ರಾಯಚೂರು .ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನ್ಯಾಯವಾದಿ ದೇವಣ್ಣನಾಯಕ ಇಂದು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಜಿ.ಕುಮಾರನಾಯಕರಿಗೆ ಇನ್ನೂ ಭಿಪಾರಂ ಕೊಟ್ಟಿಲ್ಲ. ಕೊನೆ ಕ್ಷಣದವರೆಗೆ ನನಗೆ ಭಿ.ಪಾರಂ ನೀಡುವ ವಿಶ್ವಾಸವಿದೆ. ಕಳೆದ ನಾಲ್ಕು ತಿಂಗಳಿನಿAದ ಎಲ್ಲಾ ಸಮುದಾಯ, ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸಿದ್ದತೆ ಮಾಡಿಕೊಂಡಿದ್ದಾನೆ. ಅನೇಕ ಮಠಾಧೀಶರು, ವಿವಿಧ ಸಮೂದಾಯ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷದ ವರಿಷ್ಟರಿಗೆ ಟಿಕೇಟ್ ನೀಡವಂತೆ ಮನವಿ ಮಾಡಿದ್ದೇನೆ. ಪಕ್ಷ ವರಿಷ್ಟರ ತೀರ್ಮಾನವೇ ಅಂತಿಮವಾಗಿದೆ. ನಾನು ಕಾಂಗ್ರೆಸ್ ಪಕ್ಷ ಬಂಡಾಯ ಅಭ್ಯರ್ಥಿಯಲ್ಲ. ಪಕ್ಷದ ಕಾರ್ಯಕರ್ತನಾಗಿ,ಸ್ಥಳೀಯನಾಗಿ ಟಿಕೇಟ್ ಕೇಳುತ್ತಿದ್ದೇನೆ. ಕೊನೆ ಕ್ಷಣದವರೆಗೆ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ನನಗೆ ಟಿಕೇಟ್ ಸಿಗುತ್ತದೆ ಎನ್ನುವವಿಶ್ವಾಸವಿದೆ. ಜಿ.ಕುಮಾರನಾಯಕ ವಿರುದ್ದ ಅಲ್ಲ. ಎಲ್ಲರೂ ಒಂದಾಗಿಯೇ ಚುನಾವಣೆ ಎದುರಿಸುತ್ತೇನೆ. ಪಕ್ಷದ ಸಚಿವರು, ಅಭ್ಯರ್ಥಿಯೆಂದು ಚುನಾವಣೆ ಪ್ರಚಾರ ನಡೆಸಿರುವಂತೆ ನಾನು ಪ್ರಚಾರ ಕೈಗೊಂಡಿದ್ದೇನೆ ಎಂದರು. ಈ ಸಂದರ್ಬದಲ್ಲಿ ನ್ಯಾಯವಾದಿ ಕೆ.ಎಂ.ನೀಲಕAಠರಾಯ, ಮಹ್ಮದ ಉಸ್ಮಾನ್, ಹನುಮೇಶ, ಎಂ.ವೀರನಗೌಡ ಇದ್ದರು.
Megha News > Local News > ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವಣ್ಣನಾಯಕ ನಾಮಪತ್ರ : ಪಕ್ಷ ಬಿ.ಪಾರಂ ನನಗೆ ದೊರೆಯುವ ವಿಶ್ವಾಸ, ಬಂಡಾಯ ಅಭ್ಯರ್ಥಿಯಲ್ಲ- ಸ್ಪಷ್ಟನೆ