ರಾಯಚೂರು: ನಗರದ ಹೈದರಾಬಾದ್ ರಸ್ತೆಯಲ್ಲಿರುವ ಐಪಿ ಪಂಪ್ ಸೆಟಗಳು ಹಾಳಿಗಿವೆ ಎಂದು ನೆಪ ಒಡ್ಡಿ ಕಳೆದ ವಾರದಿಂದ ಕುಡಿಯುವ ನೀರನ್ನು ಬಿಡದೆ ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ಮಾಡುತಿದ್ದಾರೆ ಎಂದು ಜನರು ಅಕ್ರೋಶ ವ್ಯಕ್ತಿಪಡಿಸಿದರು.
ಮಂಗಳವಾರ ನಗರದ ಎಲ್.ಬಿ.ಎಸ್ ನಗರ, ಗಂಜ್ ಏರಿಯಾ, ಮಡ್ಡಿಪೇಟೆ. ಬಾಲಂಕು ಆಸ್ಪತ್ರೆ, ಸಿಯಾತಲಾಬ್, ಅಂದ್ರೂನ್ ಕಿಲ್ಲಾ, ಬೈರೂನ್ ಕಿಲ್ಲಾ, ಮಕ್ತಾಲ್ ಪೇಟೆ, ಬ್ರೇಸ್ತವಾರ ಪೇಟೆ, ,ಲೋಹರ ವಾಡಿಗಳಲ್ಲಿ ನೀರು ಬಾರದೆ ಜನರು ಪರದಾಡುತ್ರಿದ್ದಾರೆ. ಐಪಿ ಪಂಪ್ ಸೆಟ್ ನಲ್ಲಿ ಕಲಸ ಮಾಡುವ ಸಿಬ್ಬಂದಿ ಮೆಟಾರುಗಳು ಬಂದ್ ಮಾಡಿ ನೀರು ಬರದಂತೆ ಮಾಡುತ್ತಾರೆ. ಮತ್ತೊಂದು ಕಡೆ ನೀರಿನ ಟ್ಯಾಂಕ್ ಪೂ ರ್ಣ ಪ್ರಮಾಣದ ತುಂಬಿದ ಮೇಲೆ ೨೪ ತಾಸು ಹರಿದು ಹೊರಗಡೆ ಪೋಲಾಗುತ್ತಿದ್ದು, ಜನರಿಗೆ ಕುಡಿಯುವ ನೀರು ಕೋಡದೆ ನೀರು ವೃತಾ ಬಯಲು ಪ್ರದೇಶಗಳಲ್ಲಿ ಪೋಲಾಗುತ್ತಿವೆ. ಮೂರು ತಾಸುಗಳ ಕಾಲ ಜನರಿಂದ ಕಚೇರಿಯು ಮುಂಭಾಗದಲ್ಲಿ ದರಣಿ ನಡೆಸಲಾಯಿತು. ಇದೇ ವೇಳೆ ನಗರಸಭೆಯ ಕಿರಿಯ ಅಭಿಯಂತರ ನವೀನ್ ಸ್ಥಳಕ್ಕಾಗಮಿಸಿ ಮೋಟಾರು ಕೇಬಲ್ ಗಳನ್ನು ಅಳವಡಿಸುವಂತೆ ಸೂಚಿಸಿದರು.