ರಾಯಚೂರು. ಸರ್ಕಾರ ಬರಗಾಲ ಪ್ರದೇಶ ವೆಂದು ಗೋಷಣೆ ಮಾಡಿದ್ದು, ಜಿಲ್ಲೆಯ 3 ತಾಲೂಕುಗಳನ್ನು ಪರಿಗಣಿಸಿ ರಾಯಚೂರು ತಾಲೂಕಿನ ಮಳೆಯಾಗದೇ ಬರಗಾಲ ಅವರಿಸಿ ದ್ದು ಪರಿಗಣಿಸಿಲ್ಲ, ಟೆಲಿಮೀಟರ್ ಆಧಾರದಲ್ಲಿ ಸರ್ವೆ ಮಾಡಿದ್ದರಿಂದ ಎಲ್ಲಾ ಕಡೆ ಮಳೆಯಾಗಿದೆ ಎಂದು ಪರಿಗಣಿಸಲು ಆಗುವುದಿಲ್ಲ ಕೂಡಲೇ ಸ್ಥಳ ಪರಿಶೀಲನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ನೀಡಬೇಕು ಎಂದು ಶಾಸಕ ದದ್ದಲ್ ಬಸನಗೌಡ ಕೃಷಿ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ತಾಲೂಕ ಪಂಚಾಯತಿಯ ಪ್ರಥಮ ತ್ರೈಮಾಸಿಕ ಕೆಡಿಸಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ರಾಯಚೂರು ತಾಲೂಕ ವ್ಯಾಪ್ತಿಯಲ್ಲಿ ಶೇ 66 ರಷ್ಟು ಮಳೆ ಕೊರತೆಯಾಗಿದೆ ಎಂದು ಹೇಳುತ್ತಿದ್ದು, ಬರಗಾಲ ತಾಲೂಕವೆಂದು ಗೋಷಣೆ ಮಾಡಬೇಕು ಆದರೆ ಪರಿಗಣಿಸಿಲ್ಲ, ಕೃಷಿ ಇಲಾಖೆಯಿಂದ ಸಮರ್ಪಕ ಮಾಹಿತಿ ನೀಡಿಲ್ಲವೆಂದರು.
ರಾಜ್ಯದಲ್ಲಿ 131 ತಾಲೂಕು ಬರಗಾಲವೆಂದು ಗೋಷಣೆ ಮಾಡಿದ್ದು ಜಿಲ್ಲೆಯ ಮಾನವಿ ಸಿರವಾರ ಮತ್ತು ಲಿಂಗಸುಗೂರು ತಾಲೂಕು ಮಾತ್ರ ಘೋಷಣೆ ಮಾಡಿದೆ, ಈ ಬಗ್ಗೆ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು ಎಂದರು.
ತಾಲೂಕಿನಲ್ಲಿ ಕೆಲವು ಕಡೆ ಟೆಲಿಮಿಟರ್ ಸರಿಯಾಗಿಲ್ಲ ಜೊತೆಗೆ ದುರಸ್ತಿಯಲ್ಲಿವೆ ಅದನ್ನು ಪರಿಗಣಿಸಿದರೂ ಟೆಲಿಮೀಟರ್ ಇರುವ ಸ್ಥಳದಲ್ಲಿ ಮಳೆಯಾದರೆ ಸುತ್ತ ಮುತ್ತಲಿನ ಪ್ರದೇಶದಲ್ಲಿ ಮಳೆಯಾಗಿಲ್ಲ ಈ ಬಗ್ಗೆ ಪರಿಶೀಲನೆ ಮಾಡಿ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದರು.