ರಾಯಚೂರು.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ್ವರನಾಯಕ ಇಂದು ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದ ಆಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದು, ಏ.೧೮ ರಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಆಗಮಿಸಿ ಮತ್ತೊಂದು ನಾಮಪತ್ರ ಸಲ್ಲಿಸುವದಾಗಿ ಹೇಳಿದರು.
೧೮ ರಂದು ನಾಮಪತ್ರ ಸಲ್ಲಿಸಲು ಕೇಂದ್ರ ಸಚಿವರಾಗಿದ್ದ ಎ.ನಾರಾಯಣಸ್ವಾಮಿ, ಜನಾರ್ಧನರೆಡ್ಡಿ ಸೇರಿದಂತೆ ಬಿಜೆಪಿ, ಜೆಡಿಎಸ್ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರಿಗೂ ಅಹ್ವಾನಿಸಲಾಗಿದೆ. ಮೊದಲ ಹಂತದ ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭವಾಗಿದ್ದರಿAದ ಪ್ರಚಾರಕ್ಕೆ ಆಗಮಿಸುವಭರವಸೆ ನೀಡಿದ್ದಾರೆ. ಇನ್ನೂ ಅನೇಕ ನಾಯಕರನ್ನು ಸಂಪರ್ಕಿಸುವಪ್ರಯತ್ನ ನಡೆಸಲಾಗುತ್ತಿದೆ.ಪಕ್ಷದ ಎಲ್ಲಾ ಮುಖಂಡರು,ಶಾಸಕರುಗಳ, ಕಾರ್ಯಕರ್ತರನ್ನು ಆಹ್ವಾನಿಸಿ ನಾಮಪತ್ರ ಸಲ್ಲಿಸುವದಾಗಿ ಹೇಳಿದರು.
ಈ ಸಂದರ್ಬದಲ್ಲಿ ನ್ಯಾಯವಾದಿ ರಾಘವೇಂದ್ರ ಚೂಡಾಮಣಿ, ಪುತ್ರ ರಾಜಾನವುಷ ವರುಷ, ಹುಲ್ಲೇಶ ಸಾಹುಕಾರ, ಸುಧೀರ ಕಸ್ಬೆ ಇದ್ದರು.
Megha News > Local News > ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ್ವರನಾಯಕ ನಾಮಪತ್ರ ಸಲ್ಲಿಕೆ: ೧೮ ರಂದು ಮತ್ತೊಂದು ನಾಮಪತ್ರ ಸಲ್ಲಿಕೆ
ಬಿಜೆಪಿ ಅಭ್ಯರ್ಥಿಯಾಗಿ ರಾಜಾ ಅಮರೇಶ್ವರನಾಯಕ ನಾಮಪತ್ರ ಸಲ್ಲಿಕೆ: ೧೮ ರಂದು ಮತ್ತೊಂದು ನಾಮಪತ್ರ ಸಲ್ಲಿಕೆ
Tayappa - Raichur15/04/2024
posted on
Leave a reply