ರಾಯಚೂರು ಜಿಲ್ಲಾ ಜೆಡಿಎಸ್ ನಿಯೋಗ ಯಾದಗಿರಿಯ ಮೃತ ಪಿಎಸ್ಐ ಪರಶುರಾಮ್ ಅವರ ಧರ್ಮಪತ್ನಿ ಯ ರಾಯಚೂರು ನಗರದ ಐಡಿಎಸ್ಎಂಟಿ ಬಡಾವಣೆಯ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿ ಸ್ವಾಂತನ ಹೇಳಿದರು.
ಕೇಂದ್ರ ಸರ್ಕಾರ ಸಚಿವರಾದ ಕುಮಾರಣ್ಣ ಅವರು ಪರಶುರಾಮ ಅವರ ಧರ್ಮಪತ್ನಿ ಶ್ವೇತಾ ಜೊತೆ ದೂರವಾಣಿಯಲ್ಲಿ ಮಾತಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕುಮಾರಣ್ಣನ ಮಾತನಾಡಿ ನಾವು ನಿಮ್ಮ ಕುಟುಂಬ ಜೊತೆಗೆ ನಾವಿದ್ದೇವೆ ಧೈರ್ಯ ಕಳೆದುಕೊಳ್ಳಬೇಡಿ ಸರ್ಕಾರದ ಮೇಲೆ ಒತ್ತಡ ತಂದು ತಪ್ಪಿಸತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ತಮ್ಮ ಕುಟುಂಬಕ್ಕೆ ಸೂಕ್ತ ಸಹಾಯಧನವನ್ನು ಸರ್ಕಾರ ನೀಡಲು ಮತ್ತು ನಿಮ್ಮ ಮಗನ ವಿದ್ಯಾಭ್ಯಾಸಕ್ಕೆ ಸರಕಾರ ಎಲ್ಲ ವ್ಯವಸ್ಥೆ ಮಾಡಲು ಸರ್ಕಾರ ತಮಗೆ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸುತ್ತೇನೆ ತಾವು ಗರ್ಭಿಣಿ ಇದ್ದೀರಿ ತಮ್ಮ ಆರೋಗ್ಯದ ಮೇಲೆ ನಿಗಾವಹಿಸಿ ತಮಗೆ ಯಾವುದೇ ಅನ್ಯಾಯ ಆಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಸ್ವಾಂತನ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಿ ಅವರು ಮಾತನಾಡಿ ದಲಿತ ಜನಾಂಗಕ್ಕೆ ಸೇರಿದ ಪಿಎಸ್ಐ ಪರಶುರಾಮ್ ಇವರ ಮೃತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ ನಿನ್ನೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆರೋಪ ಸ್ಥಾನದಲ್ಲಿರುವ ಶಾಸಕರ ಭೇಟಿಯಾಗಿದ್ದು ಇವರು ದಲಿತ ವಿರೋಧಿ ನೀತಿ ಅನುಸರಿಸುತ್ತಿರಿದ್ದಾರೆ. ದಲಿತ ನಾಯಕ ಎಂದು ಬಿಂಬಿಸಿಕೊಳ್ಳುವ ಅವರದೇ ಸಮಾಜದ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಈ ಅನ್ಯಾಯದ ಧ್ವನಿ ಎತ್ತುವ ಕೆಲಸ ಮಾಡದೆ ಇದು ಸ್ವಾಭಾವಿಕ ಸಾವು ಎಂದು ಹೇಳುವ ಮೂಲಕ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಅವರಿಗೆ ನಾಚಿಕೆಯಾಗಬೇಕು ಮಾತು ಎತ್ತಿದರೆ ಸಾಕು ದಲಿತರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳುವ ಇವರು ಅವರದೇ ಸಮಾಜದ ವ್ಯಕ್ತಿ ಮೃತ್ತರಾದರೆ ಸೌಜನ್ಯಾಕಾದರೂ ಅವರ ಕುಟುಂಬಕ್ಕೆ ಭೇಟಿಯಾಗದೆ ಇರುವುದು ನೋಡಿದರೆ ಇವರ ದಲಿತ ಕಾಳಜಿ ಎಂತಹದು ಎಂದು ಗೊತ್ತಾಗುತ್ತದೆ ಎಂದರು
ಜಿಲ್ಲಾ ಕಾರ್ಯಾಧ್ಯಕ್ಷ ಎನ್ ಶಿವಶಂಕರ್ ವಕೀಲರು ಮಾತನಾಡಿ “ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಕೇಂದ್ರ ಸಚಿವರಾದ ಕುಮಾರಣ್ಣನವರು ಈ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದಿದ್ದಾರೆ ತಕ್ಷಣವೇ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಮತ್ತು ಪ್ರಕರಣ ಕುರಿತು ಸೂಕ್ತ ತನಿಖೆ ಮಾಡಬೇಕು ಎಂದು ಪಕ್ಷದಿಂದ ಆಗ್ರಹಿಸುತ್ತವೆ, ಒಂದು ವೇಳೆ ಸರ್ಕಾರದಿಂದ ಪರಶುರಾಮ ಕುಟುಂಬಕ್ಕೆ ಅನ್ಯಾಯವಾದರೆ ಜೆಡಿಎಸ್ ಪಕ್ಷದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಹಾಂತೇಶಪಾಟೀಲ ಪರಿಶಿಷ್ಟ ಪಂಗಡ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ ದೇವದುರ್ಗ ತಾಲ್ಲೂಕ ಅಧ್ಯಕ್ಷ ಬುಡ್ಡನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಗ್ರಾಮಾಂತರ ಅಧ್ಯಕ್ಷ ನಾಗರಾಜ ಜಿಲ್ಲಾ ಪರಿಶಿಷ್ಟ ಪಂಗಡ ಅಧ್ಯಕ್ಷ ಹಂಪಯ್ಯ ನಾಯಕ ಮುಖಂಡರಾದ ಪಿ ರಾಜು ನರಸಪ್ಪ ಆಶಾಪೂರ ಪರಶುರಾಮ ಮಾವ ವೆಂಕಟಸ್ವಾಮಿ ಕುಟುಂಬದವರು ಉಪಸ್ಥಿತರಿದ್ದರು.