Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Local News

ಮಾವಿನಕೆರೆಗೆ ನಗರಸಭೆ ಮತ್ತು ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಕಸ ಸುರಿಯುತ್ತಿದ್ದಾರೆ

ಮಾವಿನಕೆರೆಗೆ ನಗರಸಭೆ ಮತ್ತು ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಕಸ ಸುರಿಯುತ್ತಿದ್ದಾರೆ

ರಾಯಚೂರು. ಮಾವಿನ ಕೆರೆಯಲ್ಲಿ ನಗರಸಭೆ ಮತ್ತು ಸಾರ್ವಜನಿಕರು ಉದ್ದೇಶಪೂರ್ವಕವಾಗಿ ಕಸವನ್ನು ತಂದು ಸುರಿಯುತ್ತಿದ್ದಾರೆ, ಈ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಮಾರುತಿ ಬಗಾಡೆ ಕಳವಳ ವ್ಯಕ್ತಪಡಿಸಿದ್ದರು.

ನಗರದ ಮಾವಿನ ಕೆರೆಯ ಹತ್ತಿರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಮಾವಿನ ಕೆರೆ ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಾತನಾಡಿದರು,
ಜಿಲ್ಲೆಗೆ ಮೊದಲ ಬಾರಿಗೆ ಬೇಟಿ ಕೊಟ್ಟಾದ ಸುಂದರವಾದ ಮಾನವಿಕೆರೆ ನೋಡಿ ಸಂತೋಷವಾಗಿತ್ತು, ಆದರೆ ಮಾನವಿಕೆರೆಯ ಸುತ್ತಲೂ ನಗರಸಭೆ, ಮತ್ತು ಸಾರ್ವಜನಿಕರು ಕಸ ಸೇರಿದಂತೆ ಇತರೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ, ಈ ಬಗ್ಗೆ ಯಾರೂ ಸಹ ಪ್ರಶ್ನೆ ಮಾಡುತ್ತಿಲ್ಲ, ಉದ್ದೇಶ ಪೂರ್ವಕವಾಗಿ ತಂದು ಹಾಕುತ್ತಿದ್ದಾರೆ ಎಂದು ವಿಶಾಷ ವ್ಯಕ್ತಪಡಿಸಿದರು.
ಮಾವಿನಕೆರೆ ಅತ್ಯಂತ ಸುಂದರವಾಗಿದ್ದು, ಇದನ್ನು ಪ್ರವಾಸಿ ತಾಣ ಮಾಡಬೇಕಿದೆ, ಶಾಸಕರು, ಸಚಿವರು ಮುತುವರ್ಜಿ ವಹಿಸಬೇಕಿದೆ, ಕೆರೆ ಒಂದು ಭಾಗದಲ್ಲಿ ಕೆರೆ ಒತ್ತುವರಿಯಾಗಿದೆ, ಕಳೆದ 5 ವರ್ಷಗಳಿಂದ ಪ್ರಕರಣ ಮೂಲೆ ಸೇರಿದೆ, ಈ ಬಗ್ಗೆ ಯಾರು ಚಕಾರವೆತ್ತಿಲ್ಲ ಎಂದರು.
ಕೂಡಲೇ ಜಿಲ್ಲಾಡಳಿತ, ನಗರಸಭೆ ಎಚ್ಚೆತ್ತು ಕೊಂಡು 15 ದಿನಗಳ ಒಳಗಾಗಿ ಕೆರೆಯ ಸುತ್ತಲೂ ಇರುವ ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ಬಾರ್ಡರ್ ಹಾಕಬೇಕು, ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಕೆರೆಗೆ ಚರಂಡಿ ನೀರು ಸೇರುತ್ತಿದೆ, ಹಾಗೂ ಖಸಾಯಿ ಖಾನಿಯ ತ್ಯಾಜ್ಯ ತಂದು ಹಾಕುತಿದ್ದಾರೆ, ಊಟದ ಪ್ಲಾಸ್ಟಿಕ್ ತಟ್ಟೆಗಳು ಎಸೆಯುತ್ತಿದ್ದಾರೆ, ಕೆರೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.
ಕೆರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು, ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿ, ಕೆರೆಯನ್ನು ಸ್ವಚ್ಚತೆ ಮಾಡಿ, ಕೆರೆಯ ಅಭಿವೃದ್ಧಿಯಾಗುತ್ತದೆ ಎಂದರು.
ಸಚಿವ ಎನ್ ಎಸ್ ಬೋಸರಾಜ ಮಾತನಾಡಿ, ಮಹಾತ್ಮ ಗಾಂಧಿ ಅವರ ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು, ಜನರು ಸಹ ಸಹಕಾರ ಮಾಡಿದಾಗ ಮಾತ್ರ ಅವರ ಆಶಯಕ್ಕೆ ಈಡೇರಲು ಸಾಧ್ಯ, ಮದ್ಯಪಾನ ನಿಷೇಧ ಮಾಡುವುದು ಗಾಂಧಿಜಿ ಆಶಯವಾಗಿದೆ, ನಿಷೇಧಕ್ಕೆ ಸಾಕಷ್ಟು ಪ್ರಯತ್ನ ನಡೆದಿದೆ, ವಿಫಲವಾಗಿದೆ, ಎಲ್ಲಿಯವರೆಗೆ ಜನರ ಸಹಕಾರ ಮಾಡದಿದ್ದರೆ ಅದು ಈಡೇರಲು ಸಾಧ್ಯವಿಲ್ಲವೆಂದರು.
ಸ್ವಚ್ಚತಾ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಂಡು ಸಾಕಷ್ಟು ಕಡೆ ಮಾಡಲಾಗಿದೆ, ಮಾನವಿಕೆರೆ ಸ್ವಚ್ಚತೆ ಮಾಡಲು ಜನರು ಹೇಳಿದ್ದು, ಜಿಲ್ಲಾಡಳಿತ ಕ್ಕೆ ಸೂಚನೆ ನೀಡಿ ಸ್ವಚ್ಚತೆ ಆದ್ಯತೆ ನೀಡಲಾಗುತ್ತದೆ, ರಾಜ್ಯ ಬಹುತೇಕ ಕಡೆ ನಗರಗಳಲ್ಲಿರುವ ಕೆರೆಗಳ ಅಭಿವೃದ್ಧಿ ಹೊಂದಿವೆ, ನಮ್ಮಲ್ಲಿ ಜನರು ಸಹಕಾರ ಅಗತ್ಯವಿದೆ, ಆದಷ್ಟು ಬೇಗ ಕೆರೆ ಸ್ವಚ್ಚತೆ ಗೊಳಿಸಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಕೆರೆ ಅಭಿವೃದ್ಧಿ ಪ್ರಾಧಿಕಾರವಿದ್ದು ನಗರದಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ನ್ಯಾಯಾಂಗ, ಶಾಸಕಾಂಗ ಸೇರಿ 4 ಅಂಗಗಳು ಒಂದೇ ವೇದಿಕೆಯಲ್ಲಿ ಇಂದು ಸೇರಿವೆ, ಮಾವಿನಕೆರೆ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಾಗುತ್ತದೆ, ಮುತುವರ್ಜಿಯಿಂದ ಅಧಿಕಾರಿಗಳು, ಸಾರ್ವಜನಿಕರು ಸಹಕಾರ ಮಾಡಿ ಸ್ವಚ್ಚತಾ ಕಾರ್ಯ ನಡೆಸಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕುಟುಂಬ. ನ್ಯಾಯಾದೀಶ ಜಗದೀಶ್ವರ, ಅಪರ ಜಿಲ್ಲಾಧಿಕಾರಿ ದುರುಗೇಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.

Megha News