Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರವಿದ್ದಾಗ ಅಭಿವೃದ್ಧಿ ಸಾಧ್ಯ – ಸಚಿವ ಎನ್ ಎಸ್ ಬೋಸರಾಜು

ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರವಿದ್ದಾಗ ಅಭಿವೃದ್ಧಿ ಸಾಧ್ಯ – ಸಚಿವ ಎನ್ ಎಸ್ ಬೋಸರಾಜು

ರಾಯಚೂರು. ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ನವೀಕರಣಗೊಂಡಿದ್ದು, ಕಲಾವಿದರು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು, ಹಾಗೂ ಸರ್ಕಾರದ ಆಸ್ತಿಯನ್ನು ಕಾಪಾಡಿಕೊಳ್ಳಲು ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಬೋಸರಾಜ ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ನವೀಕರಣಗೊಂಡ ರಂಗಮಂದಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ರಂಗಮಂದಿರ ಹಿಂದೆ 1992ರಲ್ಲಿ ನಿರ್ಮಾಣವಾಗಿತ್ತು, ಅಂದಿನಿಂದ ಇಲ್ಲಿಯವರೆಗೆ ಕಾಲಕಾಲಕ್ಕೆ ನವೀಕರಣ ಮಾಡಲಾಗಿದೆ, ಜನರ ಅಪೇಕ್ಷೆಯಂತೆ ನವೀಕರಣ ಮಾಡಿದ್ದು, ಜನರು ಸಹ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು, ರಂಗಮಂದಿರ ಇದು ತಮ್ಮ ಆಸ್ತಿಯಾಗಿದ್ದು ಕಾಪಾಡಿಕೊಂಡು ಹೋಗಬೇಕು ಎಂದರು.
ಶಾಲೆಗಳು, ರಂಗಮಂದಿರ, ಕ್ರೀಡಾಂಗಣ ಸೇರಿ ಬಹುತೇಕ ಜನರ ಬಳಕೆ ಮಾಡಿಕೊಳ್ಳಲು ಸರ್ಕಾರದಿಂದ ಅನುದಾನ ಖರ್ಚು ಮಾಡಲಾಗಿದೆ, ಜನರು ಸರಿಯಾಗಿ ಉಪಯೋಗ ಮಾಡಿಕೊಳ್ಳದಿದ್ದರೆ ಅದು ಮಾಡಿದ್ದು ಸಾರ್ಥಕವಿಲ್ಲದಂತೆ, ಮಾಡಿದನ್ನು ಉಳಿಸಿಕೊಂ ಡು ಹೋಗಬೇಕು ಎಂದು ತಿಳಿಸಿದರು.
ಕೆಕೆಆರ್‌ಡಿಬಿಯಿಂದ 3 ಕೋಟಿ ವೆಚ್ಚದಲ್ಲಿ ರಂಗಮಂದಿರದಲ್ಲಿ ಜನರ ಬೇಡಿಕೆಯಂತೆ ಚೇರ್, ಬೆಳಕಿನ ವ್ಯವಸ್ಥೆ, ವಿದ್ಯುತ್, ಧ್ವನಿ ವರ್ಧಕ ಸೇರಿ ದಂತೆ ಬಹುತೇಕ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗಿದೆ, ಸರ್ಕಾರದ ಯೋಜನೆಗಳು ಜನರಿಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಸಮಾಜದ ಅಭಿವೃದ್ಧಿಗೆ 1.50 ಕೋಟಿ ನೀಡಲಾಗಿದ್ದು, ಎರಡು ತಿಂಗಳಲ್ಲಿ ಕೆಲಸ ಪೂರ್ಣ ವಾಗಲಿದೆ, ಕರ್ನಾಟಕ ಸಂಘದ ಅನುದಾನ ನೀಡಿದೆ, ಅದು ಕೆಲಸ ನಡೆಯುತ್ತಿದೆ, ನಗರದಲ್ಲಿ ಕೆಲ ಸರ್ಕಾರಿ ಶಾಲೆಗಳ ಕಟ್ಟಡಗಳು ದುರಸ್ತಿಯಲ್ಲಿದ್ದು, ಅವುಗಳ ನಿರ್ಮಿಸಿ ಮರು ಬಳಕೆ ಮಾಡಿಕೊಳ್ಳಬೇಕಾಗಿದೆ, ಕೆಕೆಆರ್‌ಡಿಬಿ ಯಲ್ಲಿ ಸಾಕಷ್ಟು ಅನುದಾನವಿದೆ, ಆದರೆ ಬಳಕೆಯಾಗುತ್ತಿಲ್ಲ, ಇತ್ತೀಚಿಗೆ ಸಭೆ ಮಾಡಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶೇ 25 ರಷ್ಟು ಅನುದಾನ ನಿಗದಿಪಡಿಸಿದೆ, ಈಗಾಗಲೇ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ, ಶಾಲೆಗಳು, ಅಂಗನವಾಡಿ, ಸೇರಿ ಶಿಕ್ಷಣದ ಅಭಿವೃದ್ಧಿಗೆ ಮೀಸಲಿಡಲಾಗಿದೆ,ಈ ಹಿಂದಿನ 2500 ಕೋಟಿ ಬಳಕೆಯಾಗಿಲ್ಲ ಅದರ ಜೊತೆಗೆ 3 ಸಾವಿರ ಕೋಟಿ ಜಮಾ ಇದೆ, ಮುಖ್ಯಮಂತ್ರಿಗಳು 5 ಸಾವಿರ ಕೋಟಿ ನೀಡಲು ಸಿದ್ದರಿದ್ದಾರೆ, ಆದರೆ ಉಳಿದ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ಈ ಹಿಂದೆ ರಂಗಮಂದಿರ 75 ಲಕ್ಷದಲ್ಲಿ ನವೀಕರಣ ಮಾಡಲಾಗಿತ್ತು, ಚೇರ್, ಸೇರಿದಂತೆ ಇತರೆ ಕಾಮಗಾರಿ ಮಾಡಲಾಗಿದೆ, ಜನರ ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಸಂಪೂರ್ಣ ನವೀಕರಣ ಮಾಡಲು ಸಭೆ ಮಾಡಿ ಇದೀಗ ನವೀಕರಣ ಮಾಡಲಾಗಿದೆ, ಉತ್ತಮ ಧ್ವಜ ವರ್ಧಕ, ಲೈಟಿಂಗ್, ಚೇರ್, ಶೌಚಾಲಯ, ಕುಡಿಯುವ ನೀರು, ರಂಗಮಂದಿರದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ, ( ಎಸಿ) ಅಳವಡಿಕೆ ಮಾಡಿದೆ, ರಂಗಮಂದಿರ ಸಾರ್ವಜನಿಕರ ಆಸ್ತಿಯಾಗಿದ್ದು ಅಧಿಕಾರಿಗಳ ಜೊತೆಗೆ ಕಾಪಾಡಿಕೊಳ್ಳಲು ಜನರ ಜವಾಬ್ದಾರಿ ಮುಖ್ಯವಾಗಿದೆ ಎಂದರು.
ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದ ಅಭಿವೃದ್ಧಿಗೆ ಜನರು ಸಹಕಾರ ನೀಡಬೇಕು, ಸಾಕಷ್ಟು ರಾಜ್ಯದಲ್ಲಿ ಸಾಕಷ್ಟು ಕೆರೆಗಳು ಅಭಿವೃದ್ಧಿಯಾಗಿವೆ, ರಾಯಚೂರಿನಲ್ಲಿ ಮಾವಿನಕೆರೆ ಅಭಿವೃದ್ಧಿ ಸಾಕಷ್ಟು ತೊಡಕು ಉಂಟಾಗಿದೆ, 115 ಎಕರೆಯಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಸದಸ್ಯ ಜಯಣ್ಣ, ಶಶಿರಾಜ, ಜಿ.ಶಿವಮೂರ್ತಿ,ರವಿಂದ್ರ ಜಲ್ದಾರ್, ಕೆ.ಶಾಂತಪ್ಪ, ಕಡಗೋಲ್ ಆಂಜ ನೇಯ, ನರಸಿಂಹಲು ಮಾಡಗಿರಿ, ಶ್ರೀನಿವಾಸ ರೆಡ್ಡಿ, ಪೋಗಲ್ ಶ್ರೀನಿವಾಸ, ನರಸರೆಡ್ಡಿ ಸೇರಿದಂತೆ ಅನೇಕರು ಇದ್ದರು.

Megha News