ರಾಯಚೂರು. ಲೋಕಸಭೆ ಚುನಾವಣೆ ಹಿನ್ನೆ ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಜನರಲ್ಲಿ ಜಾಗೃತಿ ಮೂಡಿಸಲು ನಗರದ ವಿವಿಧ ವೃತ್ತದಲ್ಲಿ ಅರೆ ಸೇನಾಪಡೆ ಹಾಗೂ ಪೋಲಿಸ್ ಇಲಾಖೆ ಯಿಂದ ಪಥ ಸಂಚಲನ ನಡೆಸ ಲಾಯಿತು.
ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಿಂದ ಪಥ ಸಂಚಲನಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಚಾಲನೆ ನೀಡಿದರು.
ಅರೆಸೇನಾ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.
ಪಥ ಸಂಚಲನ ನಗರದ ಮಾರ್ಕೆಟ್ ಯಾರ್ಡ್ ವೃತ್ತದಿಂದ ಆರಂಭವಾಗಿ ಬಸವನಭಾವಿ ವೃತ್ತ, ಪಟೇಲ್ ವೃತ್ತ, ನೇತಾಜಿ ಸರ್ಕಲ್, ಸರಾಫ್ ಬಜಾರ್, ತೀನ್ ಕಂದಿಲ್, ಭಗತ್ ಸಿಂಗ್ ವೃತ್ತ, ಏಕ ಮಿನಾರ್, ಜಾಕೀರ್ ಹುಸೇನ್ ವೃತ್ತ, ಜೈಲ್ ರಸ್ತೆ, ನಗರಸಭೆ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತದ ವರೆಗೆ ನಡೆಸಲಾಯಿತು.
ಪಥಸಂಚಲನದಿಂದ ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿವಿಧ ಪೋಲಿಸ್ ಠಾಣೆಯ ಸಿಪಿಐ, ಪಿಎಸ್ಐ, ಎಎಸ್‌ಐ ಪೋಲಿಸ್ ಪೇದೆ, ಅರೆ ಸೇನಾ ಸಿಬ್ಬಂದಿಗಳು ಭಾಗವಹಿಸಿದ್ದರು.