Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics NewsState News

ಹುಲಿಯಾಗಿದ್ದ ಸಿದ್ದರಾಮಯ್ಯ ಇಲಿಯಾಗಿದ್ದಾರೆ; ಡಿಸೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ನಿರೀಕ್ಷೆ- ರಮೇಶ ಜಾರಕಿಹೊಳೆ

ಹುಲಿಯಾಗಿದ್ದ ಸಿದ್ದರಾಮಯ್ಯ ಇಲಿಯಾಗಿದ್ದಾರೆ; ಡಿಸೆಂಬರ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ನಿರೀಕ್ಷೆ- ರಮೇಶ ಜಾರಕಿಹೊಳೆ

ಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷದ ಬದಲಾವಣೆ ನಿರೀಕ್ಷೆ: ಪಕ್ಷದ ವಿರುದ್ದ
ರಾಯಚೂರು, ನ.೧೧ – ನಮ್ಮ ಹೋರಾಟ ಬಿಜೆಪಿ ವಿರುದ್ದವಲ್ಲ, ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಆಧಿಕಾರಕ್ಕೆ ತರುವ ಉದ್ದೇಶವಿದೆ. ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುವ ನಿರೀಕ್ಷೆಯಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳೆ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಬಿಜೆಪಿರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ಒಪ್ಪುವದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿ ಪಕ್ಷದ ವರಿಷ್ಟರಿಗೂ ತಿಳಿಸಲಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸವಿದ್ದು ಮುಂದಿನ ದಿನಗಳಲ್ಲಿ ಬದಲಾವಣೆಯಾಗುವವಿಶ್ವಾಸವಿದೆ ಎಂದರು. ಕೇಂದ್ರ ಮಾಜಿ ಸಚಿವ ಬಸನಗೌಡ ಯತ್ನಾಳ, ಮಾಜಿ ಸಂಸದ ಪ್ರತಾಪಸಿಂಹ ಸೇರಿ ಹಲವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರತಿ ಆರು ಜಿಲ್ಲೆಗಳಲ್ಲಿ ಒಂದು ತಂಡ ಪ್ರವಾಸ ಕೈಗೊಂಡು ಪಕ್ಷವನ್ನು ಮತ್ತಷ್ಟು ಸಂಘಟಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸರ್ಕಾರ ಬಹುಮತದಿಂದ ತರುವ ಪ್ರಯತ್ನ ನಡೆಸಲಾಗುತ್ತದೆ. ಪಕ್ಷದ ವಿರುದ್ದವಾಗಿ ನಡೆದುಕೊಳ್ಳುತ್ತಿಲ್ಲ.ಬದಲಾಗಿ ಪಕ್ಷದ ಸಂಘಟನೆಯನ್ನು ಬಲಪಡಿಸುವದು ನಮ್ಮ ಉದ್ದೇಶವೆಂದರು. ನಾವೇನು ಸಿಎಂ ಆಗಬೇಕು, ಉನ್ನತ ಹುದ್ದೆ ಬೇಕೆನ್ನುವ ಬೇಡಿಕೆಯಿಲ್ಲ. ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನ ನಮ್ಮದಾಗಿದೆ ಎಂದರು.
ವಕ್ಫ ವಿಷಯದಲ್ಲಿ ಮುಖ್ಯಮಂತ್ರಿ ಬರೆದಿದರುವ ಕಣ್ಣೋರಿಸುವ ತಂತ್ರವಷ್ಟೆ. ಈಗಾಗಲೇ ಕಂದಾಯ ದಾಖಲೆಗಳಲ್ಲಿ ವಕ್ಫವೆಂದು ನಮೂದಿಸಿಲಾಗಿದೆ. ಸಿಎಂ ಆದೇಶ ತಾತ್ಕಾಲಿಕವಷ್ಟೇ, ಶಾಶ್ವತ ಪರಿಹಾರವಲ್ಲ. ಕೇಂದ್ರ ಸರ್ಕಾರ ವಕ್ಫ ಕಾಯ್ದೆಯ ಕುರಿತಂತೆ ಸಮಿತಿಯನ್ನು ರಚಿಸಿದೆ. ಸಮಿತಿಗಳು ಮಾಹಿತಿಯನ್ನು ನೀಡಲಾಗಿದೆ. ಕೇಂದ್ರ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದೆ. ರೈತರು, ಮಠ,ಮಂದಿರಗಳ ಆಸ್ತಿಯನ್ನು ವಕ್ಫ ಎಂದು ನಮೂದಿಸಿರುವದನ್ನು ರದ್ದುಗೊಳಿಸಬೇಕೆಂದರು. ಸಿದ್ದರಾಮಯ್ಯ ಈ ಮೊದಲು ಹುಲಿಯಾಗಿದ್ದರು,ಆದರೀಗ ಇಲಿಯಾಗಿದ್ದಾರೆ. ಅವರ ಪರಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತದೆ .ಯಾವುದೇ ಜಾತಿ,ಧರ್ಮದ ಪರವಾಗಿ ಇಲ್ಲದ ಸರ್ವ ಜನಾಂಗದ ಅಭಿವೃದ್ದಿ ಉದ್ದೇಶ ಹೊಂದಿದವರು ಇಂದು ಒಂದು ಧರ್ಮದವರ ಪರವಾಗಿ ಮಾತನಾಡುತ್ತಿದ್ದಾರೆ. ಸದನದಲ್ಲಿ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಸಿಎಂ ಹೇಳಿರುವದು ಈಗ ಕ್ರಮವಾಗುತ್ತದೆ ಎಂಬ ಭರವಸೆಯೂ ಇಲ್ಲ. ಸಚಿವ ಲಕ್ಷಿö್ಮÃಹೆಬ್ಬಾಳಕರ ಇವರ ಆಪ್ತ ಸೇರಿದಂತೆ ಹಣಕ್ಕಾಗಿ ಪೀಡಿಸಿದ್ದರಿಂದ ಎಫ್‌ಡಿಎ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗಲೂ ಸಿಎಂ ಬೇಜವಬ್ದಾರಿ ಹೇಳಿಕೆ ನೀಡಿದ್ದರು. ಈಗಲೂ ಅಷ್ಟೇ ಸಚಿವರ ರಕ್ಷಣೆ ನಡೆಯುತ್ತಿದೆ ಹೊರತು ಬೇರನೂ ಆಗುತ್ತಿಲ್ಲ.
ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವದರಲ್ಲಿ ಅನುಮಾನವಿಲ್ಲ. ಪಕ್ಷದಮುಖಂಡರುಗಳು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.
ಈ ಸಂದರ್ಬದಲ್ಲಿ ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಉಟ್ಕೂರು, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಸುಧಾಕರ, ಬಂಡೇಶ ವಲ್ಕಂದಿನ್ನಿ, ಕೊಟ್ರೇಶಪ್ಪ ಕೋರಿ, ಶರಣಗೌಡ ಮದರಕಲ್ ಸೇರಿ ಅನೇಕರಿದ್ದರು.

Megha News