ರಾಯಚೂರು. ಲೋಕಸಭೆ ಚುನಾವಣೆ ನಿಮಿತ್ತ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಯಾವುದೇ ಸಭೆ, ಸಮಾರಂಭ, ವಾಹನಕ್ಕೆ ಅಳವಡಿಸಿ ಪ್ರಚಾ ರ ಕೈಗೊಳ್ಳುವ ಸಂದರ್ಭಗಳಲ್ಲಿ ‘ಧ್ವನಿವರ್ಧಕ’ ಗಳನ್ನು ಬಳಸಬೇಕಾದಲ್ಲಿ ಮುಂಚಿತವಾಗಿ ಆಯೋಜಕರು ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಲಾ ಪಕ್ಷಗಳು ಪ್ರಚಾರ ಮಾಡಲು ಜಿಲ್ಲಾ ಪೋಲಿಸ್ ಇಲಾಖೆಯಿಂದ ಮುಂಚಿತವಾಗಿ ಪರವಾನಗಿಯನ್ನು ಪಡೆದುಕೊ ಳ್ಳಬೇಕು, ಪರವಾನಗಿ ಪಡೆದ ಸ್ಥಳ ಅಥವಾ ಪ್ರದೇಶದ ವ್ಯಾಪ್ತಿಯಿಂದ ಹೊರಗೆ ಧ್ವನಿವರ್ಧ ಕವನ್ನು ಬಳಸತಕ್ಕದ್ದಲ್ಲ, ಪ್ರಚಾರದ ಸಮಯವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಧ್ವನಿವರ್ಧಕವನ್ನು ಷರತ್ತು ಬದ್ಧವಾಗಿ ಬಳಸತಕ್ಕದ್ದು. ಒಂದು ವೇಳೆ
ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಈ ಹಿನ್ನೆಲೆಯಲ್ಲಿ ಯಾವುದೇ ಸಭೆ, ಸಮಾರಂಭ, ವಾಹನಗಳಕ್ಕೆ ಮೈಕ್ ಅಳವಡಿಕೆ ಧ್ವನಿ ವರ್ಧಕ ಬಳಕೆಗೆ ಮುಂಚಿತವಾಗಿ ಪರವಾನಗಿ ಪಡೆದುಕೊಳ್ಳಲು ತಿಳಿಸಿದ್ದಾರೆ.