ರಾಯಚೂರು. ಜಿಲ್ಲೆಯಲ್ಲಿ ಫಸಲ್ ಬೀಮಾ ಯೋಜನೆಯ ಬೆಳೆ ವಿಮೆ ಪರಿಹಾರದ ಕಂತು ಪಾವತಿಸದೇ ಬೇರೆಯರ ಖಾತೆಗೆ ಹಾಕಲಾಗಿದೆ, ಈ ಬಗ್ಗೆ ದೂರು ದಾಖಲಾಗಿದ್ದು, ಈ ಪ್ರಕರಣ ಸಿಐಡಿ ತನಿಖೆಗೆ ವಹಿಸಲಾಗಿದೆ, ಅಧಿಕಾರಿಗಳು, ವಿಮಾ ಕಂಪನಿ ದಾರರು ಶಾಮೀಲಾಗಿದ್ದರಿಂದ ಪರಹಾರ ಬೇರೆಯವರ ಖಾತೆಗೆ ಜಮಾ ಮಾಡಲಾಗಿದೆ ಯಾರೇ ತಪ್ಪಿತಸ್ಥರಿಲಿ ಶಿಕ್ಷೆಯಾಗಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ರಾಯಚೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಭೋಗಾವತಿ ಗ್ರಾಮದಲ್ಲಿ 2022-23ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆ ಪರಿಹಾರ ಅಕ್ರಮಕ್ಕೆ ಸಂಬಂಧಿಸಿ ದಂತೆ ದೂರು ನೀಡಲಾಗಿದೆ, ಪ್ರಕರಣವನ್ನು ಸಿಐಡಿ ತನಿಖೆ ನಡೆಯುತ್ತಿದೆ ಎಂದರು.
ಅಧಿಕಾರಿಗಳು ಮತ್ತು ವಿಮಾ ಕಂಪನಿಯವರು
ರೈತರಿಗೆ ತಿಳಿಯದಂತೆ ತಾವೇ ಖುದ್ದಾಗಿ ವಿಮಾ ಕಂತು ಪಾವತಿಸಿ ಖಾತೆಗಳಿಗೆ ವಿಮಾ ಪರಿಹಾರ ಮೊತ್ತವನ್ನು ವರ್ಗಾಯಿಸಿಕೊಂಡಿದ್ದಾರೆ.
ಅಧಿಕಾರಿಗಳು ಮತ್ತು ವಿಮಾ ಕಂಪನಿದಾರಿಲ್ಲದೆ ಹಣ ವರ್ಗಾವಣೆಯಾಗಲು ಸಾಧ್ಯವಿಲ್ಲ, ಈ ಕುರಿತು ಕೃಷಿ ಜಂಟಿ ನಿರ್ದೇಶಕ ಜೊತೆ ಮಾತನಾಡಲಾಗಿದೆ, ಹಣ ವರ್ಗಾವಣೆ ಯಾರು ಮಾಡುತ್ತಿದ್ದಾರೆಂಬುದು ಮುಖ್ಯವಾಗಿದ್ದು, ಕಂದಾಯ ಅಧಿಕಾರಿಗಳಾಗಿರಲಿ, ಕೃಷಿ ಇಲಾಖೆ ಅಧಿಕಾರಿಗಳಾಗಿರಲಿ ಅವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು.
ರೈತರಿಗೆ ದೊರೆಯಬೇಕಾದ ವಿಮಾ ಪರಿಹಾ ರವನ್ನು ಅವರಿಗೆ ಸಲ್ಲಬೇಕು, ಮುಂದೆ ಇಂತಹ ಘಟನೆಯಾಗದಂತೆ ಶಿಸ್ತು ಕ್ರಮ ವಹಿಸಲಾ ಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಜಯಣ್ಣ, ಬಸವರಾಜರೆಡ್ಡಿ, ಇದ್ದರು.