Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಗ್ರಾಪಂ ವ್ಯಾಪ್ತಿಯ ಆಸ್ತಿ ಮಾನ್ಯೂವೆಲ್ ಸಮೀಕ್ಷೆ ತಂತ್ರಾಂಶದಲ್ಲಿ ಅಳವಡಿಸದ 179 ಗ್ರಾಪಂ ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್

ಗ್ರಾಪಂ ವ್ಯಾಪ್ತಿಯ ಆಸ್ತಿ ಮಾನ್ಯೂವೆಲ್ ಸಮೀಕ್ಷೆ ತಂತ್ರಾಂಶದಲ್ಲಿ ಅಳವಡಿಸದ 179 ಗ್ರಾಪಂ ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್

ರಾಯಚೂರು. ಜಿಲ್ಲೆಯವರು ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳನ್ನು ಮಾನ್ಯೂವೆಲ್ ಸಮೀಕ್ಷೆ ಮಾಡಿ ಮಾಡಿ ತಂತ್ರಾಂಶದಲ್ಲಿ ಅಳವಡಿಸಿದೇ ಇರುವ ಕುರಿತು ಎಲ್ಲಾ ಪಿಡಿಒಗಳಿಗೆ ತರಾಟೆಗೆ ತೆಗೆದುಕೊಂಡು, ನೋಟಿಸ್ ಜಾರಿ ಮಾಡಿ 2 ದಿನಗಳಲ್ಲಿ ಮಾಹಿತಿ ನೀಡದಿದ್ದರೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ ಸಿಇಒ ಪಾಂಡ್ವೆ ರಾಹುಲ್ ತುಕಾರಾಂ ಹೇಳಿದರು.

ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ, ಮತ್ತು ಪಿಡಿಒಗಳಿಗೆ ಸಭೆಯಲ್ಲಿ ತರಾಟೆಗೈದರು‌.
ಜಿಲ್ಲೆಯ 179 ಗ್ರಾಪಂಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸಮೀಕ್ಷೆ ನಡೆಸಿ ಬೇಕಾ ಬಿಟ್ಟಿಯಾಗಿ ತಂತ್ರಾಂಶದಲ್ಲಿ ಅಳವಡಿಸಿದ್ದನ್ನು ಕೆಂಡಾ ಮಂಡಲವಾದರು.
7 ದಿನದ ಹಿಂದೆ ಸಭೆ ಮಾಡಲು ಮಾಹಿತಿ ನೀಡಿ ದ್ದು, 7 ದಿನದಲ್ಲಿಯೂ ಸಹ ಆಸ್ತಿ ಮಾನ್ಯೂವಲ್ ಸಮೀಕ್ಷೆ ಅಳವಡಿಸದೇ ಇರುವ ಕುರಿತು ನೋಟಿ ಸ್ ಜಾರಿ ಮಾಡಿದರು. 2 ದಿನದಲ್ಲಿ ಸಮರ್ಪಕ ವಾಗಿ ಮಾಹಿತಿ ನೀಡದಿ ದ್ದರೆ ಕ್ರಮ ವಹಿಸಲಾಗು ತ್ತದೆ ಎಂದು ಎಚ್ಚರಿಕೆ ನೀಡಿದರು.
