ರಾಯಚೂರು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹುಂಡಿ ಹೇಳಿಕ ಕಾರ್ಯ ಮುಗಿದಿದ್ದು 8,20,900 ಮೊತ್ತದ ನಾಣ್ಯ, 4,07,11,838 ಮೌಲ್ಯದ ನೋಟುಗಳು ಸೇರಿ ಒಟ್ಟು 4,15,32,738 ನಗದು ಸಂಗ್ರಹದ ಜೊತೆಗೆ 44 ಗ್ರಾಂ ಚಿನ್ನ, 3642 ಗ್ರಾಂ ಬೆಳ್ಳಿ ಆಭರಣಗಳು ಜನರು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದಾರೆ.
ಹುಂಡಿ ಎಣಿಕೆ ಕಾರ್ಯ ಮಠದ ಇತಿಹಾಸದ ಲ್ಲಿಯೇ ಮೊದಲ ಬಾರಿಗೆ ಭಕ್ತರು ಹಾಕಿದ ನಗದು ಹಾಗೂ ಚಿನ್ನಾಭರಣ ದಾಖಲೆಯ ದೇಣಿಗೆ ಸಂಗ್ರಹವಾಗಿದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.