ರಾಯಚೂರು. ನನ್ನ ಮಣ್ಣು ನನ್ನದೇಶ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಅಯೋದ್ಯ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಂದು ಗ್ರಾಮದಿಂದ ಮಣ್ಣನ್ನು ಕಳುಹಿಸುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರದ ನಂದೀಶ್ವರ ದೇವಸ್ಥಾನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು,
ಈ ಹಿಂದೆ ಅಯೋದ್ಯ ರಾಮಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಕಳಿಸಿದ್ದೇವೆ ಅದರಂತೆ, ದೇಶದ ಗ್ರಾಮದಿಂದ ಮಣ್ಣನ್ನು ಕಳುಹಿಸಿಕೊ ಡಲಾಗುತ್ತಿದೆ, ವಿದೇಶಿ ಅಧಿಕಾರಿಯ ಮೂರ್ತಿ ತೆಗೆದುಹಾಕಿ ಅಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು, ನಾವೆಲ್ಲರೂ ಸೇವಕರು, ಪರಿಕಲ್ಪನೆ ಹಿನ್ನೆಲೆ ಪ್ರತಿಯೊಂದು ಭಾಗದಿಂದ ಮಣ್ಣು ಸಂಗ್ರಹಿಸಿ ಅಯೋದ್ಯದಲ್ಲಿ ಉದ್ಯಾನವನ ನಿರ್ಮಾಣ ಮಾಡುತ್ತಿದ್ದು ಅಲ್ಲಿ ಮಣ್ಣುನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಅಖಂಡ ಭಾರತ ಮಾಡಲು ಹೊರಟಿದ್ದು,ಕಾರ್ಶಿರ ಭಾರತದ ಅವಿಭಾಜ್ಯ ಅಂಗವಾಗಿದೆ, ಕರಾಳ ಶಾಸನ ತೆಗೆದಿದ್ದು, ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಎಂದರು.
ಕಾನೂನು ಬದ್ದವಾಗಿ ಜನವರಿಯಲ್ಲಿ ರಾಮಮಂದಿರ ವನ್ನು ನಿರ್ಮಾಣ ವಾಗುತ್ತಿದೆ ಎಲ್ಲರೂ ಸಲಹೆ ನೀಡಿದ್ದು ಪ್ರತಿಯೊಂದು ಬೂತ ಮಟ್ಟದ ಕಾರ್ಯಕರ್ತ ಅಯೋದ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೇಳಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಶಿವರಾಜ ಪಾಟೀಲ್, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಬಸನಗೌಡ ಬ್ಯಾಗವಟ್,ಕೆ.ಕರಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಪ್ರಧಾನ ಕಾರ್ಯದರ್ಶಿ ಶಂಕರರೆಡ್ಡಿ ಮುಖಂಡ ಎನ್ ಶಂಕ್ರಪ್ಪ, ಸೇರಿದಂತೆ ಅನೇಕರು ಇದ್ದರು.