ರಾಯಚೂರು. ಜಿಲ್ಲೆಯಾದ್ಯಂತ ಮೊಹರಂ ಹಬ್ಬದ ಖತ್ತಲ್ ರಾತ್ರಿ ಆಚರಣೆ ಪ್ರಯುಕ್ತ ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶ ದಿಂದ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಯನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ನಿತೀಶ ಕೆ. ಆದೇಶಿಸಿದ್ದಾರೆ.
ಜಿಲ್ಲೆಯಾದ್ಯಂತ ಮೊಹರಂ ಹಬ್ಬದ ಖತ್ತಲ್ ರಾತ್ರಿ ಅಂಗವಾಗಿ ನಗರ, ಪಟ್ಟಣ ಮತ್ತು ಗ್ರಾಮಗಳಲ್ಲಿ ಪಂಜಾ ಆಲಾಂ ದೇವರುಗಳನ್ನು ಪ್ರತಿಷ್ಠಾಪಿಸಿ ದ್ದು, ಹೆಜ್ಜೆ ಕುಣಿತ, ಕೋಲಾಟ ಮತ್ತು ಬೆಂಕಿ ಆಲಾಯದಲ್ಲಿ ಆಡುವ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಕ್ಷುಲ್ಲಕ ಕಾರಣಗಳಿಂದ ಯುವಕರ ಮಧ್ಯೆ ಕಲಾಹಗಳು ಉಂಟಾಗುವ ಸಾಧ್ಯ ಇದ್ದು, ಮೊಹರಂ ಕೊನೆಯ ದಿನದಂದು ಪಂಜಾ ಆಲಾಯಂ ದೇವರುಗಳ ಮೆರವಣೆಗೆ ಸಂದರ್ಭ ದಲ್ಲಿ ಅಪಾರ ಸಂಖ್ಯೆ ಜನರು ಭಾಗವಹಿಸಲಿದ್ದು, ಶಾಂತಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜು.16ರ ಬೆಳಗ್ಗೆ 6 ಗಂಟೆಯಿಂದ ಜು.18ರ ಬೆಳಗ್ಗೆ 6 ಗಂಟೆವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ ನಿಷೇಧಾಜ್ಞೆಯನ್ನು ಹೊರಡಿಸಿದ್ದಾರೆ. ಅಬಕಾರಿ ಕಾಯ್ದೆ 1965 ರ ಕಲಂ.21 (1) ರನ್ವಯ
ಮಧ್ಯ ತಯಾರಿಕಾ ಘಟಕಗಳು, ಸಾಗಾಣಿಕೆ, ಮತ್ತು ಸಂಗ್ರಹಣೆ, ಮಾರಾಟ ಮಳಿಗೆಗಳನ್ನು ಬಂದ್ ಮಾಡಲಾಗುತ್ತಿದೆ. ಈ ಅವಧಿಯಲ್ಲಿ ಹೊರಗಿನಿಂದ ಮದ್ಯ ಇತ್ಯಾದಿಗಳನ್ನು ತಂದು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ್ದಾರೆ.