ರಾಯಚೂರು. ಕರ್ನಾಟಕ ಸರಕಾರದಿಂದ ಮಹತ್ವಾಕಾಂಕ್ಷಿ ಯೋಜನೆಯಾದ ಯುವ ನಿಧಿ ಯೋಜನೆಯನ್ನು ಈಗಾಗಲೇ ಘೋಷಿಸಲಾಗಿದ್ದು, ಸದರಿ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾದ ಯುವ ಅಭ್ಯರ್ಥಿಗಳಿಗೆ 6 ತಿಂಗಳ ಒಳಗಾಗಿ ಉದ್ಯೋಗಾವಕಾಶ ಲಭಿಸದಿದ್ದಲ್ಲಿ, ಅಂತಹ ಪದವೀಧರರಿಗೆ ಪ್ರತಿ ಮಾಹೆ ರೂ.3000/- ಹಾಗೂ ಡಿಪ್ಲೋಮಾ ಅಭ್ಯರ್ಥಿಗಳಿಗೆ ಪ್ರತಿ ಮಾಹೆ ರೂ.1500/-ಗಳ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ಅಥವಾ ಉದ್ಯೋಗ ದೊರಕುವವರೆಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.
ವಿದ್ಯಾಭ್ಯಾಸ ಮುಂದುವರೆಸಿರುವ ಅಥವಾ ಉದ್ಯೋಗದಲ್ಲಿ ತೊಡಗಿರುವ ಅಭ್ಯರ್ಥಿಗಳು ಈ ಯೋಜನೆಗೆ ಫಲಾನುಭವಿಗಳಾಗಲು ಅರ್ಹರಿರುವುದಿಲ್ಲ. ಯುವನಿಧಿ ಯೋಜನೆಯಡಿಯಲ್ಲಿ ನೊಂದಣ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, 2022-23ರಲ್ಲಿ ಪದವಿ/ಡಿಪ್ಲೋಮಾ ಉತ್ತೀರ್ಣರಾದ ಜಿಲ್ಲೆಯ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ, ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ, ಉಚಿತವಾಗಿ ಆನ್‌ಲೈನ್ ನೊಂದಣ ಯನ್ನು ಮಾಡಿಕೊಳ್ಳಬಹುದಾಗಿದೆ.
ಜಿಲ್ಲೆಯ ಎಲ್ಲಾ ಅರ್ಹ ಅಭ್ಯರ್ಥಿಗಳು ಯುವ ನಿಧಿ ಯೋಜನೆಯಡಿಯಲ್ಲಿ ನೊಂದಣ ಯನ್ನು ಪೂರ್ಣಗೊಳಿಸಿ ಯೋಜನೆಯ ಉಪಯೋಗವನ್ನು ಪಡೆಯಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣ ಸಂಖ್ಯೆ: 8073610442 /9880802184 ಅಥವಾ ಹೆಲ್ಪ್ಲೈನ್ ಸಂಖ್ಯೆ: 18005999918 ಗಳನ್ನು ಸಂಪರ್ಕಿಸಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.