Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ಪಾದಯಾತ್ರೆ ಹೊರಟಿದ್ದ ತಾಯಿ ಮಗಳಿಗೆ ಟಾಟಾಏಸ್‌ ವಾಹನ ಡಿಕ್ಕಿ, ತಾಯಿ ಭಾಗ್ಯಮ್ಮ ಸಾವು ಮಗಳಿಗೆ ಗಂಭೀರ ಗಾಯ

ಪಾದಯಾತ್ರೆ ಹೊರಟಿದ್ದ ತಾಯಿ ಮಗಳಿಗೆ ಟಾಟಾಏಸ್‌ ವಾಹನ ಡಿಕ್ಕಿ, ತಾಯಿ ಭಾಗ್ಯಮ್ಮ ಸಾವು ಮಗಳಿಗೆ ಗಂಭೀರ ಗಾಯ

ರಾಯಚೂರು: ಬೆಳ್ಳಂ ಬೆಳಗ್ಗೆ ಪಾದಯಾತ್ರೆ ಹೊರಟಿದ್ದ ತಾಯಿ-ಮಗಳಿಗೆ ಟಾಟಾಏಸ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮೃತಪಟ್ಟಿದ್ದು, ಮಗಳಿಗೆ ಗಾಯಗಳಾಗಿರುವ ಘಟನೆ ಲಿಂಗಸೂಗುರು ತಾಲೂಕಿನ ನಾಗಲಾಪೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮೃತಪಟ್ಟವರು ವ್ಯಾಸ ನಂದಿಹಾಳ ಗ್ರಾಮದ ನಿವಾಸಿ ಭಾಗ್ಯಮ್ಮ (35) ಎಂದು ತಿಳಿದು ಬಂದಿದೆ. ಭಾಗ್ಯಮ್ಮಳ ಮಗಳ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಛತ್ತರದ ಹನುಮಾನ್ ದೇವಸ್ಥಾನಕ್ಕೆ ತಾಯಿ ಮಗಳು ಇಬ್ಬರೂ ಪಾದಯಾತ್ರೆ ಹೊರಟಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ವಾಹನವು ಇವರಿಬ್ಬರಿಗೂ ಡಕ್ಕಿ ಹೊಡಿದಿದೆ, ಕೆಳಗೆ ಬಿದ್ದು ತಾಯಿ ಭಾಗ್ಯಮ್ಮ ಮೃತಪಟ್ಟರೆ, ಮಗಳಿಗೆ ಗಂಭೀರ ಗಾಯಗೊಂಡಿದ್ದಾರೆ.
ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News