ರಾಯಚೂರು.ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ತಡೆಯಲು ನಗರಸಭೆ ಕಾರ್ಯಾಚರಣೆ ಪ್ರಾರಂಭಿಸಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ಬೀದಿ ನಾಯಿಗಳನ್ನು ಹಿಡಿಯುವ ಕೆಲಸ ತಜ್ಞರ ತಂಡ ಕಾರ್ಯಾಚರಣೆಯಲ್ಲಿ ತೊಡಗಿದೆ.
ಬೀದಿನಾಯಿಗಳ ಕಾರ್ಯಚರಣೆ ಕುರಿತು ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತ ಸಿದ್ದಯ್ಯ ಹೀರೆಮಠ ಬೀದಿನಾಯಿಗಳ ಹಿಡಿಯಲು ಟೆಂಡರ ಕರೆಯಲಾಗಿದೆ.೧೮೦೦೦ ನಾಯಿಗಳನ್ನು ಹಿಡಿದು ಸಂತಾನ ಹರಣ ಲಸಿಕೆ ಹಾಕಿ ಬಿಡಲಾಗುತ್ತದೆ. ನಗರದಲ್ಲಿ ೮ ಸಾವಿರ ಬೀದಿಗಳಿವೆ ಎಂದು ಅಂದಾಜಿಸಲಾಗಿದೆ.ಹಂತ ಹಂತವಾಗಿ ಲಸಿಕೆ ಹಾಕಿ ಬೀದಿ ನಾಯಿಗಳ ಹಾವಳಿ ತಡೆಯಲಾಗುತ್ತದೆ ಎಂದರು.ಬೀದಿ ನಾಯಿಗಳ ಕಾರ್ಯಚರಣೆಯಲ್ಲಿ ನಗರಸಭೆ ನೈರ್ಮಲ್ಯ ನಿರೀಕ್ಷಕರು, ಕಾರ್ಯಾಚರಣೆಯ ಸಿಬ್ಬಂದಿಗಳಿದ್ದರು.