ರಾಯಚೂರು:- ಹಿಂದೂ ಧರ್ಮದ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಯಲು ಪುರಾಣ-ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಸೋಮವಾರಪೇಟೆ ಹಿರೇಮಠ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಅವರಿಂದು ನಗರದ ಎನ್.ಜಿ.ಓ ಕಾಲೋನಿಯ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಸೇವಾ ಸಮಿತಿಯಿಂದ ಆಯೋಜನ ಮಾಡಿದ್ದ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪ್ರವಚನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ಪ್ರಸ್ತುತ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಅಳೆಯುತ್ತಿದೆ, ಇಂತಹ ಪುರಾಣ ಕಾರ್ಯಕ್ರಮ ಮಾಡುವುದರಿಂದ ಅದನ್ನು ಪುನಶ್ಚೇತನ ಮಾಡಲು ಸಾಧ್ಯ. ಪುರಾಣವನ್ನು ನಿಷ್ಠೆಯಿಂದ ಕೇಳಿದರೆ ನಮ್ಮ ಪಾಪ ಪರಿಹಾರವಾಗುತ್ತದೆ, ಮೈಯಿಗೆ ಆಂಟಿರುವಂತಹ ಕೆಸರನ್ನು ಹೇಗೆ ನೀರಿನಿಂದ ಶುದ್ಧ ಮಾಡಿಕೊಳ್ಳುತ್ತೇವೆ, ಅದೇ ರೀತಿ ನಮ್ಮ ಪಾಪ ಪರಿಹಾರ ಆಗಬೇಕಾದರೆ, ಪುರಾಣಗಳನ್ನು ಆಲಿಸಬೇಕು. ಧರ್ಮಕ್ಕಾಗಿ ಹೇಳಿ, ಧರ್ಮಕ್ಕಾಗಿ ಬಾಳಿ, ಧರ್ಮವೇ ನಮ್ಮ ಜೀವನವಾಗಲಿ. ಧರ್ಮ ಎಂದರೆ ಮತ್ತೊಬ್ಬರ ಮನಸ್ಸು ನೋಯಿಸದೇ ಇರುವುದು, ಮತ್ತೊಬ್ಬರ ಮನೆಯನ್ನು ಮುರಿಯದೆ ಇರುವುದೇ ಧರ್ಮ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣವು ಭಕ್ತಿ ಮಾರ್ಗವಾಗಿದೆ ಇದನ್ನು ಕೇಳಿ, ಅರ್ಥೈಸಿಕೊಂಡು ಭಕ್ತಿ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ತಿಳಿಸಿದರು. ಹತ್ತು ದಿನಗಳ ಕಾಲ ಹೇಮರೆಡ್ಡಿ ಮಲ್ಲಮ್ಮ ಅವರ ಪುರಾಣವನ್ನು ಪುರಾಣವ ವಾಚನಕಾರರು ವೇದಮೂರ್ತಿ ಮಲ್ಲಯ್ಯ ಶಾಸ್ತ್ರಿಗಳು ತಮ್ಮ ತಂಡದೊಂದಿಗೆ ನಡೆಸಿಕೊಡಲಿದ್ದಾರೆ, ಇಂದು ಪುರಾಣದ ಪ್ರಾಸವಿಕವಾಗಿ ನೋಡಿದು, ಪುರಾಣವನ್ನು ಯಾವ ರೀತಿ ಆಲಿಸಬೇಕು, ಪುರಾಣದಿಂದ ದೊರೆಯುವಂತಹ ಭಕ್ತಿಯ ಬಗ್ಗೆ ತಿಳಿಸಿದರು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷ ಅಮರೇಗೌಡ ಹಂಚಿನಾಳ ವಹಿಸಿಕೊಂಡಿದ್ದರು. ಸೇವಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ವೇದಿಕೆಯಲ್ಲಿ ಅಲಂಕರಿಸಿದ್ದರು. ನಿರೂಪಣೆ ಮಲ್ಲಿಕಾರ್ಜುನ ನಾಡಗೌಡ, ಸ್ವಾಗತ ಮಂಜುನಾಥ ಪಿ ನಡೆಸಿದರು. ಸಕಲ ಬಡಾವಣೆಯ ಭಕ್ತಾದಿಗಳು ಭಾಗವಹಿಸಿದ್ದರು.
Megha News > Local News > ಸಂಸ್ಕೃತಿ ಮತ್ತು ಸಂಸ್ಕಾರ ಉಳಿಯಲು ಪುರಾಣ-ಪ್ರವಚನಗಳು ನಡೆಯಬೇಕು- ಶ್ರೀ ರಾಚೋಟಿವೀರ ಶಿವಾಚಾರ್ಯರು