ರಾಯಚೂರು. ಮುಡಾ ಪ್ರಕರಣದಲ್ಲಿ ಸಿಎಂ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ ಆದರೂ ಸಹ ಮುಡಾ ಪ್ರಕರಣದಲ್ಲಿ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ ಎಂದು
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ವ್ಯಂಗ್ಯವಾಡಿದರು
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಅವರ ಧರ್ಮ ಪತ್ನಿಯವರಿಗೆ ಲ್ಯಾಂಡ್ ಗಿಫ್ಟ್ ಬಂದಿದೆ, ಎಂದು ಸ್ಪಷ್ಟೀಕರಣ ನೀಡಿದ್ದಾರೆ, ಅದಕ್ಕೆ ಅಲ್ಟರನೇಟಿವ್ ಲ್ಯಾಂಡ್ ಕೊಡುವುದು ಕಾನೂನಲ್ಲೇ ಇದೆ, ಈ ಹಿಂದೆ ಅದನ್ನ ಕೊಟ್ಟಿರುವುದೇ ಬಿಜೆಪಿ ಸರ್ಕಾರದವರು, ಅದರಲ್ಲಿ ಹಗರಣ ಏನಾಗಿದೆ ಅಂತ ಹೇಳಲು ಬಿಜೆಪಿಯವರು ರೆಡಿಯಿಲ್ಲಾ ಎಂದರು.
ಅವರು ಪಾದಯಾತ್ರೆ ಯಾಕೆ ಮಾಡುತ್ತಿದ್ದಾರೆ ನನಗೆ ಗೊತ್ತಿಲ್ಲ, ಬಹುಶ ಅವರೆಲ್ಲಾ ಬಹಳ ದಿನದಿಂದ ವಾಕಿಂಗ್ ಮಾಡಿಲ್ಲ ಅನಿಸುತ್ತೆ ಎಂದು ನಗೆ ಚಟಾಕಿ ಹಾರಿಸಿದರು.
ಬಿಜೆಪಿ ಅವರಿಗೆ ನನ್ನ ಸಲಹೆ ಅಂದ್ರೆ ವಾಕಿಂಗ್ ಮಾಡಲಿ ಅವರ ಆರೋಗ್ಯ ಸುಧಾರಿಸುತ್ತೆ,
ಅವರಿಗೆ ವಾಕಿಂಗ್ ಮಾಡಲು ಆಗುತ್ತಿಲ್ಲ ಅನಿಸುತ್ತೆ ಈ ಮೂಲಕವಾದರೂ ಅವರ ಆರೋಗ್ಯ ಸುಧಾರಿಸಲಿ ಎಂದರು.
ವಿರೋಧ ಪಕ್ಷದಲ್ಲಿ ಅವರು ಇನ್ನೂ ನಾಲ್ಕು ವರ್ಷ ಇರಬೇಕಲ್ಲಾ, ಅಭ್ಯಾಸವಾಗಲಿ ಅಂತ ವ್ಯಂಗ್ಯವಾಡಿದರು.