ರಾಯಚೂರು.ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.18 ರಿಂದ 24 ರವರೆಗೆ ರಾಯರ 353ನೇ ಆರಾಧನಾ ಸಪ್ತರಾತ್ರೋತ್ಸವ ಜರುಗಲಿದೆ ಎಂದು ಮಂತ್ರಾಲಯ ಶ್ರೀ ರಾಘ ವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರು ಹೇಳಿದರು.
ಶ್ರೀ ಮಠದಲ್ಲಿ ಆರಾಧನಾ ಪ್ರಯುಕ್ತ ಆಯೋ ಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆ. 18 ರಂದು ರಾಯರಿಗೆ ತಿರುಪತಿ ಶ್ರೀನಿವಾಸ ದೇವರ ವಸ್ತ್ರ ಸಮರ್ಪಣೆ ಸಂಜೆ ಧ್ವಜಾರೋಹಣ ಹಾಗೂ ಧಾನ್ಯೋತ್ಸವ ನಡೆಯಲಿದ್ದು ಆ.19 ರಂದು ಉಪಾಕರ್ಮ ಸಂಜೆ ಶಾಖೋತ್ಸವ ನಡೆಯಲಿದ್ದು ಅಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಆಗಮಿಸಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ ಎಂದರು. ಆ.20 ರಂದು ರಾಯರ ಪೂರ್ವಾರಾಧನೆ ಅಂಗವಾಗಿ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ, ಗ್ರಂಥ ಲೋಕಾರ್ಪಣೆ ನಡೆಯಲಿದೆ ಎಂದರು. ಆ. 21 ರಾಯರ ಮಧ್ಯಾರಾಧನೆ ಹಿನ್ನಲೆಯಲ್ಲಿ ರಾಯರ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ, ಶ್ರೀ ಮನ್ಮೂಲರಾಮದೇವರ ಸಂಸ್ಥಾನ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯುಕ್ರಮ ಹಾಗೂ ರಜತ, ಸುವರ್ಣ ರಥೋತ್ಸವ ನಡೆಯಲಿದೆ ಎಂದರು.
ಆ. 22 ರಂದು ರಾಯರ ಉತ್ತರಾರಾಧನೆ ಪ್ರಯುಕ್ತ ಮಹಾ ರಥೋತ್ಸವ ಹಾಗು ಮೈಸೂರು ಕೊಡುಗು ಲೋಕಸಭಾ ಸದಸ್ಯರು ಹಾಗೂ ಮೈಸೂರು ಒಡೆಯರ್ ಮಹಾರಾಜ ಮನೆತನದ ಯದುವೀರ ಕೃಷ್ಣದತ್ತಚಾಮರಾಜೇಂದ್ರ ಒಡೆಯರ್ ರವರಿಗೆ ಪ್ರತಿಷ್ಟಿತ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು. ಮೂರು ದಿನಗಳ ಆರಾಧನಾ ವೇಳೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ರಾಜ್ಯ ಸಭೆ ಸದಸ್ಯೆ ಹಾಗೂ ಇನ್ಫೋಸಿಸ್ ಮುಖ್ಯಸ್ಥರಾದ ಸುಧಾ ನಾರಾಯಣಮೂರ್ತಿ, ಋಷಿ ಸುನಕ್ ಸೇರಿದಂತೆ ಅನೇಕರು ಆರಾಧನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಆರಾಧನೆಗೆ ಬರುವ ಭಕ್ತರಿಗೆ ಶುಧ್ಧ ಕುಡಿಯುವ ನೀರು, ತುರ್ತು