Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಬಿಜೆಪಿಯಲ್ಲಿ ಮುಂದುವರೆದ ಬಂಡಾಯ: ಸಂಘಟನಾತ್ಮಕ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು- ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಮೇಲೆ ಹಲ್ಲೆ

ಬಿಜೆಪಿಯಲ್ಲಿ ಮುಂದುವರೆದ ಬಂಡಾಯ: ಸಂಘಟನಾತ್ಮಕ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು- ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಮೇಲೆ ಹಲ್ಲೆ

ರಾಯಚೂರು. ಬಿಜೆಪಿ ಪಕ್ಷದಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಘಟನಾತ್ಮಕ ಸಭೆಯಲ್ಲಿ ಬಿ.ವಿ.ನಾಯಕ ಬೆಂಬಲಿಗರೊಂದಿಗೆ ಘೊಷಣೆ, ಕೂಗಾಟ, ಚೀರಾಟಕ್ಕೆ ಸಾಕ್ಷಿಯಾಗಿ ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಮೇಲೆ ಕಾರ್ಯಕರ್ತನೊಬ್ಬ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ ಅಗರವಾಲ್ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಸಭೆಗೆ ಆಗಮಿಸಿದ ಬೆಂಬಲಿಗರು ಬಿ.ವಿ.ನಾಯಕರ ಪರ ಘೋಷಣೆ ಹಾಕಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಗೋ ಬ್ಯಾಕ್ ಘೋಷಣೆ ಹಾಕಿದ್ದರಿಂದ ಸಭೆ ಗೊಂದಲಗೂಡಾಯಿತು. ಕಾರ್ಯಕರ್ತರನ್ನು ಸಮಧಾನ ಪಡಿಸಲು ಮುಂದಾದಾಗ ನಗರಸಭೆ ಸದಸ್ಯ ಎನ್.ಕೆ.ನಾಗರಾಜ ಮೇಲೆ ಹಲ್ಲೆ ನಡೆಸಲಾಗಿದೆ. ಪಕ್ಷದ ಪ್ರಮುಖರು ಸಮಧಾನ ಪಡಿಸಲು ಮುಂದಾದರು.ಸಭೆಯಿAದ ಅಭಿಮಾನಿಗಳು ಹೊರ ನಡೆದರು. ನಂತರ ಸ್ಥಳಕ್ಕೆ ಮಾಜಿ ಸಂಸದ ಬಿ.ವಿ.ನಾಯಕ ಆಗಮಿಸಿದಾಗ ಪರಸ್ಥಿತಿ ತಿಳಿಗೊಂಡಿತಾದರು ಅನೇಕರು ಸಭೆಯಿಂದ ಹೊರಹೋದವರು ಮರಳಿ ಬರಲಿಲ್ಲ. ಪಕ್ಷದ ರಾಜ್ಯ ಉಸ್ತುವಾರಿ ಸಮ್ಮುಖದಲ್ಲಿಯೇ ಬಂಡಾಯ ಭುಗಿಲೆದ್ದಿದೆ. ಬೆಳಿಗ್ಗೆಯಿಂದ ಪಕ್ಷದ ಅತೃಪ್ತರೊಂದಿಗೆ ಚರ್ಚೆ ನಡೆಸಿದರೂ ಫಲಪ್ರದವಾಗಲಿಲ್ಲ. ಎಲ್ಲವೂ ಸರಿಹೋಗಿದೆ ಎಂದು ಹೇಳಿಕೊಂಡದ್ದ ಉಸ್ತುವಾರಿ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಬೇಗುದಿ ಬಹಿರಂಗಗೊAಡಿದೆ. ಪರಸ್ಥಿತಿ ತಿಳಿಗೊಂಡ ನಂತರ ಸಂಘಟನಾತ್ಮಕ ಸಭೆ ಮುಂದುವರೆಸಲಾಯಿತು.

Megha News