ರಾಯಚೂರು. ತಾಲೂಕಿನ ೧೧೦/೩೩/೧೧ಕೆ.ವಿ ಚಿಕ್ಕಸೂಗೂರು ವಿದ್ಯುತ್ ವಿತರಣಾ ಉಪ-ಕೇಂದ್ರ ನಿಂದ ೩೩/೧೧ಕೆ.ವಿ ಮಾಮಡದೊಡ್ಡಿ ವಿದ್ಯುತ್ ವಿತರಣಾ ಉಪ-ಕೇಂದ್ರದವರೆಗೆ ನೂತನವಾಗಿ ನಿರ್ಮಿಸಲಾಗಿರುವ ೩೩ಕೆ.ವಿ ವಿದ್ಯುತ್ ಮಾರ್ಗದ ಕಾಮಗಾರಿಯು ಸಂಪೂರ್ಣವಾಗಿ ಮುಕ್ತಾಯವಾಗಿದೆ. ೨೦೨೪ರ ಜುಲೈ ೧೯ ಅಥವಾ ತದನಂತರ ಯಾವ ದಿನದಲ್ಲಾದರೂ ಚೇತನಗೊಳಿಸಲಾಗುತ್ತಿದ್ದು, ಮಾರ್ಗದ ಕಂಬಕ್ಕೆ ದನಕರುಗಳನ್ನು ಕಟ್ಟುವುದಾಗಲೀ ಸೇರಿದಂತೆ ಇತರೆ ಯಾವುದೇ ಕೆಲಸಗಳನ್ನು ಮಾಡದೇ ಇರುವಂತೆ ಜೆಸ್ಕಾಂ ನಿರ್ಮಾಣ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಈ ೩೩ಕೆ.ವಿ ವಿದ್ಯುತ್ ಮಾರ್ಗವು ಚಿಕ್ಕಸೂಗೂರು, ಹೆಗ್ಗಸನಹಳ್ಳಿ, ಚಿಕ್ಕ ವಡ್ಲೂರು, ದೊಡ್ಡ ವಡ್ಲೂರು, ಹನುಮಾನದೊಡ್ಡಿ, ಇಬ್ರಾಹಿಂದೊಡ್ಡಿ (ಶಿವವಿಲಾಸ ನಗರ), ಸಗಮಕುಂಟ, ಯರಗುಂಟ ಮತ್ತು ಮುಂತಾದ ಗ್ರಾಮಗಳ (ಸೀಮೆ) ಮುಖಾಂತರ ಹಾದು ಹೋಗಿರುತ್ತದೆ.
ಈ ಮಾರ್ಗದ ಕಂಬಕ್ಕೆ ಅಥವಾ ಗೈ ವೈರ್‌ಗೆ ದನಕರುಗಳನ್ನು ಕಟ್ಟುವುದಗಾಲೀ, ಬಟ್ಟೆಗಳನ್ನು ಒಣಗಿಸಲು ಕಂಬಕ್ಕೆ ಹಗ್ಗ ಕಟ್ಟುವುದಾಗಲೀ, ಕಂಬದ ಹತ್ತಿರ ಹೋಗುವುದಗಾಲೀ, ಮಾರ್ಗದ ಹತ್ತಿರ ಗಾಳಿಪಟ ಹಾರಡಿಸುವುದಾಗಲೀ ಅಥವಾ ಯಾವುದೇ ಇನ್ನಿತರೆ ಅಪಾಯದ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡದೇ ಇರಲು ಎಚ್ಚರಿಕ್ಕೆ ಕ್ರಮ ವಹಿಸಲು ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.