ರಾಯಚೂರು. ಶಿವಶರಣ ನುಲಿ ಚಂದಯ್ಯ ಅವರ 916ನೇ ಜಯಂತಿ ಅಂಗವಾಗಿ ನೂಲಿ ಚಂದಯ್ಯ ಅವರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕುಳುವ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ನೂಲಿ ಚಂದಯ್ಯ ಅವರ ಭಾವಚಿತ್ರಕ್ಕೆ ಮಾಜಿ ಆರ್‌ಡಿಎ ಅಧ್ಯಕ್ಷ ಗೋಪಾಲರೆಡ್ಡಿ, ಬಿಜೆಪಿ ಮುಖಂಡ ರವಿಂದ್ರ ಜಲ್ದಾರ್ ಅವರು ಪೂಜೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಕೊರವರ ಸಮಾಜದ ಮುಖಂಡರು ನೂಲಿ ಚಂದಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಮೆರವಣಿಗೆಯು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಿಂದ ನಗರಸಭೆ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ರಂಗಮಂದಿರದ ಮೂಲಕ ಕನ್ನಡ ಭವನಕ್ಕೆ ತಲುಪಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಮಂಗಳಾ ನಾಯಕ, ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ, ಕುಳುವ ಮಹಾ ಸಂಘದ ಅಧ್ಯಕ್ಷ ನರಸಿಂಹಲು ಕಮಲಾಪೂರ, ಈರಣ್ಣ, ಬೂದೆಪ್ಪ, ನರಸಿಂಹಲು (ಬ್ರೂಸಲಿ) ಗ್ರಾಮಾಂತರ ಅಧ್ಯಕ್ಷ ಆಂಜನೇಯ ಬಾಯಿದೊಡ್ಡಿ, ರಾಮಚಂದ್ರ ಸಾತ್ಪಡೆ, ಮಹಾದೇವ, ಈರಣ್ಣ ಮಂಗರಾಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.