ರಾಯಚೂರು.-ಲೋಕಸಭಾ ಚುನಾವಣೆ ಮತ ಏಣಿಕೆಗೆ ಜಿಲ್ಲೆಯ ೧೪೯೦ ಪೊಲೀಸ್ ಸಿಬ್ಬಂದಿಗಳು ಹಾಗೂ ಕೆಎಸ್‌ಆರ್‌ಪಿ, ಸಿಎಸ್‌ಆರ್‌ಪಿ, ಡಿಎಆರ್ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದುಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವುಕುಮಾರ ಹೇಳಿದರು. ಅವರಿಂದು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿ ಇಬ್ಬರು ಹೆಚ್ಚುವರಿ ಎಸ್‌ಪಿ, ೪ಜನ ಡಿವೈಎಸ್‌ಪಿ, ೧೭ ಜನ ಸಿಪಿಐ, ೪೪ಜನ ಪಿಎಸ್‌ಐ, ೧೧೧ ಜನ ಎಎಸ್‌ಐ, ೩೮೮ ಜನ ಪೇದೆಗಳು, ೭೯ ಜನ ಮಹಿಳಾ ಪೇದೆಗಳು ಸೇರಿ ೬೪೫ ಜನರನ್ನು ನಿಯುಕ್ತಿಗೊಳಿಸಲಾಗಿದೆ
ಹೆಚ್ಚುವರಿಯಾಗಿ ೨೦೦ ಜನ ಗೃಹರಕ್ಷಕ, ೩ ಕೆಎಸ್‌ಆರ್‌ಪಿ ತುಕಡಿ, ಒಂದು ಸಿಆರ್‌ಎಸ್‌ಪಿ, ೧೦ ಡಿಆರ್, ಎಎಸ್‌ಸಿ ಒಂದು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತದೆ.ಅಲ್ಲದೇ ವೈಧ್ಯಕೀಯ ತಂಡ, ಮೊಬೈಲ್ ಸುರಕ್ಷತೆ ತಂಡ ಅಗ್ನಿಶಾಮಕ ದಳದ ತಂಡಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.