Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Crime NewsNational News

ನಟ ಸಲ್ಮಾನ್ ಖಾನ್ ಬೆದರಿಕೆ ಆರೋಪ:ಆತಂಕದಲ್ಲಿ ಬಂಧಿತ ಯವಕ ಸೋಹೆಲ್ ಪಾಷಾ ಕುಟುಂಬ

ನಟ ಸಲ್ಮಾನ್ ಖಾನ್ ಬೆದರಿಕೆ ಆರೋಪ:ಆತಂಕದಲ್ಲಿ ಬಂಧಿತ ಯವಕ ಸೋಹೆಲ್ ಪಾಷಾ ಕುಟುಂಬ

ರಾಯಚೂರು,ನ.೧೩-ಖ್ಯಾತ ಚಲನಚಿತ್ರ ನಟ ಸಲ್ಮಾನ್ ಖಾನ್‌ರಿಗೆ ಇನ್‌ಸ್ಟಾ ಗ್ರಾಂ ಮೂಲಕ ಬೆದರಿಕೆ ಆರೋಪದ ಮೇಲೆ ಬಂಧಿತನಾಗಿರುವ ಮಾನವಿ ಪಟ್ಟಣದ ನಿವಾಸಿ ಸೋಹಲ್ ಪಾಷಾ ಪಾಲಕರು ಬೆಚ್ಚಿ ಬೀಳುವಂತಾಗಿ ಕಣ್ಣೀರಲ್ಲಿ ಕೈ ತೊಳೆದಕೊಳ್ಳುವಂತಾಗಿದ
ಮಾನವಿ ಪಟ್ಟಣದ ವಾರ್ಡ ೫ ರ ಖಾದ್ರಿ ಫಂಕ್ಷನ್ ಹಾಲ್ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದ ದಂಪತಿಗಳ ಎರಡನೇ ಮಗನಾಗಿರುವ ಸೋಹಲ್ ಪಾಷಾ ವೃತ್ತಿಯಿಂದ ಗ್ಯಾರೇಜ್ ಕೆಲಸ ಮಾಡಿ ನಂತರ ಬಿಟ್ಟು ಟೈರ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ. ಕುಚೇಷ್ಟೆಗೆ ಗೆಳೆಯನ ಮೊಬೈಲ್‌ನಿಂದ ಹಾಡಿನ ಮೂಲಕ ನಟ ಸಲ್ಮಾನ್ ಖಾನೆ ಬೆದರಿಕೆ ಹಾಕಿರುವ ಆರೋಪದ ಮೇಲೆ ವರ್ಲಿ ಪೊಲೀಸರು ಮಾನವಿ ಆಗಮಿಸಿ ವಶಕ್ಕೆ ಪಡೆದಿದ್ದಾರೆ. ಆದರೆ ತಂದೆ ತಾಯಿಗೆ ಮಗನ ಮೇಲೆ ವಿಶ್ವಾಸವಿದೆ. ಮೊಬೈಲ್ ಬಳಕೆಯಿಂದ ಬೆದರಿಕೆ ಹಾಕಿರುವ ವಿಷಯವನ್ನು ಪಾಲಕರು ಅಲ್ಲಗಳೆದಿದ್ದಾರೆ. ಏನಾಗಿದೆಯೋ ಗೊತ್ತಿಲ್ಲ. ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುವ ನಮಗೆ ಘಟನೆಯಿಂದ ಅಘಾತವಾಗಿದೆ ಎನ್ನುತ್ತಾರೆ ಪಾಲಕರು.
ಘಟನೆಯಿಂದ ವಿಚಲಿತರಾಗಿರುವ ತಂದೆತಾಯಿಗಳು ಕಣ್ಣೀರಿಡುತ್ತಿದ್ದಾರೆ. ಯಾರನ್ನು ಸಂಪರ್ಕಿಸಬೇಕೆನ್ನುವ ಮಾಹಿತಿಯೂ ಇಲ್ಲದೇ ಆತಂಕಗೊAಡಿದ್ದಾರೆ. ಹಾಡು ಹಾಗೂ ಸಂಗೀತ ಪ್ರೇಮಿಯಾಗಿರುವ ಸೋಹಲ್ ಪಾಷಾ ಸಲ್ಮಾನ್ ಖಾನ್ ಚಿತ್ರಕ್ಕೆ ಗೀತರಚನೆಯಾಗಬೇಕೆನ್ನುವ ಬಯಕೆಯಿಂದ ಇನಾಸ್ಟಾç ಗ್ರಾಮ್ ಮೂಲಕ ಬೆದರಿಕೆ ಒಡ್ಡಿರದನ್ನು ಪತ್ತೆ ಹಚ್ಚಿದ ಮುಂಬೈನ ವರ್ಲಿ ಪೊಲೀಸರು ಮೊಬೈಲ್ ಲೋಕಷನ್ ಮೇಲೆ ಮಾನವಿಗೆ ಆಗಮಿಸಿ ವಶಕ್ಕೆ ಪಡೆದಿದ್ದಾರೆ. ಆದರೆ ಕುಟುಂಬದವರು ಘಟನೆಯಿಂದ ವಿಚಲಿತರಾಗಿದ್ದಾರೆ. ಯಾವುದೇ ದುರುದ್ದೇಶ ಇಲ್ಲದೇ ಇರುವ ಸೋಹೆಲ್ ಪಾಷಾ ಬಿಡುಗಡೆಗೊಳಿಸಬೇಕೆಂದು ಪಾಲಕರು ಅಂಗಲಾಚಿದ್ದಾರೆ.
ಆದರೆ ಸೋಹೆಲ್ ಪಾಷಾ ಮಾನವಿ ತಾಲೂಕಿನ ಚಿಕಪರ್ವಿ ಗ್ರಾಮದ ವೆಂಕಟೆಶ ನಾರಾಯಣ ಮೊಬೈಲ್ ಪಡೆದು ನವಂಬರ್ ೩ ರಂದು ಮಾನವಿ ಪಟ್ಟಣದ ಉದ್ಯಾವನದ ಹತ್ತಿರ ಪೋನ್ ಕರೆ ಮಾಡಲು ಮೊಬೈಲ್ ನೀಡುವಂತೆ ಪಡೆದು ಇಂಟರ್ ನೆಟ್ ಡಾಟಾ ಮೂಲಕ ತನ್ನ ಫೋನ್‌ನಲ್ಲಿ ವಾಟ್ಸ್ಪ್ ಆಪ್ ಹಾಕಿಕೊಂಡು ಹೆದರಿಕೆ ಹಾಕಿರುವದನ್ನು ಮುಂಬೈನಿAದ ಆಗಮಿಸಿದ್ದ ಪೊಲೀಸರು ಪಾಲಕರಿಗೆ ಹೇಳಿದ್ದಾರೆ. ಮುಂಬೈ ಪೊಲೀಸರು ಆರೋಪಿ ಸೋಹೆಲ್ ಪಾಷಾನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪೊಲೀಸ್ ವಶಕ್ಕೆ ನೀಡಲಾಗಿದೆ ಎಂದು ಹೇಳಲಾಗಿದೆ.

Megha News