ರಾಯಚೂರು. ಪ್ಲಾಸ್ಟಿಕ್ ಪೌಚ್‌ನಲ್ಲಿ ಕುಡಿಯುವ ನೀರು ಮಾರಾಟವನ್ನು ನಗರಸಭೆ ಬಂದ್ ಮಾಡುವಂತೆ ಕಟ್ಟುನಿಟ್ಟಾಗಿ ಮಾರಾಟ ಮಾಡುವ ಮಾಲೀಕರಿಗೆ ಮಾಹಿತಿ ನೀಡಿದ್ದು, ಅದರಂತೆ ವಾಟರ್ ಪೌಚ್‌ಗಳ ಮಾರಾಟ ಸಂಪೂರ್ಣ ಅಲ್ಲಲ್ಲಿ ಬಂದ್ ಆಗಿದೆ.
ನಗರದಾದ್ಯಂತವಾಗಿ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ ಯಲ್ಲಿ ಕಳೆದ ಎರಡು ವಾರಗಳ ಹಿಂದೆಯೇ ಪ್ಲಾಸ್ಟಿಕ್ ನಿಷೇಧ ಕುರಿತು ಅಂಗಡಿಗಳ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡು ಮಾರಾಟ ಮಾಡದಂತೆ ಕ್ರಮ ವಹಿಸಿತ್ತು, ಇದೀಗ ಅರದ ಬೆನ್ನಲ್ಲೇ ಪ್ಲಾಸ್ಟಿಕ್ ನಲ್ಲಿ ನೀರು ಮಾರಾಟ ಮಾಡುವ ಅಂಗಡಿಗಲ್ಲಿಯೂ ಸಹ ವಾಟರ್ ಪೌಚ್ ಗಳನ್ನು ಮಾರಾಟ ಮಾಡದಂತೆ ಕಟ್ಟು ನಿಟ್ಟಿನ ಕ್ರಮ ವಗಿಸಿದೆ, ಈ ಹಿನ್ನೆಲೆಯಲ್ಲಿ ಬೇಕರಿ, ಸೋಡಾ ಅಂಗಡಿ, ಡಬ್ಬ, ಪಾನ್ ಪಾಷ್ ಮತ್ತು ಹೋಟೆಲ್ ಗಳಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಿದೆ ಬಹುತೇಕ ಕಡೆ ಅಲ್ಲಿಲ್ಲಿ ವಾಟರ್ ಪೌಚ್ ಮಾರಾಟ ಮಾಡುತ್ತಿದ್ದು ಕಟ್ಟು ನಿಟ್ಟಿನ ಕ್ರಮ ವಗಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯವಾಗಿದೆ.
ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ವಾಟರ್ ಪೌಚ್‌ಗಳನ್ನು ಉತ್ಪಾದನೆ ಮಾಡುತ್ತಿದೆ, ಶುದ್ಧ ಕುಡಿಯುವ ನೀರು ಮಾರಾಟಕ್ಕೆ ಮಾತ್ರ ಅನುಮತಿ ನೀಡಿದ್ದು ಅದರ ಜೊತೆಗೆ ಸಾಕಷ್ಟು ಶುದ್ಧ ನೀರಿನ ಘಟಕಗಳಲ್ಲಿ ವಾಟರ್ ಪೌಚ್ ಗಳನ್ನು ಉತ್ಪಾದಿಸಿದ ಮಾರಾಟಕ್ಕೆ ನೀಡುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಬಹುತೇಕ ಕಡೆ ವಾಟರ್ ಪೌಚ್ ಮಾರಾಟ ಮಾಡುವುದನ್ನು ನಿಲ್ಲಿಸಿದ್ದು ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ತಯಾರಿಸುವುದಕ್ಕೆ ಕಡಿವಾಣ ಹಾಕಬೇಕಿದೆ, ಒಂದು ಕಡೆ ತಯಾರಿಸಲು ಅವಕಾಶ ನೀಡಿದ್ದರೆ ಮತ್ತೊಂದು ಕಡೆ ಮಾರಾಟಕ್ಕೆ ನಿಷೇಧಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ನಗರಸಭೆ ಮತ್ತು ಮಾಲೀನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಎಚ್ಚೆತ್ತುಕೊಂಡು ಶುದ್ಧ ಘಟಕಗಳಲ್ಲಿ ವಾಟರ್ ಪೌಚ್ ಗಳನ್ನು ತಯಾರಿಸುವುದನ್ನು ತಡೆಗಟ್ಟಬೇಕು ಎಂಬುದು ಒತ್ತಾಯವಾಗಿದೆ.