ರಾಯಚೂರು: ಲಂಚ ಸ್ವೀಕರಿಸುವಾಗ ಜೆಸ್ಕಾಂ ಎಇ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಲಿಂಗಸ್ಗೂರಿನಲ್ಲಿ ನಡೆದಿದೆ.
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾ ರಿಗಳು ದಾಳಿ ನಡೆಸಿ ಜೆಸ್ಕಾಂ ಎಇಇ ಕೆಂಚಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.
ಜೆಸ್ಕಾಂ ಕಚೇರಿಯಲ್ಲಿಯೇ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದರು, ಜೆಸ್ಕಾಂ ಗುತ್ತಿಗೆದಾರ ನಾಯಕ ಬಳಿ 10 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, 5 ಸಾವಿರ ರೂ ಹಣ ಪಡೆಯುತಿರುವಾಗ ಲೋಕಾ ಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಆರೋಪಿ ಕೆಂಚಪ್ಪ ವಶಕ್ಕೆ ಪಡೆದುಕೊಂಡು ಕಚೇರಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.