ರಾಯಚೂರು,ನ.೧೨-ತಾಲೂಕಿನ ಮಲಿಯಾಬಾದ ಗ್ರಾಮದ ಜನರ ನಿದ್ದೆ ಕಡೆಸಿರುವ ಚಿರತೆಯೊಂದು ಅತಂಕವನ್ನು ನಿರ್ಮಾಣ ಮಾಡಿದೆ.
ಕಳೆದ ಎರಡು ತಿಂಗಳಿನಿಂದ ಜಾನುವಾರಗಳನ್ನು ತಿಂದು ಹಾಕುತ್ತಿದೆಯಾದರೂ ಅರಣ್ಯ ಇಲಾಖೆ ಮತ್ತು ಜನರ ಕಣ್ಣಿಗೆ ಬೀಳದೆ ಹೋಗಿದೆ.ಸೋಮವಾರ ಎತ್ತು ಮತ್ತು ಕರೊಂದು ತಿಂದು ಹಾಕಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅಸರೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಹೆಜ್ಜೆ ಗುರುತು ಪತ್ತೆಗೆ ಮುಂದಾಗಿ ಯಾವುದೇ ಸುಳಿಯದೇ ಇರುವದರಿಂದ ಯಾವದೊ ಕಾಡು ಪ್ರಾಣಿ ಇರಬಹುದು ಎಂದು ಶಂಕಿಸಿದ್ದಾರೆ. ಅದರೆ, ಗ್ರಾಮಸ್ಥರು ಮಾತ್ರ ಎರಡು ಚಿರತೆಮಲಿಯಾಬಾದ ಕಾಡಿನಲ್ಲಿರುವ ಪ್ರತ್ಯಕ್ಷ ಧರ್ಶಿ ಗಳು ನೋಡಿದ್ದಾರೆ.ಜಾನುವಾರಗಳನ್ನು ತಿಂದು ಹಾಕುತ್ತಿವೆ. ಅರಣ್ಯ ಇಲಾಖೆ ನಿರ್ಲಕ್ಣವೇ ಕಾರಣ ಎಂದು ದೂರುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕೈದು ಬಾರಿ ಬಂದು ಹೋಗಿದ್ದಾರೆ ಹೊರತು ಚಿರತೆ ಹಿಡಿಯುತ್ತಿಲ್ಲ ಎನ್ನುವದು ಗ್ರಾಮಸ್ಥರ ವಾದ.
ನೂರಾರು ಜನರು ಅರಣ್ಯ ಬಳಿ ಹೋಗಿ ಹುಡುಕಾಟ ನಡೆಸಿದ್ದಾರೆ.ಆತಂಕದಲ್ಕಿಯೇ ದಿನದೂಡುತ್ತಿರುವ ಜನರು ನಿತ್ಯವೂ ಜಮೀನುಗಳಿಗೆ ಹೋಗಲು ಹೆದರುವಂರಾಗಿದೆ. ನಾಯಿಯೊಂದು ಮೊದಲ ಬಲಿಯಾಗಿತ್ತು.ಅಲ್ಲಿಂದ ಅಕಳು,ಕುರಿ,ಎತ್ತು ಬಲಿಯಾಗಿವೆ.ಮತ್ತಷ್ಟು ಜಾನುವಾರುಗಳು ಬಲಿಯಾಗುವ ಬದಲು ಅರಣ್ಯ ಇಲಾಖೆ ಎಚ್ಚರಗೊಳ್ಳಬೇಕಿದೆ.
Megha News > Local News > ಮಲಿಯಾಬಾದ ಅರಣ್ಯದಲ್ಲಿ ಎತ್ತು,ಕರು ತಿಂದು ಹಾಕಿದ ಚಿರತೆ: ಅತಂಕದಲ್ಲಿ ಜನತೆ
ಮಲಿಯಾಬಾದ ಅರಣ್ಯದಲ್ಲಿ ಎತ್ತು,ಕರು ತಿಂದು ಹಾಕಿದ ಚಿರತೆ: ಅತಂಕದಲ್ಲಿ ಜನತೆ
Tayappa - Raichur12/11/2024
posted on
Leave a reply