ರಾಯಚೂರು : ಪರಿಶಿಷ್ಟರಲ್ಲಿಯೇ ಅತಿಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ಕುರಿತು ಸುಪ್ರೀಂಕೋಟ್೯ ನೀಡಿರುವ ತೀರ್ಪು ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ನಗರ ಶಾಸಕರಾದ ಡಾ.ಎಸ್.ಶಿವರಾಜ್ ಪಾಟೀಲರು ಸಂತಸ ವ್ಯಕ್ತಪಡಿಸಿದರು.
ದಲಿತ ಹೋರಾಟಗಾರರೊಂದಿಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಈ ವೇಳೆ ಮಾತನಾಡಿದವರು
ಹಲವು ದಶಕಗಳಿಂದ ಒಳಮೀಸಲಾತಿಗಾಗಿ ಹೋರಾಟಮಾಡಿದ ಮಾದಿಗ ಸಮುದಾಯದ ನಾಯಕರಿಗೆ ಒಲಿದ ಜಯವಾಗಿದ್ದು ಈ ತೀರ್ಪುನಿಂದಾಗಿ ಇಂದೇ ದೇಶಕ್ಕ ಸ್ವಾತಂತ್ರ್ಯ ದೊರಕಂತಹ ವಾತಾವರಣವನ್ನು ಸೃಷ್ಟಿಮಾಡಿದೆ. ಒಳಮೀಸಲಾತಿಗಾಗಿ ಹೋರಾಟ ಮಾಡಿದ ನಾಯಕರ ಪ್ರತಿಫಲವೇ ಈ ತೀರ್ಪಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಎಂ.ವಿರುಪಾಕ್ಷಿ, ಮುಖಂಡರಾದ ರವೀಂದ್ರ ಜಲ್ದಾರ್, ಅಂಬಣ್ಣ ಅರೋಲಿಕರ್ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು