ರಾಯಚೂರು. ಶಕ್ತಿನಗರ ಮತ್ತು ಕಾಡ್ಲೂರು ರಸ್ತೆಯುದ್ದಕ್ಕೂ ಬೂದಿ ಲಾರಿಗಗಳು ಸೇರಿದಂತೆ ವಿವಿಧ ವಾಹನಗಳು ಅಡ್ಡಾದಿಡ್ಡಿ ನಿಲ್ಲಿಸುತ್ತಿರು ವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ, ವಿದ್ಯಾರ್ಥಿಗಳಿಗೆ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಶಕ್ತಿನಗರದಿಂದ ಅರಷಿಣಗಿಗೆ ಹೋಗುವ ರಸ್ತೆಯಲ್ಲಿ ಹಾರುಬೂದಿ ಸಾಗಿಸುತ್ತಿರುವ ಭಾರಿ ವಾಹನಗಳು ಸಂಚಾರ ದಟ್ಟಣೆಯಿಂದ ಕಾಡ್ಲೂರು, ಕರೆಕಲ್, ರಂಗಾಪುರು, ಗುರ್ಜಾ ಪುರು, ತಿಮ್ಮಾಪುರು ಅರಷಿಣಗಿ ಮತ್ತು ವಡಗೇರ ತಾಲೂಕಿನ ವಿವಿದ ಗ್ರಾಮಗಳಿಗೆ ಹಾಗೂ ದೇವ ದುರ್ಗ ತಾಲೂಕಿನ ವಿವಿದ ಗ್ರಾಮಗಳಿಗೆ ಸಂಚರಿ ಸಲು ನಿತ್ಯ ತೊಂದರೆಯಾಗುತ್ತಿದೆ.
ಈ ಭಾಗದ ಹಳ್ಳಿಗಳಿಂದ ಶಕ್ತಿನಗರಕ್ಕೆ ಹಾಗೂ ರಾಯಚೂರಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೋಗುತ್ತಿದ್ದು, ನಿತ್ಯ ತೊಂದರೆಯಾಗುತ್ತಿ ರುವುದರಿಂದ ಶಾಲಾ ಕಾಲೇಜುಗಳಿಗೆ ತಡವಾಗಿ ಹೋಗಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ,
8 ರಿಂದ 10 ಗ್ರಾಮಗಳಿ ಇದೇ ರಸ್ತೆಯನ್ನು ಅವಲಂಭಿಸಿದ್ದು, ಸಾರ್ವಜನಿಕರು, ವಿದ್ಯಾರ್ಥಿ ಗಳು, ಆಸ್ಪತ್ರೆಗೆ ಹೋಗುವ ರೋಗಿಗಳು, ವಿವಿದ ಕೆಲಸಗಳಿಗೆ ಶಕ್ತಿನಗರ ಮತ್ತು ರಾಯಚೂರು ಹೋಗಲು ತುಂಬಾ ತೊಂದರೆ ಅನುಭವಿ ಸುತ್ತಿದ್ದಾರೆ.
ಬೂದಿ ಸಾಗಿಸುವ ವಾಹನಗಳು ಅಡ್ಡ ದಿಡ್ಡಿ ನಿಲುಗಡೆಯಾಗಿ ಟ್ರಾಫಿಕ್ ಜಾಮ್ ಆಗಿ ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಸಾರಿಗೆ ಬಸ್ ಸಂಚರಿಸಲು ತೊಂದರೆಯಾಗುತ್ತಿದೆ, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕ್ರಮವಹಿಸಬೇಕಾಗಿದೆ.