ಮಂತ್ರಾಲಯ : ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೈನಿಕರ ಶೌರ್ಯ ಅವಿಸ್ಮರಣೀಯವಾಗಿದ್ದು, ಇಂದಿನ ಯುವ ಸಮುದಾಯಕ್ಕೆ ಪ್ರೇರಣಾದಾಯಕವಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಸುಭುದೇಂದ್ರ ತಿರ್ಥ ಸ್ವಾಮೀಜಿ ಹೇಳಿದರು.
ಮಂತ್ರಾಲಯದಲ್ಲಿಂದು ಕಾರ್ಗಿಲ್ ವಿಜಯ್ ದಿವಸ್ ನ 25 ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ಸಿಟಿಜನ್ಸ್ ಸೊಸೈಟಿ ಆಫ್ ಇಂಡಿಯಾ, ಬೆಂಗಳೂರುವತಿಯಿಂದ ಕಾರ್ಗಿಲ್ ಯುದ್ಧದ ವೀರರಿಗೆ ರಾಷ್ಟ್ರವ್ಯಾಪಿ ಶ್ರದ್ಧಾಂಜಲಿ ಅರ್ಪಿಸಲು
“ಶ್ರದ್ಧಾ ಸುಮನ್ ಕಾರ್ಗಿಲ್ ಕಲಶ” ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಭಾರತೀಯ ಸೈನಿಕರ ಶೌರ್ಯ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದು, ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ದೇಶ ಸೇವೆ ಮಾಡಬೇಕು ಎಂದು ಕರೆ ನೀಡಿದರು.
ಸೈನಿಕರು ಹಾಗೂ ಮಾಜಿ ಸೈನಿಕರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವರ ಗಮನಕ್ಕೆ ತರಲಾಗುವುದು ಎಂದರು
ಈ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು.
Megha News > Local News > ದೇಶಾದ್ಯಂತ ಶ್ರದ್ಧಾ ಸುಮನ್ ಕಾರ್ಗಿಲ್ ಕಲಶ ಯಾತ್ರೆಗೆ ಚಾಲನೆ,ಭಾರತೀಯ ಸೈನಿಕರ ಶೌರ್ಯ ಅವಿಸ್ಮರಣೀಯ- ಸುಭುದೇಂದ್ರ ತಿರ್ಥ ಸ್ವಾಮೀಜಿ
ದೇಶಾದ್ಯಂತ ಶ್ರದ್ಧಾ ಸುಮನ್ ಕಾರ್ಗಿಲ್ ಕಲಶ ಯಾತ್ರೆಗೆ ಚಾಲನೆ,ಭಾರತೀಯ ಸೈನಿಕರ ಶೌರ್ಯ ಅವಿಸ್ಮರಣೀಯ- ಸುಭುದೇಂದ್ರ ತಿರ್ಥ ಸ್ವಾಮೀಜಿ
Tayappa - Raichur27/05/2024
posted on
Leave a reply