ರಾಯಚೂರು: ಬೆಂಗಳೂರಿನಲ್ಲಿ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ನಮಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರೊಂದಿಗೆ ಮಾತ ನಾಡಿ, ಇಸ್ರೋ ಭೇಟಿಗೆ ಪ್ರಧಾನಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ ಅನ್ನೋ ಆರೋ ಪದ ಬಗ್ಗೆ ನಾನು ಮಾತನಾಡಲ್ಲ. ನಮ್ಮನ್ನ ಬಿಡಿ, ಈ ಹಿಂದೆ ಅವರು ಬಂದಾಗ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪನ್ನೇ ಕರೆದಿರಲಿಲ್ಲ. ಅದರ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಅವರು ಪ್ರಧಾನ ಮಂತ್ರಿಗಳು, ಕೇಂದ್ರ ಸರ್ಕಾರ ಅದು. ಅವರ ಪ್ರೋಟೊಕಾಲ್ ಏನಿದೆ ನನಗೆ ಗೊತ್ತಿಲ್ಲ. ನಮ್ಮನ್ನ ಕರೆದಿದ್ರೆ ಸರ್ಕಾರದ ಪರ ಯಾರಾದರು ಪ್ರತಿನಿಧಿಸುತ್ತಿದ್ದೆವು, ಆದ್ರೆ ಸರ್ಕಾರಕ್ಕೇನೂ ಮಾಹಿತಿ ಬಂದಂತೆ ಇಲ್ಲ ಎಂದು ಹೇಳಿದರು.
ಚಂದ್ರಯಾನ 3 ತಲುಪಿದ ಸ್ಥಳಕ್ಕೆ ಶಿವಶಕ್ತಿ,
ಚಂದ್ರಯಾನ 2ಕ್ಕೆ ತಿರಂಗಾ ಪಾಯಿಂಟ್ ಹೊಸ ಹೆಸರುಗಳ ನಾಮಕರಣ ವಿಚಾರವಾಗಿ ರಾಜ್ಯದ ಜನ, ದೇಶದ ಜನ ಈ ಬಗ್ಗೆ ತೀರ್ಮಾನ ಮಾಡ ಬೇಕು. ಏನೇನು ಮಾಡ್ತಿದ್ದಾರೆ,ಯಾವ ಕಾರಣಕ್ಕೆ ಮಾಡ್ತಿದ್ದಾರೆ. ಯಾವ ಆಧಾರದ ಮೇಲೆ ಮಾಡ್ತಾರೆ ಜನರೇ ತೀರ್ಮಾನ ಮಾಡಬೇಕು. ನಾವೇನಾದ್ರು ಮಾತನಾಡಿದ್ರೆ ಕಾಮೆಂಟ್ ಶುರುವಾಗುತ್ತೆ. ನಮ್ಮ ಸರ್ಕಾರ, ಪಕ್ಷ, ತತ್ವ ಸಿದ್ದಾಂತ ಇರೋದು, ದೇಶದ ಎಲ್ಲಾ ಧರ್ಮ ಜಾತಿ ಜನರ,ಅಭಿವೃದ್ಧಿಗೆ ಇದ್ದೇವೆ. ಅವರು ಯಾಕೆ ಮಾಡ್ತಿದ್ದಾರೆ, ಏನು ಮಾಡ್ತಿದ್ದಾರೆ ಅಂತ ಜನರೇ ತೀರ್ಮಾನ ಮಾಡ್ತಾರೆ.
ಚರ್ಚೆ ನಡೀತಿದೆ, ಆ ಬಗ್ಗೆ ಮಂತ್ರಿಯಾಗಿ ಕಮೆಂಟ್ ಮಾಡಲ್ಲ ಬೋಸರಾಜು ಹೇಳಿದ್ದಾರೆ.