ರಾಯಚೂರು. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಗಳಲ್ಲಿ ಅತಿಯಾದ ಮಳೆಯಿಂದಾಗಿ ಆಲಮಟ್ಟಿ ಅಣೆಕಟ್ಟಿನಿಂದ 1 ಲಕ್ಷ 20 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ, ನಾರಾಯ ಣಪುರ ಜಲಾಶಯಲ್ಲಿಯೂ ಒಳಹರಿವು ಏರಿಕೆ ಯಾಗಿದ್ದರಿಂದ ನಾರಾಯಣ ಜಲಾಶಯದ 24 ಗೇಟ್ ಗಳಿಂದ ಕೃಷ್ಣಾ ನದಿಗೆ ನಿತ್ಯ 1 ಲಕ್ಷ 80 ಸಾವಿರ ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದಂತೆಲ್ಲಾ ನದಿಗೆ ಹೆಚ್ಚಿನ ಪ್ರಮಾ ಣದಲ್ಲಿ ಬರಲು ಸಾಧ್ಯತೆ ಇದೆ, ನಾರಾಯಣಪುರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾದರೆ 2 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಿಂಗಸೂಗೂರು ತಾಲೂಕಿನ ಶೀಲಹಳ್ಳಿ, ಹಂಚಿನಾಳ ಸೇತುವೆಗೆ ತಲುಪಿದ್ದು ಯಾವುದೇ ಸಮಸ್ಯೆದಲ್ಲಿ ನೀರು ಸೇತುವೆ ಮೇಲೆ ಹರಿಯಬಹುದು, ಈ ಹಿನ್ನೆಲೆಯಲ್ಲಿ ಲಿಂಗಸೂ ಗುರು ತಾಲೂಕಾಡಳಿತವು ಶೀಲಹಳ್ಳಿ ಸೇತುವೆ ಮೇಲೆ ಸಂಚಾರ ಬಂದ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.
ಇನ್ನು ಕಡದರಗಡ್ಡಿ,ಯಳಗೊಂದಿ, ಯರಗೋಡಿ ನಡುಗಡ್ಡೆಗಳಿಗೆ ನೀರು ನುಗ್ಗಿವ ಸಾಧ್ಯತೆಗಳಿವೆ ನೀರು ಜಿಲ್ಲಾಡಳಿತವು ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.
ಜಲದುರ್ಗ ಹಾಗೂ ದೇವದುರ್ಗ ತಾಲೂಕಿನ ಕೋಳೂರು ಸೇತುವೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಲ್ಲಿ ರಾಜ್ಯ ಹೆಚ್ಚಾರಿಯ ಬಂದ್ ಮಾಲು ದೇವದುರ್ಗ ತಾಲೂಕಾಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಸೇತುವೆ ಬಳಿ ಪೋಲಿಸರನ್ನು ನಿಯೋಜನೆ ಮಾಡಲು ತಯಾರಿ ಮಾಡಿಕೊಂಡಿದೆ.
ದೇವದುರ್ಗ ತಾಲೂಕಿನ ಜೋಳದಡಗಿ, ಆಣೆ ಮಲ್ಲೇಶ್ವರ, ಗಲಗ, ಗೂಗಲ್, ಮದರಕಲ್ ನದಿ ಪಾತ್ರದ ಗ್ರಾಮಗಳಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.
ರಾಯಚೂರು ತಾಲೂಕಿನ ಹರಷಿಣಗಿ, ಗುರ್ಜಾ ಪೂರ, ಕರೆಕಲ್, ಕಾಡ್ಲೂರು, ದೊಂಗ ರಾಂಪೂರ,
ನದಿ ಪಾತ್ರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.
ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾದರೆ, ಮತ್ತಷ್ಟು ಹೊರ ಹರಿವು ಕೂಡ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ನದಿ ಪಾತ್ರ ಜನರಿಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.