ರಾಯಚೂರು.ಅಕ್ರಮವಾಗಿ ಇಸ್ಪೇಟ್ ಜೂಜಾಟ ಅಡ್ಡೆಯ ಮೇಲೆ ದಾಳಿ ಮಾಡಿ 8 ಜನರನ್ನು ಬಂಧಿಸಿ 4.53 ಲಕ್ಷ ರೂ.ಹಣವನ್ನು ಜಪ್ತಿ ಮಾಡಿದ ಘಟನೆ ಗುರುವಾರ ನಡೆದಿದೆ.
ನಗರದ ಲಾಡ್ಜ್ ವೊಂದರಲ್ಲಿ ಇಸ್ಪೀಟ್ ಜೂ ಜಾಟ ಆಡುತ್ತಿರುವ ಮಾಹಿತಿ ಮೇರೆಗೆ ಜಿಲ್ಲಾ ಪೋಲಿಸ್ ವರಿಷ್ಠಾದಿಕಾರಿ ನಿಖಿಲ್.ಬಿ ಮಾರ್ಗದರ್ಶದಲ್ಲಿ ಸರದ ಬಜಾರ್ ಪೋಲಿಸ್ ಠಾಣೆಯ ಸಿಪಿಐ ಗುರುರಾಜ ಕಟ್ಟಿಮನಿ ತಂಡದೊಂದಿಗೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.
ವೀರೇಶರೆಡ್ಡಿ, ಈಶ್ವರ, ಮಂಜುನಾಥ, ತಿಮ್ಮರೆಡ್ಡಿ, ವಸಂತ, ಸುರೇಶ, ಶ್ರೀನಿವಾಸ, ಸುರೇಶ, ವೈ ಬಂಧಿತ ಆರೋಪಿಗಳಲಾಗಿದ್ದಾರೆ. 4.53 ಲಕ್ಷ ಹಣವನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಸದರ ಬಜಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ತಂಡದಲ್ಲಿ ಸಿಪಿಐ ನಾಗರಾಜ ಮೇಕ, ಶ್ರೀನಿವಾಸ, ವಿನೋದರಾಜ, ಮಲ್ಲಿಕಾರ್ಜುನ, ವಿನಾಯಕ, ಚಂದ್ರಶೇಖರ ಇದ್ದರು.