Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಹಣಕಾಸು ಸಚಿವೆ ನಿರ್ಮಲಾ ಸೀತರಾಮ್‌ರನ್ನು ಭೇಟಿಯಾದ ರಾಜ್ಯದ ಕಾಂಗ್ರೆಸ್ ಸಂಸದರು

ಹಣಕಾಸು ಸಚಿವೆ ನಿರ್ಮಲಾ ಸೀತರಾಮ್‌ರನ್ನು ಭೇಟಿಯಾದ ರಾಜ್ಯದ ಕಾಂಗ್ರೆಸ್ ಸಂಸದರು

ರಾಯಚೂರು: ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದ ಕಾಂಗ್ರೆಸ್ ಪಕ್ಷದ ಸಂಸದರಗಳು ಭೇಟಿಯಾಗಿ, ಕೇಂದ್ರ ಸರಕಾರ ಮಂಡಿಸಿದ ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನವಾಗಲಿ ,ಕೊಡುಗೆಗಳಾಗಲಿ ಇಲ್ಲದೇ ಇರುವುದನ್ನು ಅವರ ಗಮನಕ್ಕೆ ತಂದು ಈ ಹಿಂದೆ ರಾಜ್ಯಕ್ಕೆ ನಿಗದಿಯಾದ ನಬಾರ್ಡ್ ರೀ ಫೈನಾನ್ಸ್ ಅನ್ನು ಕಡಿಮೆಗೊಳಿಸಿದ ಬಗ್ಗೆ ಹಾಗೂ ಎಲ್ಐಸಿ ಪ್ರತಿನಿಧಿಗಳ ಬೇಡಿಕೆಯ ಬಗ್ಗೆ ಅವರ ಗಮನ ಸೆಳೆಯಲಾಯಿತು.

ರಾಯಚೂರಿನಲ್ಲಿ ಅಖಿಲಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಸ್ಥಾಪಿಸುವ ಬಗ್ಗೆ ಅವರು ವಿಶೇಷ ಕಾಳಜಿ ವಹಿಸಬೇಕೆಂದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ಜಿ ಕುಮಾರ ನಾಯಕ, ರಾಜಶೇಖರ್ ಹಿಟ್ನಾಳ್, ಸಾಗರ್ ಖಂಡ್ರೆ, ಶ್ರೇಯಸ್ ಪಾಟೀಲ, ಸುನೀಲ್ ಬೋಸ್ ,ಡಾ ಪ್ರಭಾ ಮಲ್ಲಿಕಾರ್ಜುನ್, ಪ್ರಿಯಾಂಕಾ ಸೇರಿದಂತೆ ಇತರರಿದ್ದರು.

Megha News