ಸಿಂಧನೂರು. ತಾಲ್ಲೂಕಿನ ಮಲ್ಲದಗುಡ್ಡದ ಬಳಿ ನಿಂತಿದ್ದ ಲಾರಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ನ ನಿರ್ವಾಹಕ ಸೇರಿ 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಸಿಂಧನೂರಿನಿಂದ ಅಂಕಲಿಮಠಕ್ಕೆ ಹೊರಟಿದ್ದ ಬಸ್ ಮಲ್ಲದಗುಡ್ಡ ಗ್ರಾಮದ ಹತ್ತಿರ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಬಸ್ ನಲ್ಲಿದ್ದ ಬಸ್ನ ನಿರ್ವಾಹಕ ಹುಸೇನ್ ಅವರ ಎರಡು ಕಾಲುಗಳು ಕಟ್ ಆಗಿದ್ದು, ಉಳಿದಂತೆ ಬಸ್ ನಲ್ಲಿ ಪ್ರಯಾಣಿ ಸುತ್ತಿದ್ದ 20ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. ಅದರಲ್ಲಿ 6 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಗಂಭೀರ ಸ್ಥಿತಿ ಇದ್ದವರಿಗೆ ಬಳ್ಳಾರಿ ಹಾಗೂ ರಾಯಚೂರು ಆಸ್ಪತ್ರೆಗೆ ಕಳುಹಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸಂಚಾರಿ ಪೊಲೀಸ್ ಠಾಣೆಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.