ಸಕಾಲದಲ್ಲಿ ಅರ್ಜಿಗಳ ವೀಲೇವಾರಿ ಕುರಿತು ಬಾಕಿ ಉಳಿಸಿಕೊಳ್ಳಲಾಗಿದೆ, ಮುಂದಿನ ಸಭೆಯೊಳಗೆ ಎಲ್ಲವೂ ಪೂರ್ಣಗೊಳಿಸಬೇಕು,
ಜಿಲ್ಲೆಯ ಎಲ್ಲಾ ಗ್ರಾಪಂಗಲ್ಲಿ ಘನತ್ಯಾಜ್ಯ ವೀಲೆವಾರಿ ಮಾಡಿ ಇಂದೆಡೆ ಸಂಗ್ರಹಿಸಬೇಕು, ಕಸ ವಿಲೇವಾರಿಗೆ ಮಾಡದೇ ಕುಂಟು ನೆಪ ಹೇಳಿಕೊಂಡು ಜೊತೆಗೆ ಘನತ್ಯಾಜ್ಯ ಸಂಗ್ರಹ ಶೆಡ್ ನಿರ್ಮಾಣ ಮಾಡಿದೇ ಇರುವ ಕುರಿತು ಒಂದು ವಾರದೊಳಗೆ ಪ್ರತಿ ಗ್ರಾಪಂಗಳಲ್ಲಿ ಕಸ ಸಂಗ್ರಹ ಮಾಡಬೇಕು, ಘನತ್ಯಾಜ್ಯ ಸಂಗ್ರಹ ಇಲ್ಲದಿದ್ದರೆ ತಾತ್ಕಾಲಿಕವಾಗಿ ಶೆಡ್ ನಿರ್ಮಾಣ ಮಾಡಿ ಸಂಗ್ರಹಿಸಬೇಕು, ಕುಂಟುನೆಪ ಹೇಳಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಘನತ್ಯಾಜ್ಯ ಮನೆ ಮನೆ ಸಂಗ್ರಹ ಮಾಡಲು ಮಹಿಳೆಯರಿಗೆ ವಾಹನ ತರಬೇತಿ ನೀಡಿದೆ, 108 ಗ್ರಾಪಂಗಲ್ಲಿ ಕೆಲಸ ನೀಡಿಲ್ಲ, ಕೇವಲ 69 ಗ್ರಾಪಂ ಗಳಿಗೆ ಮಾತ್ರ ನೀಡಲಾಗಿದೆ, ಯಾಕೆ ಕೆಲಸ ನೀಡಲ್ಲವೆಂದು ಮಾಹಿತಿ ನೀಡಲು ಸೂಚಿಸಿದರು.
ಮಹಿಳಾ ಚಾಲಕನಿಗೆ ಕಳೆದ 1 ವರ್ಷದಿಂದ ವೇತನ ನೀಡಿಲ್ಲ, ಉದ್ಬಾಳ ಗ್ರಾಪಂನಲ್ಲಿ 4 ತಿಂಗಳ ವೇತನ ನೀಡಿಲ್ಲ, ಜಾನೇಕಲ್ ನಲ್ಲಿ 4 ತಿಂಗಳ ವೇತನ ನೀಡಿಲ್ಲ, ನಕ್ಕುಂದಿ ಗ್ರಾಪಂ ನಲ್ಲಿ ವೇತನ ಪಾವತಿಸಿಲ್ಲ, ತಲೇಖಾನ್ ಗ್ರಾಪಂ ನಲ್ಲಿ 1 ವರ್ಷದಿಂದ ವೇತನ ನೀಡಲ್ಲ, ಸುಮಾರು 20 ರಿಂದ 30 ಗ್ರಾಪಂಗಲ್ಲಿ ಬಾಕಿ ವೇತನ ಪಾವತಿಸ ಬೇಕು, ನಿತ್ಯ ಗ್ರಾಮಗಳಲ್ಲಿ ಕಸ ಸಂಗ್ರಹಿಸಬೇಕು ಎಂದರು.
ತಾಪಂಗಳ ಇಒ ಗ್ರಾಪಂಗಳಿಗೆ ಬೇಟಿ ನೀಡಿ ಕಸ ಸಂಗ್ರಹ, ಘನತ್ಯಾಜ್ಯ ಘಟಕ ಇಲ್ಲದ ಕುರಿತು ಮಾಹಿತಿ ಪಡೆದು ಬಗೆ ಹರಿಸಬೇಕು ಎಂದು ತಿಳಿಸಿದರು.
