ರಾಯಚೂರು. ನಗರದಲ್ಲಿ ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡುವು ದರಿಂದ ಪ್ಲಾಸ್ಟಿಕ್ ನಿಂದಾಗುವ ದುಷ್ಪರಿಣಾಮ ತಪ್ಪಿಸಬಹುದು, ವ್ಯಾಪಾರಿಗಳು, ವರ್ತಕರು, ಹಾಗೂ ಗ್ರಾಹಕರು ಸಹಕಾರ ನೀಡಿದಾಗ ಮಾತ್ರ ಜಾಗೃತಿ ಮೂಡಿಸುವುದಕ್ಕೂ ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶ ದಯಾನಂದ ಬೇಲೂರೆ ಹೇಳಿದರು.
ನಗರದ ಜನ ಶಿಕ್ಷಣ ಸಂಸ್ಥಾನ ವತಿಯಿಂದ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ನಗರದಲ್ಲಿ ಸಾಕಷ್ಟು ರಸ್ತೆಗಳಲ್ಲಿ ಎಲ್ಲೆಂದರಲ್ಲಿ, ಚರಂಡಿಯಲ್ಲಿ ಪ್ಲಾಸ್ಟಿಕ್ ಬಿದ್ದು ನೀರು ಹರಿಯದಂತೆ ತಡೆಯುತ್ತಿದೆ, ಜೊತೆಗೆ ಪ್ಲಾಸ್ಟಿಕ್ ನಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಪ್ಲಾಸ್ಟಿಕ್ ನಿಷೇಧಕ್ಕೆ ನಗರಸಭೆ, ವ್ಯಾಪಾರಸ್ಥರು, ವರ್ತಕರು, ಹಾಗೂ ಗ್ರಾಹಕರು ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯವಾ ಗಿದೆ ಎಂದರು.
ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಬಟ್ಟೆ ಬ್ಯಾಗ್ ಹಾಗೂ ಪೇಪರ್ ಬ್ಯಾಗ ಬಳಕೆ ಮಾಡಬೇಕು, ತರಕಾರಿ ಮಾರುಕಟ್ಟೆ ಸೇರಿದಂತೆ ಅಂಗಡಿಗಳು ಸಹ ಪ್ಲಾಸ್ಟಿಕ್ ನ್ನು ನಿಷೇಧ ಮಾಡಬೇಕು, ಗ್ರಾಹಕರು ತಮ್ಮ ಮನೆಯಿಂದಲೇ ಚೀಲವನ್ನು ತೆಗೆದು ಕೊಂಡು ಬಂದರೆ ಸೂಕ್ತವೆಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಶಿವು ಕುಮಾರ, ಪೌರಾಯಕ್ತ ಗುರು ಸಿದ್ದಲಿಂಗಪ್ಪ, ಜನ ಶಿಕ್ಷಣ ಸಂಸ್ಥಾನದ ಅಧ್ಯಕ್ಷ ಸದಾನಂದ ಪೂಜಾರಿ, ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರಭು ನಾಯಕ ಸೇರಿದಂತೆ ಅನೇಕರು ಇದ್ದರು.
Megha News > Local News > ಪ್ಲಾಸ್ಟಿಕ್ ನಿಷೇಧಕ್ಕೆ ವ್ಯಾಪಾರಿಗಳು, ವರ್ತಕರು, ಹಾಗೂ ಗ್ರಾಹಕರು ಸಹಕಾರ ಅಗತ್ಯ
ಪ್ಲಾಸ್ಟಿಕ್ ನಿಷೇಧಕ್ಕೆ ವ್ಯಾಪಾರಿಗಳು, ವರ್ತಕರು, ಹಾಗೂ ಗ್ರಾಹಕರು ಸಹಕಾರ ಅಗತ್ಯ
Tayappa - Raichur25/08/2023
posted on
Leave a reply