ರಾಯಚೂರು : ಮಾಜಿ ಪ್ರಧಾನಿಗಳಾದ ದೇವೇಗೌಡರು ಯಾರನ್ನು ಸುಲಭವಾಗಿ ಬೆಂಬಲಿಸುವುದಿಲ್ಲ. ಅವರು ಈ ಬಾರಿ ವಿಶ್ವನಾಯಕ ನರೇಂದ್ರ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಿರ್ಧರಿಸಿದ್ದಾರೆ ಈ ಕಾರಣದಿಂದ ಜೆಡಿಎಸ್ – ಬಿಜೆಪಿ ಒಂದುಗೂಡಿ ಕೆಲಸ ಮಾಡಬೇಕಾದ ಉತ್ತಮವಾದ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜಾ ಅಮರೇಶ್ವರ ನಾಯಕರು ತಿಳಿಸಿದರು.
ದೇವದುರ್ಗ ಪಟ್ಟಣದ ಬಿ.ಎಚ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದವರು ಕಳೆದ 10 ವರ್ಷದಲ್ಲಿ ದೇಶದ ಎಲ್ಲಾ ರಂಗದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದೆ.
ಕಳೆದ ಐದು ವರ್ಷದಲ್ಲಿ 34 ಸಾವಿರ ಕೋಟಿ ರುಪಾಯಿ ಅನುದಾನವನ್ನು ತರುವ ಮೂಲಕ ಉಭಯ ಜಿಲ್ಲೆಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ , ರೈಲ್ವೆ ನಿಲ್ದಾಣಗಳ ಆಧುನೀಕರಣ, ರಾಯಚೂರಿಗೆ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಹೆದ್ದಾರಿಗಳ ನಿರ್ಮಾಣ ಹಾಗೂ ಇನ್ನಿತರ ಮೂಲಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ಕೆಲಸ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿರುವೆ ಇದಲ್ಲದೇ ಕೇಂದ್ರ ಸರ್ಕಾರದ ಹಲವು ಕಮಿಟಿಗಳಲ್ಲಿ ಕೆಲಸ ಮಾಡುವ ಮೂಲಕ ರಾಷ್ಟ್ರೀಯ ಪ್ರಮುಖ ವಿಷಯಗಳ ಮೇಲೆ ನಿರ್ಣಯ ಕೈಗೊಳ್ಳುವಲ್ಲಿಯೂ ಪಾತ್ರ ವಹಿಸಿರುವೆ . ಈ ಹಿಂದೆ ಕಲ್ಮಲಾ ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗಿ ಸಚಿವನಾಗಿದ್ದಾಗ ಕೊನೆಯ ಭಾಗದ ರೈತರಿಗೆ ನೀರು ಕೊಡಿಸುವ ಮೂಲಕ ಕೆಲಸ ಮಾಡಿದ್ದು ಸ್ಥಳೀಯನಾದ ನನಗೆ ಅವಕಾಶ ಕೊಡಿ. ಎಲ್ಲಿಂದಲೋ ಬಂದಂತಹ ಅಭ್ಯರ್ಥಿಗೆ ಮಣೆ ಹಾಕಬೇಡಿ, ಈ ಹಿಂದೆ ಈಗೆ ಚುನಾವಣೆಯಲ್ಲಿ ಗೆದ್ದವರು ಕ್ಷೇತ್ರದಲ್ಲಿ ಒಂದು ದಿನವು ಕಾಣದೇ ಕಾಣಯಾಗಿದ್ದಾರೆ. ಈಗಲೂ ಚುನಾವಣೆ ಮುಗಿದ ಮರುದಿನವೇ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿಂದ ಕಾಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ವಿಶ್ವನಾಯಕ ಮೋದಿಜಿಯವರ ಸಾದನೆ ಕುರಿತಂತೆ ವಿಶ್ವದ ಎಲ್ಲಾ ರಾಷ್ಟ್ರಗಳು ಮಾತನಾಡುತಿದ್ದು,
ಹತ್ತನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಈಗ ಮೂರನೇ ಸ್ಥಾನಕ್ಕೇರಿದೆ. ನರೇಂದ್ರ ಮೋದಿಜೀವರ ಮಾತಿಗೆ ವಿಶ್ವದಾದ್ಯಂತ ಪಾಶಸ್ತ್ಯ ಹಾಗೂ ಗೌರವ ಸಿಗುತ್ತಿದೆ, ಹತ್ತು ವರ್ಷಗಳ ಹಿಂದೆ ಹಿಂಜರಿಕೆ ಕೀಳರಿಮೆಯಿಂದ ಬಳಲುತ್ತಿದ್ದ ಭಾರತ ಇಂದು ಮೋದಿಜಿಯವರ ನಾಯಕತ್ವದಲ್ಲಿ ಜಾಗತಿಕ ಸಮುದಾಯದ ಮಧ್ಯೆ ಎದೆಯುಬ್ಬಿಸಿ ಮುನ್ನುಗ್ಗುತ್ತಿದೆ ಈಗಾಗಿ ಮೋದಿಜಿಯವರನ್ನು ಬೆಂಬಲಿಸಬೇಕೆಂದರು.
ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಮಾತನಾಡಿ ದೇಶದ ಭದ್ರತೆಯ ದೃಷ್ಟಿಯಿಂದ , ಸಮೃದ್ಧವಾದ ಭಾರತವನ್ನು ಕಟ್ಟುವ ದೃಷ್ಟಿಯಿಂದ ಎನ್.ಡಿ.ಎ ಭಾಗವಾಗಿ ಜೆಡಿಎಸ್ ಇದ್ದು , ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಸಮನ್ವಯತೆಯಿಂದ ಬಿಜೆಪಿ ಪಕ್ಷದೊಂದಿಗೆ ಕೆಲಸ ಮಾಡಬೇಕಿದೆ.
ದೇವೇಗೌಡರು ದೇವದುರ್ಗ ತಾಲೂಕಿಗೆ ನೀಡಿರುವ ಕೊಡುಗೆಯಿಂದ ಇಂದು ತಾಲೂಕಿನ ಸ್ಥಿತಿಗತಿಯೇ ಬದಲಾಗಿದೆ. ಇಲ್ಲಿನ ಆರ್ಥಿಕ ಸ್ಥಿತಿಗತಿ ಬದಲಾಗಿ ಇದೊಂದೆ ಅಲ್ಲದೇ ಯಾದಗಿರಿ, ಸುರುಪುರ, ಶಹಾಪುರ ಸ್ಥಿತಿಯೂ ಬದಲಾಗಿದೆ. ಭೂತದ ಬಾಯಲ್ಲಿ ಆಗಾಗ ಭಗವದ್ಗೀತೆ ಬರುವಂತೆ . ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಮಾತನಾಡುತ್ತಿದ್ದಾರೆ ಆದರೆ ಎಂದಾದರೂ ಕಾಂಗ್ರೆಸ್ ಸಾಲ ಮನ್ನಾ ಮಾಡಿದ ಉದಾಹರಣೆಯೇ ಇಲ್ಲ. ಮೈತ್ರಿ ಸರ್ಕಾರವಿದ್ದಾಗ ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದಾಗ ಪಟ್ಟುಬಿಡದೇ ರಾಷ್ಟ್ರೀಯ ಬ್ಯಾಂಕ್ , ಸಹಕಾರಿ ಬ್ಯಾಂಕ್ ಗಳ ಸೇರಿದಂತೆ ರಾಜ್ಯದ ರೈತರ 25 ಸಾವಿರ ಕೋಟಿ ಸಾಲಮನ್ನಾ ಮಾಡಲಾಯಿತು.
ಕಾಂಗ್ರೆಸ್ ಗ್ಯಾರೆಂಟಿಗಳು ತಾತ್ಕಾಲಿಕ ಗ್ಯಾರೆಂಟಿಗಳಾಗಿವೆ ಆದರೆ ಮೋದಿ ಗ್ಯಾರೆಂಟಿಯೇ ಪರ್ಮನೆಂಟ್ ಆಗಿವೆ.
ಈ ಗ್ಯಾರೆಂಟಿ ದಿಸೆಯಿಂದ ಇದುವರೆಗೆ ಒಂದೇ ಒಂದು ರುಪಾಯಿ ಅನುದಾನ ಕೊಡದೇ ರಾಜ್ಯ ಸರ್ಕಾರ ದಿವಾಳಿಯಾಗಿದೆ . ಅಂಗವಾಡಿ ಕಾರ್ಯಕರ್ತರು ಸ್ವತಃ ಹಣದಿಂದ ತರಕಾರಿ ತಂದು ಮಕ್ಕಳಿಗೆ ಊಟ ನೀಡುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಎಲ್ಲರ ಕೈಗೆ ಚೊಂಬು ನೀಡಿದೆ. ಮನೆ ಮನೆಗೆ ನೀರು ನೀಡುವ ಮೂಲಕ , ರಸ್ತೆಗಳ ಸುಧಾರಣೆ ಮಾಡುವ ಮೂಲಕ ಪರ್ಮನೆಂಟ್ ಗ್ಯಾರೆಂಟಿ ನೀಡಿದೆ ಈಗಾಗಿ ದೇಶದ ರಕ್ಷಣೆಗಾಗಿ ಮೋದಿಜಿಯವರನ್ನು ಬೆಂಬಲಿಸು ರಾಜಾ ಅಮರೇಶ್ವರ ನಾಯಕರನ್ನು ಗೆಲ್ಲಿಸಿ ಕಳಿಸಬೇಕಿದೆ ಎಂದರು.
