಲಕ್ಷ್ಮಣ, ಶರಣಗೌಡ ಬಿ.ಗ ಣೇಕಲ್, ಚಂದ್ರ ಶೇಖರ ಸ್ವಾಮಿ, ಬಸವ ರಾಜಪ್ಪ, ರಂಗಪ್ಪ, ಎಸ್ ಮಹಮ್ಮದ್, ನಾಗ ರಾಜ, ಅನಿಲ ಕುಮಾರ, ಹನುಮಂತಪ್ಪ ವಕೀಲ, ವೀರೇಶ ನಾಯಕ, ರಾಮು ನಾಯಕ, ಸೇರಿದಂತೆ ಅನೇಕರು ಭಾಗವಹಿಸಿದ್ದರು.