ರಾಯಚೂರು. ಐಐಐಟಿಗೆ ಗುರುತಿಸಿರುವ ಜಾಗ ಈ ಹಿಂದೆ ದಲಿತರಿಗೆ ನೀಡಿದ ಭೂಮಿಯಾಗಿದೆ. ಈ ಭೂಮಿಯನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವವ ಕುಟುಂಬಗಳಿಗೆ ಫಲವತ್ತ ವಲ್ಲದ ಭೂಮಿ ನೀಡಿದ್ದು, ಇತ್ತ ಪರಿಹಾರವಿಲ್ಲದೆ ಭೂಮಿ ಇಲ್ಲದೆ ಭೂಮಿ ಕಳೆದುಕೊಂಡು ರೈತರ ನ್ನು ಒಕ್ಕಲೆಬ್ಬಿಸಿದ್ದರಿಂದ ಕಳೆದ ಎರಡು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಯಚೂರಿಗೆ ಐಐಟಿ ಬದಲಿಗೆ ತ್ರಿಬಲ್ ಐಟಿ ಮಂಜೂರು ಮಾಡಿದ್ದು, ತಾಲೂಕಿನ ವಡವಾಟಿ ಸೀಮಾಂತರದ ಸರ್ವೆ ನಂಬರ್ 99/1/3 ರಲ್ಲಿ ಒಟ್ಟು 65 ಎಕರೆ ಭೂಮಿಯನ್ನು ಗುರುತಿಸ ಲಾಗಿದೆ. ಈ 65 ಎಕರೆಯಲ್ಲಿ ಈ ಹಿಂದೆ 1978 ರಲ್ಲಿ ಭೂ ರಹಿತ ದಲಿತರಿಗೆ 35 ಎಕರೆ ಭೂಮಿ ಯನ್ನು 12 ಕುಟುಂಬಗಳಿಗೆ ನೀಡಲಾಗಿದೆ. ಈಗ ಗುರುತಿಸಿರುವ ಭೂಮಿಯಲ್ಲಿಯೇ ಈ ರೈತರು ಸಾಗುವಳಿ ಮಾಡುತ್ತಿದ್ದಾರೆ. ಸರಕಾರ ನೀಡಿದ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಜಿಲ್ಲಾಡಳಿತವು ಇದೇ ಭೂಮಿಯನ್ನು ಕಾಲೇಜಿಗೆ ನೀಡಲು ಮುಂದಾಗಿದ್ದರಿಂದ, ದಲಿತ ಕುಟುಂ ಬಗಳು ಭೂಮಿ ಕಳೆದುಕೊಂಡಿದ್ದಾರೆ.
ತ್ರಿಬಲ್ಐಟಿಗಾಗಿ ಗುರುತಿಸಿದ ಭೂಮಿಗೆ ರೈತರಿಗೆ ಪರ್ಯಾಯ ಭೂಮಿ ನೀಡಿದೆ, ಆದರೆ ಆ ಭೂಮಿಯು ಫಲವತ್ತಾಗಿಲ್ಲವೆಂಬುದು ರೈತರ ಆರೋಪವಾಗಿದೆ, ಜೊತೆಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಪಹಣಿ, ಸರ್ವೆ ನಡೆಸಿ ರೈತರಿಗೆ ನೀಡುವ ಭರವಸೆ ನೀಡಿದ್ದು, ಇದುವರೆಗೂ ನೀಡಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 40 ವರ್ಷದಿಂದ ಸಾಗುವಳಿ ಮಾಡಿ ಕೊಂಡು ಬಂದು, ಭೂಮಿಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಭೂಮಿ ಕಸಿದುಕೊಂಡು ಬದಲಿ ಭೂಮಿ ನೀಡಿದ್ದು, ಆದರೆ ಯಾವುದೇ ಕೆಲಸಕ್ಕೆ ಬಾರದಂತಾಗಿದೆ, ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ತ್ರಿಬಲ್ಐಟಿ ಕಟ್ಟಡ ಆರಂಭವಾಗಬೇಕಾದರೆ ದಲಿತರಿಗೆ ನೀಡಿದ ಭೂಮಿ ವಾಪಸ್ಸು ನೀಡಿ,
ಬೇರೆಡೆ ಫಲವತ್ತಾದ ಭೂಮಿ ನೀಡಿ ಎಂದು ಸುಮಾರು 50ಕ್ಕೂ ಅಧಿಕ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.