Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಲ್ಲುಮಣ್ಣ ಹಾಕಿ ಒತ್ತುವರಿ, ಪ್ರಶ್ನಿಸಿದರೆ ಅವಾಶ್ಯ ಶಬ್ದಗಳಿಂದ ನಿಂದನೆ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಲ್ಲುಮಣ್ಣ ಹಾಕಿ ಒತ್ತುವರಿ, ಪ್ರಶ್ನಿಸಿದರೆ ಅವಾಶ್ಯ ಶಬ್ದಗಳಿಂದ ನಿಂದನೆ

ರಾಯಚೂರು. ಜಿಲ್ಲಾಧಿಕಾರಿ ಕಚೇರಿ ಅವರಣ ದಲ್ಲಿ ಕಲ್ಲುಮಣ್ಣನ್ನು ತಂದು ಸುರಿದು ಒತ್ತುವರಿ ಮಾಡಲಾಗುತ್ತಿದೆ.

ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿನ ಎಡ ಭಾಗದಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡುತ್ತಿದ್ದಾರೆ, ಎಡ ಭಾಗದಲ್ಲಿ ಬೃಹದಾಕಾರದ ಬೇವಿನ ಮೇರವಿದ್ದು ಆ ಕಡೆ ಯಾರೂ ಹೋಗದಂತೆ ಕಾವಲುಗಾರರನ್ನು ಇಟ್ಟಿದ್ದಾರೆ, ಕಚೇರಿ ಅವರಣವು ಬಯಲು ಪ್ರದೇಶವಾಗಿದ್ದರಿಂದ ಸಾರ್ವಜನಿಕ ಮೂತ್ರ ವಿಸರ್ಜನೆಗೆ ತೆರಳು ಕಾವಲುಗಾರರು ಜನಸಾಮಾನ್ಯರಿಗೆ ಅವಾಶ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ‌. ಜಿಲ್ಲಾಧಿಕಾರಿ ಕಚೇರಿಗೆ ಕೆಲಸಕ್ಕೆ ಬರುವ ಸಾರ್ವಜನಿಕರು, ಇಲಾಖೆ ಸಿಬ್ಬಂದಿಗಳು, ಹಾಗೂ ಪೊಲೀಸರನ್ನು ಬಿಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ನಡೆದಿದೆ.
ಸ್ಥಳದ ಬಗ್ಗೆ ಕಾವಲುಗಾರರಿಗೆ ಕೇಳಿದರೂ ಸಹ ಅವಾಶ್ಯ ಶಬ್ದಗಳಿಂದ ನಿಂದಿಸಿದ ಉದಾಹರಣೆಗಳಿವೆ.
ಕಳೆದ 10 ವರ್ಷಗಳ ಹಿಂದೆ ಒಂದೇ ಒಂದು ಘೋರಿ ಇದ್ದು, ಇದೀಗ ಎರಡರಿಂದ ಮೂರು ಗೋರಿಗಳಿವೆ ಜೊತೆಗೆ ಖಾಸಗಿ ವ್ಯಕ್ತಿಗಳು ನಾಮಫಲಕ ಅವಡಿದ್ದಾರೆ, ಹಾಗೂ ಒಂದು ಪ್ರತೇಕ ಬೋರ್‌ವೆಲ್ ಕೊರೆಸಿದ್ದಾರೆ‌. ಸುತ್ತಲಿನ ಪ್ರದೇಶವನ್ನು ಕಳಿಸಲು ಹಂತ ಹಂತವಾಗಿ ಕಲ್ಲು ಮಣ್ಣನ್ನು ತಂದು ಸುರಿದು ಸಮತಟ್ಟ ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಪ್ರತಿದಿನ ಹೋಗಿ ಬರುತ್ತಿ ದ್ದರೂ ಒತ್ತುವರಿ ಮಾತ್ರ ಕಣ್ಣಿಗೆ ಕಾಣುತ್ತಿಲ್ಲ, ಕಂಡರೂ ಕಾಣದಂತೆ ಇದ್ದಾರೆ ಎಂದು ಸಾರ್ವಜನಿಕ ದೂರಿದ್ದಾರೆ.
ಇದೀಗ ಯಕ್ಲಾಸಪೂರ ರಸ್ತೆಯಲ್ಲಿ ಹೊಸ ಜಿಲ್ಲಾಡಳಿತ ಭವನವ ನಿರ್ಮಾಣ ಕೆಲಸ ಕೊನೆ ಹಂತದಲ್ಲಿದ್ದು ಜಿಲ್ಲಾಡಳಿತ ಸ್ಥಳಾಂತರ ನಂತರ ಇಡೀ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಒತ್ತುವರಿ ಮಾಡಿಕೊಂಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಯಾರೂ ಬರದಂತೆ ಮಾಡುವ ಸ್ಥಿತಿ ಬಂದು ಒದಗಲಿದೆ.
ಕೂಡಲೇ ಜಿಲ್ಲಾಧಿಕಾರಿಗಳು ತಮ್ಮ ಅವರಣದಲ್ಲಿ ಒತ್ತುವರಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರ ಪ್ರಶ್ನೆಗೆ ಉತ್ತರ ನೀಡಬೇಕಾಗಿದೆ.

Megha News