ಈ ವೇಳೆ ದೇವದುರ್ಗದ ಶಾಸಕಿಯಾದ ಕರೆಮ್ಮ ಜಿ ನಾಯಕ್ ಮಾತನಾಡಿ ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಯವರು ತೀರ್ಮಾನಿಸಿದಂತೆ ಮೈತ್ರಿ ಧರ್ಮವನ್ನು ಪಾಲಿಸುವುದರಲ್ಲಿ ಅನುಮಾನವೇ ಇಲ್ಲ. ತಾಲೂಕಿನ ಶ್ರೇಯಸ್ಸಿಗಾಗಿ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುವೆ ಈ ಮೂಲಕ ರಾಜಾಅಮರೇಶ್ವರ ಗೆಲುವಿಗೆ ಕೆಲಸ ಮಾಡುವೆ ಎಂದರು.
ಜೆಡಿಎಸ್ ತಾಲೂಕಾಧ್ಯಕ್ಷರಾದ ಬುಡ್ಡನಗೌಡ ಪಾಟೀಲರು ಮಾತನಾಡಿ ದೇವೇಗೌಡರು ಮೋದಿಜಿಯವರನ್ನು ಪ್ರಧಾನಿಯನ್ನಾನಿಯನ್ನಾಗಿ ಮಾಡಲು ನಿಶ್ಚಯ ಮಾಡಿರುವ ಕಾರಣದಿಂದ ನಾವು ಕೂಡ ಒಂದುಗೂಡಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇಂದು ಬಂದಿದೆ. ಈಗಾಗಿ ನಾವು ಕೂಡ ಮೋದಿಜಿಯವರನ್ನು ಬೆಂಬಲಿಸಬೇಕಾಗಿದೆ.
ರಾಜಾ ಅಮರೇಶ್ವರ್ ನಾಯಕರು
ಯಾವುದೇ ರೀತಿಯ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವಂತಹ ಕೆಲಸ ಮಾಡದೇ ಸಂಸದರಾಗಿ 34 ಸಾವಿರ ಕೋಟಿ ಅನುದಾನ ತರುವ ಮೂಲಕ ಉತ್ತಮ ಕೆಲಸ ಮಾಡಿದಾರೆ. ದೇವದುರ್ಗದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರ ವಿರುದ್ಧ ಹೋರಾಟ ಮಾಡಿದ್ದೆವು ಅವರು ಕೂಡ ನಮ್ಮ ಜೊತೆಗೆ ಹೋಗುವಂತಹ ಸ್ಥಿತಿ ಇದ್ದರೂ ಕೂಡ ದೇಶದ ಭವಿಷ್ಯಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿಬಿಜೆಪಿ ಜಿಲ್ಲಾಧ್ಯಕ್ಷರಾದ ಶಾಸಕ ಎಸ್.ಶಿವರಾಜ್ ಪಾಟೀಲ್ , ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ.ವಿರುಪಾಕ್ಷಿ , ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ , ಜೆಡಿಎಸ್ ತಾಲೂಕು ಅಧ್ಯಕ್ಷರಾದ ಬುಡ್ಡನಗೌಡ ಜಾಗಟಗಲ್ , ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್.ಶಂಕ್ರಪ್ , ಮಾಜಿ ಶಾಸಕರಾದ ಗಂಗಾಧರ ನಾಯಕ, ಮಹಾಂತೇಶ್ ಪಾಟೀಲ್ ಅತ್ತನೂರು,ರಾಜಾ ರಾಮಚಂದ್ರ ನಾಯಕ್, ಶಿವಶಂಕರ್ ವಕೀಲರು, ಸಿದ್ಧಯ್ಯ ತಾತ ಮುಂಡರಗಿ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.