ತೆಲಂಗಾಣ/ರಾಯಚೂರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಭರವಸೆ ಈಡೇರಿಸುವಲ್ಲಿ ವಿಫಲ ವಾಗಿದ್ದು, ಇದೀಗ ತೆಲಂಗಾಣದಲ್ಲಿ ನಡೆಯುತ್ತಿ ರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿ ಕಾರಕ್ಕೆ ಬಂದರೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದ ಗ್ಯಾರಂಟಿಗಳನ್ನು ತೆಲಂಗಾಣದಲ್ಲಿ ಜಾರಿ ಗೊಳಿಸುವುದಾಗಿ ಹೇಳಿತ್ತಿದ್ದು ಕಾಂಗ್ರೆಸ್ ಗೆ ಮತ ಹಾಕಬೇಡಿ ನಾವು ಮತ ಹಾಕಿ ಮೋಸ ಹೋಗಿ ದ್ದೇವೆ ನೋವು ಮೋಸ ಹೋಗಬೇಡಿ ಎಂದು ಗಡಿ ಭಾಗದ ಕರ್ನಾಟಕದ ರೈತರು ತೆಲಂಗಾ ಣದಲ್ಲಿ ಹೋರಾಟ ನಡೆಸಿದ್ದಾರೆ.
ಕರ್ನಾಟಕದ ಗಡಿ ಭಾಗದ ರಾಯಚೂರು, ಬೂರ್ದಿಪಾಡು, ವಡ್ಡೆಪಲ್ಲಿ, ಗಾಜಲುಪಾಡು ಗ್ರಾಮದ ನೂರಾರು ರೈತರು ತೆಲಂಗಾಣದ ವರಂಗಲ್, ಗದ್ವಾಲ್, ಜೋಗಳಾಂಭದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಅಲ್ಲಿನ ರೈತರಿಗೆ ಹೇಳುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ 6 ಗ್ಯಾರಂಟಿಯನ್ನು ಜಾರಿಗೊಳಿಸುವ ಭರವಸೆ ನೀಡುತ್ತಿರುವುದನ್ನು ಖಂಡಿಸಿದ್ದಾರೆ. ಅಲ್ಲಿನ ರೈತರು ಮತ್ತು ಬಿಎಸ್‌ಆರ್ ಪಕ್ಷದ ಮುಖಂಡರು ಕರ್ನಾಟಕದ ರೈತರ ಹೋರಾಟಕ್ಕೆ ಸಾಥ್ ನೀಡಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 6 ಗ್ಯಾರಂಟಿ ಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ, ಮಹಿಳೆಯರಿಗೆ 2 ಸಾವಿರ ಹಣ ಒಂದೇ ತಿಂಗಳು ಹಾಕಿ ಕೈ ಬಿಟ್ಟಿದ್ದಾರೆ, ಯುವ ಜನಾಂಗಕ್ಕೆ 3 ಸಾವಿರ ಹಣ ಹಾಕುತ್ತಿಲ್ಲ, ಗಡಿ ಭಾಗದ ರಾಯ ಚೂರಿನಲ್ಲಿ ಬೆಳೆಗಳಿಗೆ ನೀರು ದೊರೆಯುತ್ತಿಲ್ಲ, ಹೋರಾಟ ನಡೆಸಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು. ಇನ್ನು 7 ಗಂಟೆ ವಿದ್ಯುತ್ ರೈತರ ಪಂಪ್ ಸೆಟ್ ಗಳಿಗೆ ನೀಡುವುದಾಗಿ ಹೇಳಿ ಇದೀಗ ಕೇವಲ 3-4 ಗಂಟೆ ಮಾತ್ರ ನೀಡುತ್ತಿ ದ್ದಾರೆ, ಬೆಳೆಗಳಿಗೆ ನೀರಿನಲ್ಲಿ ಒಣಗಿ ಹೋಗಿ ನಷ್ಟ ಅನುಭವಿಸುತ್ತಿದ್ದೇವೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿ ಮೋಸ ಹೋಗಬೇಡಿ ಎಂದು ತಿಳಿಸಿದ್ದಾರೆ.