ಎಲ್ಲಾ ಗ್ರಾಮ ಪಂಚಾಯತಿಗಳು ತೆರಿಗೆ ವಸೂಲಿ ಮಾಡಬೇಕು, ರಾಯಚೂರು ತಾಲೂಕಿನಲ್ಲಿ ಕೇವಲ ಶೇ 8 ರಷ್ಟು ಮಾತ್ರ ತೆರಿಗೆ ವಸೂಲಿ ಮಾಡಿದೆ, ಜಿಲ್ಲೆಯಲ್ಲಿ ಒಟ್ಟು 30 ರಷ್ಟು ತೆರಿಗೆ ಸಂಗ್ರಹ ಮಾಡಲು ಗುರಿ ನೀಡಿದೆ ಒಂದಕ್ಕಿ ದಾಡದೇ ತೆರಿಗೆ ಸಂಗ್ರಹ ಮಾಡದ ಕುರಿತು ಅತಿ ಕಡಿಮೆ ತೆರಿಗೆ ವಸೂಲಿ ಮಾಡಿದ ಜಿಲ್ಲೆಯ ಎಲ್ಲಾ ತಾಲೂಕಿನ ತಲಾ 5 ಗ್ರಾಪಂಗಳಿಗೆ ನೋಟಿಸ್ ಜಾರಿ ಮಾಡಿದರೆ ಒಂದು ವರ್ಷದಿಂದ ತೆರಿಗೆ ಸಂಗ್ರಹ ಮಾಡದ ಕುರಿತು ಉತ್ತರ ನೀಡಬೇಕು ತಿಳಿಸಿದರು.
ಕಸ ಸಂಗ್ರಹ ವಾಹನಗಳನ್ನು ಗ್ರಾಪಂ ಪಿಡಿಒ ನಿರ್ವಹಣೆ ಮಾಡಬೇಕು, ಡಿಸೇಲ್ ಗ್ರಾಪಂ ನಿಂದಲೇ ಹಾಕಿಸಬೇಕು, ವಾಹನ ಚಾಲಕರಲ್ಲ, ಯಾವುದೇ ಕಾರಣಕ್ಕೂ ಡಿಸೇಲ್ ಹಾಕಿಸಬೇಡಿ, ರಿಪೇರಿಯಾದರೂ ಗ್ರಾಪಂ ಪಿಡಿಒಗಳಿಗೆ ಹೊಣೆ ಎಂದರು‌
ಗ್ರಾಪಂಗಳ ವ್ಯಾಪ್ತಿಯಲ್ಲಿ ಬರುವ ಇಂಡಸ್ಟ್ರಿಗಳು ತೆರಿಗೆ ನೀಡಿಲ್ಲ ಮತ್ತು ಕಡಿಮೆ ತೆರಿಗೆ ನೀಡಿದ ಕುರಿತು ಎಲ್ಲಾ ಇಂಡಸ್ಟ್ರಿಗಳಿಗೆ ನೋಟಿಸ್ ನೀಡಲು ಸೂಚಿಸಿ ಕೋರ್ಟ್ ಮೂಲಕ ವಸೂಲಿ ಮಾಡಲು ತಿಳಿಸಿದರು.
ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ಬರಗಾಲ
ವಿದ್ದು ನರೇಗಾದಡಿ ಕೆಲಸ ನೀಡಲು ಗ್ರಾಪಂಗಳಿಗೆ ಸೂಚಿಸಲಾಗಿತ್ತು, ದೇವದುರ್ಗ ತಾಲೂಕಿನಲ್ಲಿ ನರೇಗಾದಡಿ ಕೆಲಸಕ್ಕೆ ಡಿಮ್ಯಾಂಡ್ ಇಲ್ಲವೆಂದು ಹೇಳಿದ್ದು ದೇವದುರ್ಗ ಇಒ ರಾಮರೆಡ್ಡಿ ವಿರುದ್ಧ ಕಿಡಿ ಕಾರಿದರು, ಬರಗಾಲದಲ್ಲಿ ಕೆಲಸಕ್ಕೆ ಡಿಮ್ಯಾಂಡ್ ಇಲ್ಲವೆಂದು ಹೇಳಿದ್ದು ಮಾಹಿತಿ ಕೊಡಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಜಿಪಂ ಯೋಜನಾ ನಿರ್ದೇಶಕ ಆಶಪ್ಪ ವಿ, ಟಿ.ರೋಣಿ ಸೇರಿದಂತೆ ತಾಪಂ ಇಒ, ಗ್ರಾಪಂ ಪಿಡಿಒಗಳು ಇದ್ದರು‌.

Megha News