Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಎನ್ಆರ್‌ಬಿಸಿ ಬಲದಂಡೆ 5ಎ ಉಪ ಕಾಲುವೆ ಯೋಜನೆ ಅನುಷ್ಠಾನ ಮಾಡದಿದ್ದಲ್ಲಿ ಹೋರಾಟ

ಎನ್ಆರ್‌ಬಿಸಿ ಬಲದಂಡೆ 5ಎ ಉಪ ಕಾಲುವೆ ಯೋಜನೆ ಅನುಷ್ಠಾನ ಮಾಡದಿದ್ದಲ್ಲಿ ಹೋರಾಟ

ಮಸ್ಕಿ. ನಾರಾಯಣಪುರ ಬಲದಂಡೆಯ 5(ಎ) ಉಪ ಕಾಲುವೆ ಯೋಜನೆ ಅನುಷ್ಠಾನ ಮಾಡದಿದ್ದರೆ ಬಿಜೆಪಿಯಿಂದ ಬೃಹತ್‌ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಎಚ್ಚರಿಸಿದ್ದಾರೆ.

ಮಾದ್ಯಮವದವರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಅನುಷ್ಠಾನ ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ಯೋಜನೆ ಜಾರಿ ಮಾಡುವುದಾಗಿ ಕಾಂಗ್ರೆಸ್‌ ಸುಳ್ಳು ಭರವಸೆ ನೀಡಿತ್ತು.

ಇದೀಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 6 ತಿಂಗಳಾಗಿವೆ. ಅಧಿವೇಶನದಲ್ಲಿ ಯೋಜನೆಯ ಕುರಿತು ಜಲಸಂಪನ್ಮೂಲ ಸಚಿವ ನೀಡಿದ ಉತ್ತರ ಕಾಂಗ್ರೆಸ್‌ ಬಣ್ಣವನ್ನು ಬಯಲು ಮಾಡಿದೆ’ ಎಂದು ಟೀಇಸಿದರು.

‘5(ಎ) ಕಾಲುವೆ ಯೋಜನೆ ಜಾರಿ ಕುರಿತು ಜನರಿಗೆ ನೀಡಿದ್ದ ಮಾತನ್ನು ಕಾಂಗ್ರೆಸ್‌ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ ಎಂದರು.

‘ನೀರಾವರಿ ವಂಚಿತ ಗ್ರಾಮಗಳಿಗೆ ವಟಗಲ್ ಬಸವೇಶ್ವರ ಏತ ಹರಿ ನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾತಿ ಕೊಡಿಸಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ರದ್ಧು ಮಾಡಿತು. ಈಗ ಈ ರೈತರಿಗೆ ಶಾಶ್ವತ ನೀರಿನಿಂದ ವಂಚಿತ ಮಾಡಿದೆ’ ಎಂದು ದೂರಿದರು.

Megha News