ರಾಯಚೂರು: ರಾಯಚೂರು ಮಹಾನಗರ ಪಾಲಿಕೆಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನಧೀಕೃತವಾಗಿ ಹಾಕಲಾದ ಶೆಡ್‌ಗಳು, ಡಬ್ಬಾ ಅಂಗಂಡಿಗಳನ್ನು ತೆರವು ಗೊಳಿಸಿ ವಂತೆ ಹೊರಡಿಸಲಾದ ಆದೇಶದ ಹಿನ್ನೆಲೆ ನಗರದ ಹೈದ್ರಾಬಾದ್ ರಸ್ತೆಯ ಒಪೆಕ್ ಆಸ್ಪತ್ರೆಯ ಕಾಂಪೌಂಡ್ ಗೆ ಹತ್ತಿಕೊಂಡು ನಿರ್ಮಿಸಲಾಗಿದ್ದ ಶೆಡ್, ಡಬ್ಬಾ ಅಂಗಡಿಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು.
ಜಿಲ್ಲಾಧಿಕಾರಿಗಳು, ಪಾಲಿಕೆ ಉಪ ಆಯುಕ್ತರ ಆದೇಶದ ಮೇರೆಗೆ ಆರೋಗ್ಯ ನಿರೀಕ್ಷಕ ಮಹ್ಮದ್ ಖಾನ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಮೇಶ, ಅಶೋಕ ಹಾಗೂ ಮುರುಳಿಗೌಡ ಇದ್ದರು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸೇರಿದಂತೆ ರಾಜ್ಯ ಹೆದ್ದಾರಿ-30, ರಾಷ್ಟ್ರೀಯ ಹೆದ್ದಾರಿ 150-ಎ ರಲ್ಲಿನ ರಸ್ತೆಗಳನ್ನು ಒತ್ತುವರಿ ಮಾಡಿ ಶೆಡ್‌ಗಳು, ಡಬ್ಬಾ ಅಂಗಡಿಗಳನ್ನು ಮತ್ತು ಡಾಬಾಗಳನ್ನು
ರಿಜಿಸ್ಟ್ರಾರ್ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಬೆಂಗಳೂರು ರವರ ರಾಯಚೂರು ಜಿಲ್ಲೆ. ಸಿಂಧನೂರು ತಾಲೂಕು, ಸ್ಟೇಟ್ ಹೈವೇ-30 ನ್ಯಾಷಲ್ ಹೈವೇ 150-ಎ ರಲ್ಲಿನ ರಸ್ತೆ (ಮಾನ್ಯ ಜಿಲ್ಲಾಧಿಕಾರಿಗಳ ವಸತಿ ಗೃಹ ರಸ್ತೆಯಿಂದ ಸಾತ್‌ಮೈಲ್ ರಸ್ತೆಯವರೆಡಗೆ) ಗಡಿಗಳನ್ನು ಒತ್ತುವರಿ ಮಾಡಿ ಶೆಡ್ ಮತ್ತು ಡಾಬಾಗಳನ್ನು ಹಾಕಿಕೊಂಡಿರುವ ಬಗ್ಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು. ಪ್ರಕರಣವನ್ನು ದಾಖಲಿಸಿ, ವಿಚಾರಣೆ ನಿಗಧಿಪಡಿಸಿದ್ದರು.
ರಾಯಚೂರು ಜಿಲ್ಲೆ. ಸಿಂಧನೂರು ತಾಲೂಕು. ಸ್ಟೇಟ್ ಹೈವೇ-30 ನ್ಯಾಸ್ಕಲ್ ಹೈವೇ 150-ಎ ರಲ್ಲಿನ ರಸ್ತೆ (ಮಾನ್ಯ ಜಿಲ್ಲಾಧಿಕಾರಿಗಳ ವಸತಿ ಗೃಹ ರಸ್ತೆಯಿಂದ ಸಾತ್‌ಮೈಲ್ ರಸ್ತೆಯವರೆಡಗೆ) ಗಡಿಗಳನ್ನು ಒತ್ತುವರಿ ಮಾಡಿ ಶೆಡ್ ಮತ್ತು ಡಾಬಾಗಳನ್ನು ಹಾಕಿಕೊಂಡಿರುವ ವ್ಯಾಪಾರಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ಕೂಡಲೇ ತಮ್ಮ ಡಬ್ಬಿ ಮತ್ತು ಶೆಡ್ ಅಂಗಡಿಗಳನ್ನು ಅತ್ಯಂತ ತುರ್ತಾಗಿ ತೆರವುಗೊಳಿಸಿ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕೆಂದು ಹಾಗೂ ಒಂದುವೇಳೆ ನಾವು ತೆರವುಗೊಳಿಸುವ ಸಂದರ್ಭದಲ್ಲಿ ತಮ್ಮ ಯಾವುದೇ ಡಬ್ಬಿಗಳು ಶೆಡ್ ಗಳು, ಸರಕುಗಳು ಜಖಂಗೊಂಡಲ್ಲಿ ಈ ಕಛೇರಿಯು ಜವಾಬ್ದಾರರಾಗಿರುವುದಿಲ್ಲ. ಹಾಗೂ ಯಾವುದೇ ನಷ್ಟ ಪರಿಹಾರವನ್ನು ಕೊಡಲಾಗವುದು ಎಂದು ಈ ಸಾರ್ವಜನಿಕ ಪ್ರಕರಣೆಯ ಮೂಲಕ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿತ್ತು. ಇದೀಗ ಅನಧೀಕೃತವಾಗಿ ಹಾಕಿಕೊಳ್ಳಲಾಗಿದ್ದ ರಸ್ತೆ ಬದಿಯ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು.