ರಾಯಚೂರು:- ಸಾರ್ವತ್ರಿಕ ಲೋಕಸಭೆ ಚುನಾವಣೆ-೨೦೨೪ ರ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಬಕಾರಿ ಅಕ್ರಮಗಳು ತಡೆಗಟ್ಟುವ ಸಲುವಾಗಿ ಏ.೨ರಂದು ಅಬಕಾರಿ ಉಪ ಆಯುಕ್ತ ರಮೇಶ ಕುಮಾರ, ಅವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕಿ ಶೈನಜ್ ಬೇಗಂ, ಅಬಕಾರಿ ಉಪನಿರೀಕ್ಷಕ ಓಬಳಾಪತಿ, ಹಾಗೂ ಸಿಬ್ಬಂದಿಗಳು ಇ.ಐ.ಬಿ ರಾಯಚೂರು ಇವರು ಮಂತ್ರಾಲಯ ರಸ್ತೆಯಲ್ಲಿ ರಸ್ತೆಗಾವಲು ಮಾಡಿ ಮಿನಿ ಲಾರಿಯನ್ನು ತಪಾಸಣೆ ಮಾಡಿದಾಗ ಲಾರಿಯಲ್ಲಿ ೨೭೨ ಬಾಕ್ಸ್ ಮದ್ಯ ಹಾಗೂ ೨೭ ಬಾಕ್ಸ್ ಬಿಯರನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡಿದ ಸಂಬಂಧ ಅಬಕಾರಿ ನಿರೀಕ್ಷಕರಾದ ಶೈನಜ್ ಬೇಗಂ, ಇ.ಐ.ಬಿ ರಾಯಚೂರು ಇವರು ಪ್ರಕರಣ ದಾಖಲಿಸಿ, ಆರೋಪಿ ಹಾಗೂ ಮುದ್ದೆಮಾಲು ಮತ್ತು ವಾಹನವನ್ನು ವಶ ಪಡೆದುಕೊಂಡಿರುತ್ತಾರೆ. (ಸದರಿ ವಾಹನ ಹಾಗೂ ಮುದ್ದೆಮಾಲಿನ ಒಟ್ಟು ಅಂದಾಜು ಮೌಲ್ಯ ರೂ. ೨೬,೦೦,೦೦೦/- ಗಳು) ಆಗಿವೆ ಎಂದು ಅಬಕಾರಿ ಉಪಧೀಕ್ಷಕರು ತಿಳಿಸಿದ್ದಾರೆ.
Megha News > Crime News > ಅಬಕಾರಿ ಅಕ್ರಮಗಳಲ್ಲಿ ತೊಡಗಿರುವವರ ವಿರುದ್ದ ಕಾರ್ಯಾಚರಣೆ: ೨೬ ಲಕ್ಷ ಮೌಲ್ಯದ ವಾಹನ, ಅಕ್ರಮ ಸರಕು ಜಪ್ತಿ