ರಾಯಚೂರು. ಸರ್ಕಾರದಿಂದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಮಾಡುತ್ತಿದ್ದು, ಆದರೆ ತಾಲ್ಲೂಕಿನ ಶಾಖವಾದಿ ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಅವರು ಕಚೇರಿಗೆ ಆಗಮಿಸದೇ ಗೈರಾಗಿದ್ದು ಸಿಬ್ಬಂದಿಗಳೇ ಜಯಂತಿ ಆಚರಣೆ ಮಾಡಿದ್ದು ಪೂಜೆ ಮಾಡದೇ ಭಾವಚಿತ್ರಕ್ಕೆ ಹಾರ ಇಲ್ಲದೆ ಇರುವು ದರಿಂದ ಬೇಕಾ ಬಿಟ್ಟಿಯಾಗಿ ಹೂ ಮುಂದಿಟ್ಟು ಕಾಟಾಚಾರಕ್ಕೆ ಆಚರಣೆ ಮಾಡಿ ಅಪಮಾನ ಮಾಡಿದ್ದಾರೆ.
ಗ್ರಾಮ ಪಂಚಾಯತಿಯಲ್ಲಿ ಪಿಡಿಒ ಅವರು
ಶರಣ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಮಾಡಲು ಗ್ರಾಪಂ ಕಚೇರಿಗೆ ಬಾರದೇ ನಿರಾಕರಿಸಿದ್ದಾರೆ. ನಂತರ ಗ್ರಾಮದ ಸಮಾಜದ ಮುಖಂಡರು ಫೋನ್ ಮೂಲಕ ಸಂಪರ್ಕಿಸಿ ಜಯಂತಿ ಮಾಡಬೇಕೆಂದು ಕೇಳಿದಾಗ ಸಿಬ್ಬಂದಿಗೆ ಹೇಳಿ ಕಾಟಚಾರಕ್ಕೆ ಫೋಟೊ ಇಟ್ಟು ಒಂದು ಹೂವಿನ ಹಾರ ಹಾಕದೇ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ.
ಮಡಿವಾಳ ಮಾಚಿದೇವ ಶರಣರ ಜಯಂತಿ ಯನ್ನು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಚರಿ ಸಲು ಸರ್ಕಾರದ ಆದೇಶವಿದ್ದರೂ ಶಾಖವಾದಿ ಗ್ರಾಮ ಪಂಚಾಯತಿಯಲ್ಲಿ ಆಚರಣೆ ಮಾಡದೇ ಸಿಬ್ಬಂದಿಗಳಿಂದ ಕಾಟಚಾರಕ್ಕಾಗಿ ಫೋಟೋ ಇಟ್ಟು ಆಚರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಆಚರಣೆಯಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು ಸೇರಿದಂತೆ ಸರ್ಕಾರದ ಅಧಿಕಾರಿಗಳು ಯಾರು ಕೂಡ ಭಾಗವಹಿಸದೇ ಜಯಂತಿಗೆ ಅವಮಾನ ಮಾಡಿದ್ದಲ್ಲದೇ, ಪಂಚಾಯತಿ ಆವರಣದಲ್ಲಿರುವ ಹೂವಿನ ಗಿಡದ ತುಂಡು ಮುರಿದು ಪೋಟೋ ಮುಂದೆ ಇಡಲಾಗಿದೆ. ಒಂದು ಹಾರ ತಂದು ಜಯಂತಿ ಮಾಡಲು ಅಧಿಕಾರಿಗಳಿಗೆ ಸಮಯ ಇರಲಿಲ್ಲವೆಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ಆಚರಣೆ ಮಾಡಿ ಶರಣರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆಂದು ಗ್ರಾಮದ ಸಮಾಜ ಮುಖಂಡರು ಆರೋಪಿಸಿದ್ದಾರೆ.