ವೈದ್ಯಕೀಯ ಸೇವೆ ಹಾಗೂ ಲಭ್ಯವಿರುವ ಕೊಠಡಿಗಳನ್ನು ನೀಡಲಾಗುತ್ತದೆ ನದಿಯಲ್ಲಿ ನೀರಿನ ಪ್ರವಾಹ ನಿಯಂತ್ರಣದಲ್ಲಿದ್ದು ಆದಾಗ್ಯೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು ನದಿ ದಡದಲ್ಲಿ ಸ್ನಾನದ ಶವರ್ ಬಾತ್ ನಳ ಅಳವಡಿಕೆ ಮತ್ತು ಮಹಿಳೆಯರಿಗೆ ಬಟ್ಟೆ ಬದಲಿಸುವ ತಾತ್ಕಾಲಿಕ ಕೊಠಡಿ ನಿರ್ಮಿಸಲಾಗುತ್ತಿದೆ ಎಂದರು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ತೆಲಂಗಾಣ, ಆಂಧ್ರ ಮತ್ತು ಕರ್ನಾಟಕದ ಮೂರು ರಾಜ್ಯಗಳಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದ ಅವರು ಸಹಸ್ರಾರು ವಾಹನಗಳಿಗೆ ಸೂಕ್ತ ನಿಲುಗಡೆ ಸ್ಥಳ ಗುರುತಿಸಲಾಗಿದೆ ಎಂದರು. ಮಠದ ಗರ್ಭ ಗುಡಿ ಸುತ್ತಲು ಸುವರ್ಣ ಕವಚ ಕಾರ್ಯ ನಡೆಯುತ್ತಿದೆ ಎಂದ ಅವರು ರಾಘವೇಂದ್ರ ಸರ್ಕಲ್ ಬಳಿ ನೂತನ ಸ್ವಾಗತ ಕಮಾನು ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದ ಅವರು ಗುರು ನಿವಾಸಿ ಅತಿಥಿ ಗೃಹ ನಿರ್ಮಾಣ ಮಾಡಲಾಗಿದೆ ಎಂದರು. ಚಿಕಾಗೋ, ಬೋಸ್ಟನ್, ಅಟ್ಲಾಂಟಾ, ಆಸ್ಟ್ರೇಲಿಯಾ ಮುಂತಾದೆಡೆ ರಾಯರ ಮಠ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದ ಅವರು ಹರಿದ್ವಾರದಲ್ಲಿ ನೂತನ ಮಠ ನಿರ್ಮಾಣ ಮಾಡಲಾಗಿದೆ ಅಯೋಧ್ಯೆಯಲ್ಲಿ ಸ್ಥಳ ಗುರುತಿಸುವಿಕೆ ಅಂತಿಮವಾಗಬೇಕಿದ್ದು ಶ್ರೀ ಮಠ ಸ್ಥಾಪನೆ ಗುರಿ ಶೀಘ್ರದಲ್ಲೆ ಕಾರ್ಯ ರೂಪಕ್ಕೆ ತರಲಾಗುತ್ತದೆ ಎಂದರು. ಮಂತ್ರಾಲಯದಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ನೀಡುತ್ತೇವೆ ಖಾಸಗಿ ವ್ಯಕ್ತಿಗಳು ಅದಕ್ಕೆ ಮುಂದೆ ಬರಬೇಕಿದೆ ಎಂದ ಅವರು ಹಸಿರು ಪಥ ನಿರ್ಮಾಣ, ಕೆರೆ ನಿರ್ಮಾಣ ಬಗ್ಗೆ ಚಿಂತಿಸಲಾಗಿದ್ದರು ಯಾವ ಜಾಗದಲ್ಲಿ ಕೆರೆ ನಿರ್ಮಾಣ ಸೂಕ್ತವೆಂದು ತಜ್ಞರು ವರದಿ ಆಧರಿಸಿ ಆ ಕಾರ್ಯ ಮಾಡುತ್ತೇವೆಂದರು. ಶ್ರೀ ಮಠದಲ್ಲಿ ಬಡವ ಶ್ರೀ ಮಂತ ಎಂಬ ತಾರತಮ್ಯವಿಲ್ಲವೆಂದ ಅವರು ಲಭ್ಯವಿದ್ದ ಸಂದರ್ಭದಲ್ಲಿ ಭಕ್ತರಿಗೆ ಕೊಠಡಿಗಳು ನೀಡಲಾಗುತ್ತಿದೆ ಶ್ರೀ ಮಠದಲ್ಲಿ ಎಲ್ಲರಿಗೂ ಸಮಾನ ಪ್ರಾಧಾನ್ಯತೆಯಿದೆ ಎಂದರು. ಈ ಸಂದರ್ಭದಲ್ಲಿ ಅಪ್ರಮೇಯ ಇದ್ದರು