Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಮಹಿಳಾ ನೌಕರ ಜೊತೆ ಅಸಭ್ಯವರ್ತನೆ, ಜೆಸ್ಕಾಂ ಎಇಇ ಶ್ರೀನಿವಾಸ ಅಮಾನತ್

ಮಹಿಳಾ ನೌಕರ ಜೊತೆ ಅಸಭ್ಯವರ್ತನೆ, ಜೆಸ್ಕಾಂ ಎಇಇ ಶ್ರೀನಿವಾಸ ಅಮಾನತ್

ರಾಯಚೂರು. ಜೆಸ್ಕಾಂ ಮಹಿಳಾ ಅಭಿಯಂತರ ಜೊತೆ ಅಸಭ್ಯವರ್ತನೆ ಆರೋಪದ ಮೇಲೆ ಜೆಸ್ಕಾಂ ರಾಯಚೂರು ಎಇಇ ಶ್ರೀನಿವಾಸ ಅವರನ್ನು ಸೇವೆಯಿಂದ ಅಮಾನತ್ತು ಗೊಳಿಸಿ ಕವಿಪ್ರನಿನಿ ನಿರ್ದೇಶಕರು( ಆ ಮತ್ತು ಮಾ.ಸಂ) ಆದೇಶ ಹೊರಡಿಸಿದ್ದಾರೆ.

ಮಹಿಳಾ ಕಿರಿಯ ಇಂಜಿನಿಯರ್ (ವಿ) 220 ಕೆವಿ ಸ್ವೀಕರಣಾ ಕೇಂದ್ರ ಕವಿಪ್ರನಿನಿ ರಾಯಚೂರು ಅವರು ಅಧೀಕ್ಷಕ ಇಂಜಿನಿಯರ್ (ವಿ)ಪ್ರಸರಣ (ಕಾ.ಮತ್ತು ನಿ) ವೃತ, ಕವಿಪ್ರನಿನಿ ಮುನಿರಾ ಬಾದ್ ಅವರಿಗೆ ದಿ.26-8-2023 ರಂದು ದೂರು ಸಲ್ಲಿಸಿ,ಡಿ.25-8-23 ರಂದು ರಾತ್ರಿ ಪಾಳಿ ಕೆಲಸಕ್ಕೆ ಹಾರರಾಗಿದ್ದು, ದಿ.26-8-23ರ ಬೆಳಿಗ್ಗೆ 7 ಗಂಟೆ ಹಿಂದ 11 ಗಂಟೆಯವರೆಗೆ ವಿದ್ಯುತ್ ಮಾಪಕಗಳ ರೀಡಿಂಗ್ ತೆಗೆದುಕೊಂಡು ಬರಲು ಹೋದ ಸಮಯದಲ್ಲಿ ಶ್ರೀನಿವಾಸ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) 220
ಕೆವಿ ಸ್ವೀರಣಾ ಕೇಂದ್ರ ಕವಿಪ್ರನಿನಿ ರಾಯಚೂರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿರುವುದಾಗಿ ತಿಳಿಸಿ ಅಧಿಕಾರಿ ವಿರುದ್ಧ ಸೂಕ್ತಕ್ರಮಕ್ಕೆ ಕೋರಿದ್ದರು.
ಅಧೀಕ್ಷಕ ಇಂಜಿನಯಿರ್ (ವಿ) ಪ್ರಸರಣ (ಕಾ ಮತ್ತು ನಿ) ವೃತ,ಕಕವಿಪ್ರನಿನಿ ಮುನರಾಬಾದ್ ದಿ.30-8-23ರ ವರದಿಯಲ್ಲಿ ದಿ.29-8-23ರಂದು ರಾಯಚೂರು 220 ಕೆವಿ ಸ್ವೀಕರಣಾ ಕೇಂದ್ರಕ್ಕೆ ಭೇಟಿ ನೀಡದ ಸಂದರ್ಭದಲ್ಲಿ ಎಲ್ಲಾ ಮಹಿಳಾ ಅಧಿಕಾರಿಗಳು ಮತ್ತು ನೌಕರರೊಂದಿಗೆ ಚರ್ಚಿಸಿದ್ದು ತಿಳಿದು ಬಂದ ಮಾಹಿತಿ ಪ್ರಕಾರ ಮತ್ತು ದಿ.26-8-23 ರಂದು ಶ್ರೀನಿವಾಸ ಸ.ಕಾ. ಇಂ(ವಿ) 220 ಕೆವಿ ಸ್ವೀಕಣಾ ಕೇಂದ್ರಕ್ಕೆ ಭೇಟಿ ನೀಡಿರುವುದು ನಿಜವಿದು ಘಟನೆ ನಡೆದಿರಬ ಹುದೆಂದು ಮೇಲ್ನೋಟಕ್ಕೆ ತಿಳಿದು ಬರುವುದ ರಿಂದ ಅಗತ್ಯ ಕ್ರಮ ಜರುಗಿಸುವಂತೆ ಮುಖ್ಯ ಇಂಜಿನಿಯರ್ (ವಿ) ಪ್ರಸರ ವಲಯ, ಕವಿಪ್ರನಿನಿ ಕಲಬುರಗಿರವರನ್ನು ಕೋರಿದ್ದರು.
ಅಧಿಕ್ಷಕ ಇಂಜಿನಯರ್ (ವಿ) ಪ್ರಸರಣ (ಕಾ ಮತ್ತು ನ) ವೃತ ಕವಿಪ್ರನಿನಿ ಮುನಿರಾಬಾದ್ ದಿ.30-8-23ರ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿ, ವರದಿಯನ್ನು ಒಪ್ಪಬಹು ದಾಗಿದೆ ಎಂದು ತಿಳಿಸುತ್ತಾ, ಶ್ರೀನಿವಾಸ ಸ.ಕಾಇಂ(ವಿ) ರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಇಂಜಿನಿಯರ್ (ವಿ) ಪ್ರಸರಣ ವಲಯ ಕವಿಪ್ರನಿನಿ, ಕಲಬುರಗಿ ರವರು ದಿ.31-8-23 ಪತ್ರದಲ್ಲಿ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಶ್ರೀನಿವಾಸ ಸಹಾಯಕ ಕಾರ್ಯನಿವಾಹಕ ಇಂಜಿನಿಯರ (ವಿ)220 ಕೆವಿ ಸ್ವೀಕರಣಾ ಕೇಂದ್ರ ಕವಿಪ್ರನಿನಿ, ರಾಯಚೂರು ರವರ ವಿರದ್ದ ಇಲಾಖ ವಿಚಾರಣೆ ಹೂಡುವ ಹಕ್ಕನ್ನು ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನುತ್ತುಗೊಳಿಸಿ ನಿರ್ದೇಶಕರು (ಆ ಮತ್ತು ಮಾ.ಸಂ)ಆದೇಶ ಹೊರಡಿಸಿದ್ದಾರೆ.

 

 

Megha News