ರಾಯಚೂರು: ಕೊಪ್ಪಳದಲ್ಲಿ ಕೈಗಾರಿಗಳಿಂದಾಗುತ್ತಿರುವ ಮಾಲಿನ್ಯದಿಂದ ಸುತ್ತಮುತ್ತಲಿನ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಇದನದನು ವಿರೋಧಿಸಿ ಕೊಪ್ಪಳದಲ್ಲಿ ಫೆ.24 ಕ್ಕೆ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಜನಸಂಗ್ರಾಮ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಯಚೂರಿನಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸೇರಿದಂತೆ ಉದ್ಯೋಗ ಸೃಷ್ಠಿಸುವ ಹಾಗೂ ಪರಿಸರಕ್ಕೆ ಕಡಿಮೆ ಹಾನಿಯಾಗುವ ಕಾರ್ಖಾನೆ ನೀಡಲು ಮೊದಲಿನಿಂದಲೂ ಮನವಿ ಮಾಡಲಾಗುತ್ತಿದ್ದು, ಆದರೆ ಕಲ್ಯಾಣ ಕರ್ನಾಟಕಕ್ಕೆ ಕೇವಲ ಮಾಲಿನ್ಯ ಉಂಟು ಮಾಡುವ ಕೈಗಾರಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದರು.
ರಾಯಚೂರಿನಲ್ಲಿರುವ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ನಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ದುಬಾರಿಯಾಗಿದೆ ಕಾರಣ ಮುಂದಿನ ದಿನಗಳಲ್ಲಿ ಅದು ಬಂದ್ ಆಗಲಿದೆ. ವಿದ್ಯುತ್ ಉತ್ಪಾಧನೆಗೆ ಅಣುಸ್ಥಾವರ ರಾಯಚೂರಿಗೆ ಬರುತ್ತದೆ ಇದರಿಂದ ಈ ಭಾಗದಲ್ಲಿಜನರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ರಾಯಚೂರಿನಲ್ಲಿ ಮುಂದಿನ ದಿನಗಳಲ್ಲಿ ಮಾಲಿನ್ಯ ಹೆಚ್ಚಾಗಲಿದೆ ಎಂದರು.
ಕೊಪ್ಪಳದಲ್ಲಿ ೧೧೫ ಸ್ಟೀಲ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಗಿಣಗೇರಿ ಭಾಗದಲ್ಲಿ ಉಸಿರಾಟದ ತೊಂದರೆಯಾಗುತ್ತಿದೆ. ಇದರ ಮಧ್ಯೆ ಬಲ್ಡೋಟಾ ಕಂಪನಿಗೆ ಹೆಚ್ಚುವರಿ ಸ್ಟೀಲ್ ಉತ್ಪಾಧನೆಗೆ ಪರವಾನಿಗೆ ಕೊಟ್ಟಿದ್ದು ಇದಕ್ಕಾಗಿ ೬೦೦೦ ಎಕರೆಯಲ್ಲಿ ಬೇಕಾಗುತ್ತದೆ. ಇದಕ್ಕೆ ರೈತರಿಂದ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಇದರಿಂದ ಕೃಷಿ ವಲಯ ಘಂಭೀರ ಪರಿಸ್ಥಿತಿಗೆ ತಲುಪುವಂತಾಗಿದೆ ಎಂದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಕೊಪ್ಪಳದಲ್ಲಿ ಕೈಗಾದ ಸುತ್ತಮುತ್ತಲೂ ಅಂಗವಿಕಲರು ಜನಿಸುತ್ತಿದ್ದು, ವಿದ್ಯುತ್ ಉತ್ಪಾದನೆಗೆ ಕೊಪ್ಪಳದಂತಹ ಪ್ರದೇಶದಲ್ಲಿ ಅಣುಸ್ಥಾವರ ಸ್ಥಾಪನೆ ಯೋಗ್ಯವಲ್ಲ. ಅಣುಸ್ಥಾವರ ಸ್ಥಾಪನೆ ನಿರ್ಧಾರ ಕೂಡಲೇ ಹಿಂಪಡೆಯಬೇಕು. ಕೊಪ್ಪಳದಲ್ಲಿ ಕೊಪ್ಪಳ ಉಳಿಸಿ ಅಭಿಯಾನ ನಡೆದಿದ್ದು, ಅದಕ್ಕೆ ಪ್ರತಿಯೊಬ್ಬರು ಬೆಂಬಲಿಸುವುದು ಅಗತ್ಯವಾಗಿದ್ದು, ಎಂಎಸ್ಪಿಎಲ್ ಹಾಗೂ ಅಣು ಸ್ಥಾವರ ಸ್ಥಾಪನೆ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಖಾಜಾ ಅಸ್ಲಂ, ಜಾನ್ ವೆಸ್ಲಿ, ಆರ್.ಬಸವರಾಜ್, ಭಂಡಾರಿ ವೀರಣ್ಣ ಸೇರಿದಂತೆ ಇತೃಇದ್ದರು.